ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದೆ. ಮಧ್ಯಾಹ್ನದ ವೇಳೆ ಜನರು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದು, ರಸ್ತೆಯಲ್ಲಿ ಜನ, ವಾಹನ ಸಂಚಾರ ವಿರಳವಾಗಿದೆ.

ಕಳೆದ ಹದಿನೈದು ದಿನಗಳಿಂದ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗುತ್ತಿದೆ. ಎರಡು ವಾರದ ಹಿಂದೆ ನಗರದ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇತ್ತು. ಮಂಗಳವಾರ 36 ಡಿಗ್ರಿ ಸೆಲ್ಸಿಯಸ್ಗೆ ಏರಿಕೆಯಾಗಿದೆ. ಏ.25ರಂದು 39 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಹುಬ್ಬಳ್ಳಿ–ಧಾರವಾಡ ಮಹಾನಗರದಲ್ಲಿ ಮುಂದಿನ ಐದು ದಿನಗಳವರೆಗೆ ವಾತಾವರಣದಲ್ಲಿ ಉಷ್ಣಾಂಶ ಗಣನೀಯವಾಗಿ ಏರಿಕೆಯಾಗಲಿದೆ. ಸಾಮಾನ್ಯ ತಾಪಮಾನಕ್ಕಿಂತ ಮೂರು ಅಥವಾ ನಾಲ್ಕು ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗಬಹುದು. ಅಗತ್ಯವಿದ್ದರಷ್ಟೇ ಸಾರ್ವಜನಿಕರು ಮನೆ, ಕಚೇರಿಯಿಂದ ಹೊರಗೆ ಬರಬೇಕು ಎಂದು ಎಚ್ಚರಿಕೆಯನ್ನೂ ನೀಡಲಾಗಿದೆ.

‘ದಿನಪೂರ್ತಿ ವಾತಾವರಣದಲ್ಲಿ ಉಷ್ಣಾಂಶ ಇರುವುದರಿಂದ ದೈನಂದಿನ ಕೆಲಸಗಳಿಗೆ ಸಮಸ್ಯೆಯಾಗುತ್ತಿವೆ. ಮಧ್ಯಾಹ್ನದ ವೇಳೆ ಹೊರಗೆ ಹೋಗಲಾಗದಷ್ಟು ಬಿಸಿಲು ಇರುತ್ತದೆ. ರಾತ್ರಿ ವೇಳೆ ಫ್ಯಾನ್ ಗಾಳಿಯೂ ಬಿಸಿಯಾಗುತ್ತದೆ’ ಎಂದು ನಗರದ ಆಟೊ ಚಾಲಕ ಚೇತನ ಹಿರೇಮಠ ಹೇಳುತ್ತಾರೆ.

ಬಿಸಿಲು, ಸೆಖೆಯಿಂದಾಗಿ ಮಾರುಕಟ್ಟೆಗೆ ಬಂದವರು ಹೈರಾಣಾಗುತ್ತಿದ್ದಾರೆ. ಬಿಸಿಲ ತಾಪಕ್ಕೆ ಬಸವಳಿದ ಜನ ರಸ್ತೆ ಬದಿಯಲ್ಲಿ ಮಾರಾಟಕ್ಕಿಟ್ಟಿರುವ ಎಳನೀರು, ಶರಬತ್ತು, ಹಣ್ಣುಗಳ ಮೊರೆ ಹೋಗಿ ಆಯಾಸ ನೀಗಿಸಿಕೊಳ್ಳುತ್ತಿದ್ದಾರೆ. ಎಲೆಕ್ಟ್ರಾನಿಕ್ ವಸ್ತುಗಳ ಮಳಿಗೆಗಳಲ್ಲಿ ಕೂಲರ್, ಫ್ಯಾನ್, ಎಸಿ ಖರೀದಿ ಹಾಗೂ ರಸ್ತೆ ಬದಿಯಲ್ಲಿ ಮಡಕೆ ವ್ಯಾಪಾರವೂ ಜೋರಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-24-1847650183

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.