ಹುಬ್ಬಳ್ಳಿ/ಧಾರವಾಡ: ಹುಬ್ಬಳ್ಳಿ–ಧಾರವಾಡ ಸೇರಿ ಜಿಲ್ಲೆಯಾದ್ಯಂತ ಭಾನುವಾರ ಸಂಜೆ ಗುಡುಗು ಸಿಡಿಲಿನೊಂದಿಗೆ ಜೋರು ಮಳೆ ಸುರಿಯಿತು. ಬಿಸಿಲಿನ ತಾಪದಿಂದ ಬಳಲಿದ್ದ ಜನರಿಗೆ ತುಸು ನಿರಾಳ ತಂದಿತು.

ಮಧ್ಯಾಹ್ನ 3ಕ್ಕೆ ಗುಡುಗು ಸಿಡಿಲಿನೊಂದಿಗೆ ಆರಂಭವಾದ ಮಳೆಯು ರಾತ್ರಿ ತನಕ ಬಿಟ್ಟು ಬಿಟ್ಟು ಸುರಿಯಿತು. ಹುಬ್ಬಳ್ಳಿಯ ರಾಧಾಕೃಷ್ಣ ನಗರ, ನೇಕಾರ ನಗರ, ದಾಜಿಬಾನ್ ಪೇಟೆ, ಪೆಂಡಾರ್ ಗಲ್ಲಿ ಸೇರಿದಂತೆ ಮೂರು ಸಾವಿರ ಮಠದ ಸುತ್ತಮುತ್ತಲಿನ ರಸ್ತೆಗಳಲ್ಲಿ ಮಳೆ ನೀರಿನೊಂದಿಗೆ ಚರಂಡಿಯ ಕೊಳಚೆ ನೀರೂ ಹರಿಯಿತು.

ಭಾರಿ ಗಾಳಿಯಿಂದಾಗಿ ಹುಬ್ಬಳ್ಳಿಯ ಗೋಕುಲ ರಸ್ತೆಯ ಮಂಜುನಾಥ ನಗರ, ನವನಗರ, ಆನಂದ ನಗರದ ಘೋಡಕೆ ಪ್ಲಾಟ್, ಶಿರೂರು ಪಾರ್ಕ್, ಜಗದೀಶ ನಗರ, ಮುಕುಂದ ನಗರ ಸೇರಿದಂತೆ ನಗರದ ವಿವಿಧಡೆ 30ಕ್ಕೂ ಹೆಚ್ಚು ಕಡೆ ಮರಗಳು ಧರೆಗುರುಳಿವೆ. ಮರ ಬಿದ್ದು ಹಲವೆಡೆ ಕಾರು, ಬೈಕ್ಗಳು ಜಖಂಗೊಂಡಿವೆ.

ಸ್ಟೇಷನ್ ರಸ್ತೆ ಹಾಗೂ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದ ರಸ್ತೆ ಸೇರಿದಂತೆ ನಗರದ ತುಗ್ಗು ಪ್ರದೇಶಗಳ ರಸ್ತೆಗಳಲ್ಲಿ ಮಳೆ ನೀರು ಜೋರಾಗಿಯೇ ಹರಿಯಿತು.

ವಿದ್ಯಾನಗರ, ಲ್ಯಾಮಿಂಗ್ಟನ್ ರಸ್ತೆ ಹಾಗೂ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಮಾರ್ಗದ ರಸ್ತೆಗಳಲ್ಲಿ ಮಳೆ ನೀರು ನಿಂತ ಪರಿಣಾಮ ವಾಹನಗಳ ಸಂಚಾರಕ್ಕೆ ತುಸು ಅಡಚಣೆ ಉಂಟಾಯಿತು. ವಾಹನ ಸವಾರರು ಪರದಾಡಿದರು.

ಹಳೇ ಹುಬ್ಬಳ್ಳಿಯ ಯಲ್ಲಾಪುರ ಓಣಿ, ಎಸ್.ಎಂ.ಕೃಷ್ಣ ನಗರ, ಹೆಗ್ಗೇರಿ ಗುಡಿ ಪ್ಲಾಟ್ನ ಬಸವನಗರ ಸೇರಿದಂತೆ ಹಳೇ ಹುಬ್ಬಳ್ಳಿಯ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯದೆ ಅಲ್ಲಲ್ಲಿ ನಿಂತಿತ್ತು. ಹುಬ್ಬಳ್ಳಿ–ಧಾರವಾಡ ನಡುವಿನ ಬಿಆರ್ಟಿಎಸ್ ಮಾರ್ಗ ಸೇರಿ ಮುಖ್ಯರಸ್ತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯಿತು. ನಗರದ ಕೆಲ ಬಡಾವಣೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವೂ ಆಗಿತ್ತು.

ಸಂಚಾರ ಸಮಸ್ಯೆ: ಧಾರವಾಡ, ಕುಂದಗೋಳ, ಅಳ್ನಾವರ, ಗುಡಿಗೇರಿ, ಉಪ್ಪಿನಬೆಟಗೇರಿ ಹಾಗೂ ನವಲಗುಂದ ಪಟ್ಟಣದ ಸುತ್ತಮುತ್ತಲೂ ಮಳೆ ಸುರಿಯಿತು. ಧಾರವಾಡ ನಗರದ ಮಾಳಮಡ್ಡಿಯ ಗೌಳಿಗಲ್ಲಿ ಹಾಗೂ ವಿವೇಕಾನಂದ ವೃತ್ತದಲ್ಲಿ ಮರಗಳ ಟೊಂಗೆಗಳು ಮುರಿದು ಬಿದ್ದು, ವಾಹನಗಳ ಸಂಚಾರಕ್ಕೆ ಸಮಸ್ಯೆ ಆಯಿತು.

ಧಾರವಾಡದ ಎನ್ಟಿಟಿಎಫ್, ಕೆಎಂಎಫ್, ನವಲೂರ ಬಳಿಯ ಬಿಆರ್ಟಿಎಸ್ ಮಾರ್ಗದ ರಸ್ತೆ, ಎಸ್ಡಿಎಂ ವೈದ್ಯಕೀಯ ಕಾಲೇಜು ಮುಂಭಾಗದ ರಸ್ತೆ ಸಹಿತ ವಿವಿಧೆಡೆಗಳಲ್ಲಿ ನೀರು ಆವರಿಸಿತ್ತು. ಆಸ್ಪತ್ರೆಗೆ ಹೋಗುವ ಜನರಿಗೆ ತೀವ್ರ ತೊಂದರೆಯಾಯಿತು.

ಕೋಟೂರ, ಶಿಂಗನಹಳ್ಳಿ, ಬೇಲೂರು, ಮುಮ್ಮಿಗಟ್ಟಿ, ಮನಸೂರು, ಬಾಡ, ಸಲಕಿನಕೊಪ್ಪ ಹಾಗೂ ಸುತ್ತಲಿನ ಪ್ರದೇಶದಲ್ಲಿಯೂ ಮಳೆ ಸುರಿಯಿತು. ಕುಂದಗೋಳ ತಾಲ್ಲೂಕಿನ ಕಟಪಟ್ಟಿ, ಅಲ್ಲಾಪೂರ ಗ್ರಾಮಗಳ ಸುತ್ತಮುತ್ತಲೂ ಮಳೆಯಾಯಿತು. ಕಡಪಟ್ಟಿ ಗ್ರಾಮದ ಚನ್ನಬಸಪ್ಪ ಹಾಲೋಳ್ಳಿ ಎಂಬುವವರು ಮನೆ ಹಿತ್ತಲಿನ ತೆಂಗಿನ ಮರಕ್ಕೆ ಸಿಡಿಲು ಬಡಿದು ಮರಕ್ಕೆ ಬೆಂಕಿ ಹೊತ್ತಿಕೊಂಡ ಘಟನೆಯೂ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-24-1063701663

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.