ಹುಬ್ಬಳ್ಳಿ: ‘ಸ್ಮಾರ್ಟ್ ಸಿಟಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಡಿ ಕೇಂದ್ರ, ಹಾಗೂ ರಾಜ್ಯ ಸರ್ಕಾರಗಳು ಸಾವಿರಾರು ಕೋಟಿ ವೆಚ್ಚ ಮಾಡಿ ನಗರದ ಅಭಿವೃದ್ಧಿಗೆ ಶ್ರಮಿಸುತ್ತಿವೆ. ಆದರೆ, ಮಳೆಗಾಲದ ಸಂದರ್ಭದಲ್ಲಿ ನೀರು ನಿಲ್ಲುವ ದಾಜೀಬಾನ್ ಪೇಟೆ, ಹು–ಧಾ ಮುಖ್ಯರಸ್ತೆಯ ಉಣಕಲ್–ಶ್ರೀನಗರ ಕ್ರಾಸ್, ಧಾರವಾಡದ ಟೋಲ್ ನಾಕಾ ಪ್ರದೇಶ ವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ.

ಇದು ಅವಳಿನಗರದ ಜನತೆಯ ಸಾಮಾನ್ಯ ಆರೋಪವಾಗಿದೆ. ಇತ್ತೀಚಿಗೆ ಅಕಾಲಿಕವಾಗಿ ಸುರಿದ ಮಳೆಗೆ ದಾಜೀಬಾನ್ ಪೇಟೆಯ ಮುಖ್ಯರಸ್ತೆಯಲ್ಲಿಪ್ರವಾಹ ಉಂಟಾಗಿತ್ತು. ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನನಗಳು ಅರ್ಧಕ್ಕರ್ಧ ಮುಳುಗಡೆಯಾಗಿದ್ದವು. ಸುತ್ತಲಿನ ವಾಣಿಜ್ಯ ಮಳಿಗೆಯ ನೆಲಮಹಡಿಗಳಿಗೆ ನೀರು ನುಗ್ಗಿ, ವಾಹನಗಳೆಲ್ಲ ಮುಳುಗಿದ್ದವು.

ಉಣಕಲ್ನ ಪ್ರೆಸಿಡೆಂಟ್ ಹೋಟೆಲ್ ಎದುರಿನ ಹು–ಧಾ ಮುಖ್ಯ ರಸ್ತೆಯಂತೂ ಸಂಪೂರ್ಣ ಮುಳುಗಿ, ವಾಹನಗಳ ಸಂಚಾರವನ್ನೇ ಸ್ಥಗಿತಗೊಳಿಸಿತ್ತು. ಇತ್ತ ವಿದ್ಯಾನಗರದವರೆಗೆ, ಅತ್ತ ಬೈರಿದೇವರಕೊಪ್ಪದವರೆಗೆ ಬಿಆರ್ಟಿಎಸ್ ಮಾರ್ಗ ಸೇರಿ ಮಿಶ್ರಪಥದಲ್ಲಿ ವಾಹನಗಳು ಸಂಚರಿಸದೆ ಸ್ಥಗಿತವಾಗಿದ್ದವು. ಧಾರವಾಡದ ಟೋಲ್ನಾಕಾ ಬಳಿಯ ಮುಖ್ಯರಸ್ತೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಮಳೆಗಾಲದ ನಾಲ್ಕು ತಿಂಗಳ ಅವಧಿಯಲ್ಲಿ ಕನಿಷ್ಠ 10ರಿಂದ 15 ಬಾರಿ ಈ ರಸ್ತೆಗಳು ಗಟಾರ, ಚರಂಡಿ ನೀರಿನಿಂದ ತುಂಬಿ ಹರಿಯುತ್ತವೆ. ಜನಪ್ರತಿನಿಧಿಗಳ, ಅಧಿಕಾರಿಗಳ ಗಮನಕ್ಕಿದ್ದರೂ ಶಾಶ್ವತ ಪರಿಹಾರ ಕಂಡುಕೊಳ್ಳದಿರುವುದುಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

‘ಸ್ಮಾರ್ಟ್ ಸಿಟಿ ಯೋಜನೆಯಡಿ ಸಾವಿರಾರು ಕೋಟಿ ವೆಚ್ಚ ಮಾಡಿ ನಗರದಲ್ಲಿ ಅಭಿವೃದ್ಧಿ ಕಾರ್ಯ ನಡೆದಿದೆ. ವಾಹನಗಳ ಸಂಚಾರ ದಟ್ಟಣೆ ನಿಯಂತ್ರಿಸಲು ಸುಮಾರು ₹350 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದೆ. ಆದರೆ, ಮಳೆಗಾಲದಲ್ಲಿ ಮಾರುಕಟ್ಟೆ ಪ್ರದೇಶ ಹಾಗೂ ಪ್ರಮುಖ ರಸ್ತೆಗಳಲ್ಲಿ ನೀರು ನಿಲ್ಲದಿರುವುದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ’ ಎನ್ನುವುದು ಹಳೇಹುಬ್ಬಳ್ಳಿಯ ಮಹ್ಮದ್ ಖಾಜಿ ಅವರ ಆರೋಪ.

‘ಪ್ರತಿ ಮಳೆಗಾಲದ ಸಂದರ್ಭದಲ್ಲೂ ದಾಜೀಬಾನ್ ಪೇಟೆ ಮುಖ್ಯರಸ್ತೆಯಲ್ಲಿನೀರು ನಿಲ್ಲುತ್ತದೆ. ಒಳಚರಂಡಿ ಇಲ್ಲದಿ ರುವುದು ಹಾಗೂ ಗಟಾರ ಸ್ವಚ್ಛಗೊಳಿಸದ ಕಾರಣ ನೀರು ಸರಾಗವಾಗಿ ಹರಿಯದೆ ಸಮಸ್ಯೆಯಾಗುತ್ತದೆ. ತುಳಜಾಭವಾನಿ ವೃತ್ತದಲ್ಲಿ ರಾಜಕಾಲುವೆ ಹಾದು ಹೋಗಿದ್ದು, ಅದು ತುಂಬಿ ಹರಿಯುವುದರಿಂದ ಸುತ್ತಲಿನ ಮನೆಗಳಿಗೆ ಹಾಗೂ ಅಂಗಡಿಗಳಿಗೆ ಕೊಳಚೆ ನೀರು ನುಗ್ಗುತ್ತದೆ. ತಾತ್ಕಾಲಿಕ ಕ್ರಮಗಳಿಗಿಂತ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು’ ಎಂದು ಸ್ಥಳೀಯ ನಿವಾಸಿ ಭಾಸ್ಕರ್ ಜಿತೂರಿ ಹೇಳುತ್ತಾರೆ.

ಉಣಕಲ್ನ ಪ್ರೆಸಿಡೆಂಟ್ ಹೋಟೆಲ್ ಬಳಿ ನೀರು ನಿಲ್ಲದಂತೆ ಕ್ರಮವಹಿಸಲು ಪ್ರಸ್ತಾವ ಸಲ್ಲಿಸುವುದಾಗಿ ಬಿಆರ್ಟಿಎಸ್ ಹೇಳಿದೆ. ಮಂಗಳವಾರ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು

ಮಹೇಶ ಟೆಂಗಿನಕಾಯಿ, ಶಾಸಕ

₹45 ಕೋಟಿ ವೆಚ್ಚದ ಪ್ರಸ್ತಾವ ಸಲ್ಲಿಕೆ’

‘ಹೊಸ ಮೇದಾರ ಓಣಿ, ದಾಜೀಬಾನ್ ಪೇಟೆ ಮತ್ತು ಕಮರಿಪೇಟೆ ಮಾರ್ಗದಲ್ಲಿ ಹಾದು ಹೋಗಿರುವ ರಾಜಕಾಲುವೆ ಪುನರ್ ನಿರ್ಮಾಣಕ್ಕೆ ₹45 ಕೋಟಿ ವೆಚ್ಚದ ಪ್ರಸ್ತಾವ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅನುಮೋದನೆ ದೊರೆತರೆ ದಾಜೀಬಾನ್ ಪೇಟೆ ಮುಖ್ಯರಸ್ತೆಯಲ್ಲಿ ಮಳೆಗಾಲದ ಸಂದರ್ಭ ಎದುರಾಗುವ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ’ ಎಂದು ಹು–ಧಾ ಮಹಾನಗರ ಪಾಲಿಕೆಯ ಅಭಿವೃದ್ಧಿ ಉಪ ಆಯುಕ್ತ ವಿಜಯಕುಮಾರ್ ಆರ್. ತಿಳಿಸಿದರು.

‘ಮಳೆಗಾಲದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ವಾರ್ಡ್ ಅಭಿವೃದ್ಧಿ ನಿಧಿ ಬಳಸಿಕೊಂಡು ಸ್ವಚ್ಛತಾ ಕಾರ್ಯ ಆರಂಭಿಸಿದ್ದು, ಈ ತಿಂಗಳಾಂತ್ಯದಲ್ಲಿ ಪೂರ್ಣಗೊಳ್ಳಲಿದೆ. ಪದೇಪದೇ ನೀರು ನಿಲ್ಲುವ ಪ್ರದೇಶಗಳಿಗೆ ವಿಶೇಷ ಗಮನ ಹರಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.