ಹುಬ್ಬಳ್ಳಿ: ‘ಹುಬ್ಬಳ್ಳಿ– ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ಹು–ಧಾ ಮಹಾನಗರದ ಸುತ್ತಲಿನ 36 ಹಳ್ಳಿಗಳನ್ನು ವಶಪಡಿಸಿಕೊಂಡಿದ್ದು, ಅಲ್ಲಿರುವ ಸರ್ಕಾರಿ ಭೂಮಿಯನ್ನು ನಿವೇಶನ ರಹಿತರಿಗೆ ಹಾಗೂ ಸಾಮಾಜಿಕವಾಗಿ ಹಿಂದುಳಿದವರಿಗೆ ಯೋಗ್ಯ ದರದಲ್ಲಿ ಹಂಚಿಕೆ ಮಾಡಬೇಕು’ ಎಂದು ನಿವೇಶನ ರಹಿತರ ಆಂದೋಲನ ಸಂಘಟನೆ ಸದಸ್ಯರು ಆಗ್ರಹಿಸಿದ್ದಾರೆ.

ಮಂಗಳವಾರ ನವನಗರದ ಹುಡಾ ಕಚೇರಿ ಎದುರು ಪ್ರತಿಭಟನೆ ನಡೆಸಿದ ಅವರು, ಹುಡಾ ಅಧ್ಯಕ್ಷ ಶಾಕೀರ್ ಸನದಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ‘ಅವಳಿನಗರದಲ್ಲಿ ಸಾವಿರಾರು ಕುಟುಂಬಗಳು ನಿವೇಶನವಿಲ್ಲದೆ ಹಾದಿ, ಬೀದಿಯಲ್ಲಿ ವಾಸಿಸುತ್ತಿವೆ. ಅವರಿಗೆ ನಿವೇಶನ ಹಂಚಿಕೆ ಮಾಡಿದರೆ ಸೂರು ಕಟ್ಟಿಕೊಂಡು ನೆಮ್ಮದಿಯ ಬದುಕು ಕಂಡುಕೊಳ್ಳುತ್ತಾರೆ’ ಎಂದರು.

‘ನಗರದಲ್ಲಿರುವ ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಪ್ರತಿವರ್ಷ ಒಂದನೇ ಹಂತ, ಎರಡನೇ ಹಂತ ಎಂದು ನಿವೇಶನ ಹಂಚಿಕೆ ಮಾಡುತ್ತದೆ. ಆದರೆ, ನಗರಾಭಿವೃದ್ಧಿ ಪ್ರಾಧಿಕಾರ ನಿವೇಶನ ಹಂಚಿಕೆ ತನ್ನ ಕಾರ್ಯವಲ್ಲ ಎಂದು ಕೈಕಟ್ಟಿ ಕುಳಿತಿದೆ. ನಗರದಲ್ಲಿರುವ ಕಡುಬಡವರಿಗೆ ಕಾನೂನಿನ ಅಡಿಯಲ್ಲಿ ನಿವೇಶನ ನೀಡುವಲ್ಲಿ ಮುಂದಾಗಬೇಕು. ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಎಷ್ಟು ಕುಟುಂಬಗಳಿಗೆ ಈವರೆಗೆ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ಬಹಿರಂಗ ಪಡಿಸಬೇಕು’ ಎಂದು ಸಂಘಟನೆ ಅಧ್ಯಕ್ಷ ನಾಗರಾಜ ಗುರಿಕಾರ ಆಗ್ರಹಿಸಿದರು.

ರಾಜು ಹಿರೇವಡಿಯರ, ನಾಗರಾಜ ನಾಡಕರ್ಣಿ, ಕಿರಣಸಿಂಗ್ ರಜಪೂತ, ಬಿಬಿಜಾನ್ ಮುಲ್ಲಾ, ಮಹಾದೇವಿ ಉಮಚಗಿ ಸೇರಿದಂತೆ 50ಕ್ಕೂ ಹೆಚ್ಚು ನಿವೇಶನ ರಹಿತರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-24-1525693976

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.