ಧಾರವಾಡ: ‘ನಗರದ ಹೊರವಲಯದ ತಡಸಿನಕೊಪ್ಪ ಸಮೀಪ ಈಚೆಗೆ ಫೈರಿಂಗ್ ನಡೆದಿರುವುದು ಹುಬ್ಬಳ್ಳಿ–ಧಾರವಾಡದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವುದಕ್ಕೆ ಉದಾಹರಣೆ. ಫೈರಿಂಗ್ ಮಾಡಿರುವವವನ ವಿರುದ್ಧ ಬಿಡ್ನಾಳ, ಗಾಮನಗಟ್ಟಿಯಲ್ಲಿ ವಂಚನೆ ಮಾಡಿರುವ ಆರೋಪ ಇದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ದೂರಿದರು.

ತಡಸಿನಕೊಪ್ಪ ಬಳಿ ನಡೆದ ಫೈರಿಂಗ್ನಲ್ಲಿ ಗಾಯಗೊಂಡ ವಾಲಿಕಾರ ಅವರ ಯೋಗಕ್ಷೇಮ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ‘ಫೈರಿಂಗ್ ಆಗಿ ನಾಲ್ಕು ದಿನವಾಗಿದೆ. ಫೈರಿಂಗ್ ಮಾಡಿದವನನ್ನು ಪೊಲೀಸರು ಇನ್ನು ಬಂಧಿಸಿಲ್ಲ. ಈ ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳು ಶಾಮೀಲಾಗಿದ್ದಾರೆ’ ಎಂದು ಆರೋಪಿಸಿದರು.

‘ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರ್ ಇಲ್ಲಿಗೆ ಬಂದಿಲ್ಲ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಗುಂಡು ಹಾರಿಸಿದವ ಸಿಕ್ಕಿಲ್ಲ. ಗುಂಡು ಹಾರಿಸಿದ ವ್ಯಕ್ತಿಗೆ ಗನ್ ಲೈಸೆನ್ಸ್ ಇತ್ತೋ? ಇಲ್ಲವೋ? ಎಂಬುದನ್ನು ಇನ್ನು ಪೊಲೀಸರು ಪತ್ತೆ ಹಚ್ಚಿಲ್ಲ’ ಎಂದು ದೂರಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-24-1293019020

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.