ಹುಬ್ಬಳ್ಳಿ: ಅವಳಿ ನಗರದಲ್ಲಿ ಎಲ್ಇಡಿ (ಲೈಟ್ ಎಮಿಟಿಂಗ್ ಡಿಯೊಡ್) ದೀಪಗಳು ಬೆಳಗುವ ಕಾಲ ಸನ್ನಿಹಿತವಾಗಿದ್ದು, ಈಗಾಗಲೇ ಅಳವಡಿಕೆ ಕಾರ್ಯ ಆರಂಭವಾಗಿದೆ. ಇದು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಮಹತ್ವಾಕಾಂಕ್ಷೆಯ ಯೋಜನೆ.

₹93 ಕೋಟಿ ವೆಚ್ಚದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ. ತುಮಕೂರಿನ ಮಂಜುನಾಥ ಎಲೆಕ್ಟ್ರಿಕಲ್ ಕಂಪನಿಗೆ ಟೆಂಡರ್ ನೀಡಲಾಗಿದ್ದು, ಪಾಲಿಕೆ ಜೊತೆ ಒಪ್ಪಂದವೂ ಆಗಿದೆ. ಎಂಟು ತಿಂಗಳಲ್ಲಿ ಅಳವಡಿಕೆ ಕಾರ್ಯ ಪೂರ್ಣಗೊಳಿಸಿ, ಮುಂದಿನ ಏಳು ವರ್ಷ ಕಂಪನಿಯೇ ಎಲ್ಲವನ್ನೂ ನಿರ್ವಹಿಸಲಿದೆ.

‘ಅವಳಿ ನಗರದಲ್ಲಿ 1,500 ಎಲ್ಇಡಿ ದೀಪ ಅಳವಡಿಸಲಾಗಿತ್ತು. ಲಕ್ಸ್ ಲೆವೆಲ್ ಮೀಟರ್ ಅನ್ವಯ (ವಿದ್ಯುತ್ ಕಂಬದಿಂದ ರಸ್ತೆಗೆ ಬೀಳುವ ದೀಪದ ಬೆಳಕಿನ ಪ್ರಕಾಶಮಾನ) ಪರಿಶೀಲಿಸಿ, ಅಗತ್ಯ ಇರುವ ಕಡೆ 25 ರಿಂದ 200 ವೋಲ್ಟ್ನ ಬಲ್ಬ್ ಅಳವಡಿಕೆಗೆ ಸೂಚಿಸಲಾಗಿದೆ’ ಎಂದು ಪಾಲಿಕೆ ವಿದ್ಯುತ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಗವಿಸಿದ್ಧಯ್ಯ ವಿ.ಎಚ್ ತಿಳಿಸಿದರು.

ಈ ಯೋಜನೆಯಡಿ ಒಟ್ಟು 75 ಸಾವಿರ ಎಲ್ಇಡಿ ದೀಪಗಳನ್ನು ಅಳವಡಿಸಲಾಗುವುದು. ಈಗಾಗಲೇ 18 ಸಾವಿರ ಎಲ್ಇಡಿ ದೀಪಗಳಿದ್ದು, ಅವುಗಳನ್ನು ಬದಲಿಸುವುದಿಲ್ಲ. 46 ಸಾವಿರ ಸಾಂಪ್ರದಾಯಿಕ ದೀಪಗಳನ್ನು ಬದಲಿಸಲಾಗುವುದು. ಅಗತ್ಯ ಇರುವ ಕಡೆ 11 ಸಾವಿರ ದೀಪಗಳನ್ನು ಅಳವಡಿಸಲಾಗುವುದು. ಕಂಪನಿಯು ಒಂದೊಂದೇ ವಲಯಗಳನ್ನು ಆಯ್ಕೆ ಮಾಡಿಕೊಂಡು ಬಲ್ಬ್ ಅಳವಡಿಸುತ್ತಿದೆ. ರಸ್ತೆಯ ಅಗಲ, ದಟ್ಟಣೆ ಆಧರಿಸಿ ಕೆಲ ಕಡೆ ಹೆಚ್ಚು ವೋಲ್ಟ್ನ ಬಲ್ಬ್ ಅಳವಡಿಕೆ ಮಾಡಲು ಸೂಚಿಸಲಾಗಿದೆ.

‘ಅವಳಿ ನಗರದಲ್ಲಿ ಒಟ್ಟು 160 ಹೈಮಾಸ್ಟ್ ಕಂಬಗಳಿವೆ. ಅಲ್ಲಿ ಎಲ್ಇಡಿ ದೀಪಗಳು ಇಲ್ಲದಿದ್ದರೆ, 100 ರಿಂದ 200 ವೋಲ್ಟ್ನ ಎಲ್ಇಡಿ ಫ್ಲಡ್ಲೈಟ್ ಅಳವಡಿಸಲಾಗುವುದು. ಕೆಲ ಕಡೆ ಕಂಬದಿಂದ ಕಂಬಗಳ ನಡುವೆ ಹೆಚ್ಚು ಅಂತರ ಇರುವುದರಿಂದ ಬೆಳಕು ಸಾಕಾಗುವುದಿಲ್ಲ. ಅಂಥ ಕಡೆ ಬಲ್ಬ್ ಅಳವಡಿಕೆ, ಇನ್ನಿತರ ಕಾಮಗಾರಿಗೆ ₹10 ಕೋಟಿ ಮೀಸಲಿಡಲಾಗಿದೆ’ ಎಂದರು.

ಹುಬ್ಬಳ್ಳಿ-ಧಾರವಾಡದ ಬೀದಿಗಳನ್ನು ಮತ್ತಷ್ಟು ಉಜ್ವಲಗೊಳಿಸಲು ಮತ್ತು ವಿದ್ಯುತ್ ವೆಚ್ಚದಲ್ಲಿ ಭಾರಿ ಉಳಿತಾಯ ಮಾಡಲು ಎಲ್ಇಡಿ ದೀಪ ಅಳವಡಿಕೆ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ
ರುದ್ರೇಶ ಘಾಳಿ, ಆಯುಕ್ತ, ಹು–ಧಾ ಮಹಾನಗರ ಪಾಲಿಕೆ

ನಗರದ ಗೋಕುಲ ರಸ್ತೆಯಲ್ಲಿ 15ನೇ ಹಣಕಾಸು ಯೋಜನೆಯಡಿ 365 ಎಲ್ಇಡಿ ದೀಪಗಳನ್ನು ಅಳವಡಿಸಿ, ಸೌಂದರ್ಯೀಕರಣಕ್ಕೆ ಕ್ರಮ
ಕೈಗೊಳ್ಳಲಾಗುತ್ತಿದೆ
ಗವಿಸಿದ್ಧಯ್ಯ ವಿ.ಎಚ್, ಕಾರ್ಯನಿರ್ವಾಹಕ ಎಂಜಿನಿಯರ್, ವಿದ್ಯುತ್ ವಿಭಾಗ, ಪಾಲಿಕೆ

ವಾರ್ಷಿಕ ₹12 ಕೋಟಿ ಉಳಿತಾಯ

ಪಾಲಿಕೆಯಿಂದ ಪ್ರತಿ ತಿಂಗಳು ₹2 ಕೋಟಿ ವಿದ್ಯುತ್ ಶುಲ್ಕ ಪಾವತಿ ಆಗುತ್ತದೆ. ಎಲ್ಲಾ ಕಡೆ ಎಲ್ಇಡಿ ದೀಪ ಅಳವಡಿಕೆಯಾದಲ್ಲಿ, ಅದರಲ್ಲಿ ಶೇ 47ರಷ್ಟು
(₹1 ಕೋಟಿ) ಉಳಿಯಲಿದೆ. ವಾರ್ಷಿಕ ₹12 ಕೋಟಿ ಉಳಿತಾಯ ಆಗಲಿದೆ. ವಿದ್ಯುತ್ ಶುಲ್ಕ ಹೊರತುಪಡಿಸಿ ವಾರ್ಷಿಕ ₹ 3 ಕೋಟಿ ನಿರ್ವಹಣೆಗೆ ವೆಚ್ಚ ಆಗುತಿತ್ತು. ಟೆಂಡರ್ ಪಡೆದ ಕಂಪನಿ ನಿರ್ವಹಿಸುವುದರಿಂದ ಅದು ಉಳಿಯಲಿದೆ ಎಂದು ಗವಿಸಿದ್ಧಯ್ಯ ವಿ.ಎಚ್ ತಿಳಿಸಿದರು.

ಈ ಯೋಜನೆಯು ನಗರದ ರಸ್ತೆಗಳಲ್ಲಿ ಸುರಕ್ಷತೆ ಹೆಚ್ಚಿಸುತ್ತದೆ. 'ಸೆಂಟ್ರಲ್ ಕಂಟ್ರೋಲ್ ಮಾನಿಟರಿಂಗ್ ಸಿಸ್ಟಮ್' ಮೂಲಕ ಬೀದಿ ದೀಪಗಳ ಮೇಲೆ ನಿಗಾ ಇಡಲು ಸಹಕಾರಿಯಾಗಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.