ಹುಬ್ಬಳ್ಳಿ: ‘ಇಂಡಿಯನ್ ಕಾಂಕ್ರೀಟ್ ಇನ್ಸ್ಟಿಟ್ಯೂಟ್ನ (ಐಸಿಐ) ಹುಬ್ಬಳ್ಳಿ ಧಾರವಾಡ ಕೇಂದ್ರದ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭವು ಏ.19ರಂದು ಸಂಜೆ 6.30ಕ್ಕೆ ನಡೆಯಲಿದೆ’ ಎಂದು ನೂತನ ಅಧ್ಯಕ್ಷ ಸುರೇಶ ಕಿರೇಸೂರ ಹೇಳಿದರು.

ಕೋಟಿ ಸ್ಟೀಲ್ಸ್ ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗರದ ಗೋಕುಲ ರಸ್ತೆಯ ಫರ್ನ್ ರೆಸಿಡೆನ್ಸಿಯಲ್ಲಿ ಸಮಾರಂಭ ನಡೆಯಲಿದ್ದು, ಐಸಿಐ ರಾಷ್ಟ್ರಮಟ್ಟದ ಅಧ್ಯಕ್ಷ ವಿ.ರಾಮಚಂದ್ರ ಹಾಗೂ ಕೋಟಿ ಸ್ಟೀಲ್ಸ್ ವ್ಯವಸ್ಥಾಪಕ ಪಾಲುದಾರ ರಾಹುಲ್ ಕೋಟಿ ಪಾಲ್ಗೊಳ್ಳಲಿದ್ದಾರೆ’ ಎಂದರು.

‘ಕಾರ್ಯದರ್ಶಿಯಾಗಿ ಆನಂದ ಹುಣಶ್ಯಾಳ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಿಜಯ ತೋಟಗೇರ, ಶ್ರೀಹರಿ ಕೆ.ಎಚ್., ಸುರೇಶ ಪಾಟೀಲ, ಉಮೇಶ ನೀಲಿ, ಎಂ.ಆರ್. ಪಾಟೀಲ, ಜಿ.ಎಸ್. ಅಂಗಡಿ, ಸಂತೋಷ ಅಂಚಟಗೇರಿ ಹಾಗೂ ರೂಪಾ ಎ.ಕೆ. ಆಯ್ಕೆ ಆಗಿದ್ದಾರೆ. ನೂತನ ಮಂಡಳಿಯ ಕಾರ್ಯಾವಧಿ 2028ರ ವರೆಗೂ ಇರಲಿದೆ’ ಎಂದು ಮಾಹಿತಿ ನೀಡಿದರು.

ರಾಹುಲ್ ಕೋಟಿ ಮಾತನಾಡಿ, ‘ಉತ್ತಮ ಬ್ರ್ಯಾಂಡ್ ಅಡಿ ಗುಣಮಟ್ಟದ ಕಬ್ಬಿಣದ ಸರಳುಗಳನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. ನಾವು ಮಾರಾಟ ಮಾಡುವ ಪ್ರತಿ ಟನ್ ಕಬ್ಬಿಣಕ್ಕೆ ಪ್ರತಿಯಾಗಿ ಒಂದು ಗಿಡ ನೆಡುವುದಲ್ಲದೆ, ಅಗತ್ಯವಿರುವವರಿಗೆ ಊಟ ನೀಡುವ ಬದ್ಧತೆ ಪ್ರದರ್ಶಿಸುತ್ತಿದ್ದೇವೆ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-24-246581023

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.