ಹುಬ್ಬಳ್ಳಿ: ಅವಳಿ ನಗರದಲ್ಲಿ 24X7 ಕುಡಿಯುವ ನೀರಿನ ಯೋಜನೆ ಅನುಷ್ಠಾನವಾಗುತ್ತಿದ್ದು, ನೀರಿನ ಬಿಲ್ ಪಾವತಿಗೆ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯು ಭಾರತ್ ಬಿಲ್ ಪೇಮೆಂಟ್ ಸಿಸ್ಟಂ (ಬಿಬಿಪಿಎಸ್) ಪರಿಚಯಿಸಿದೆ.

ನೀರು ಸರಬರಾಜು ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿ ನೀರಿನ ಕರ ಸಂಗ್ರಹ ಮುಖ್ಯ ಭಾಗವಾಗಿದೆ. ಕರ ಸಂಗ್ರಹಕ್ಕೆ ಹೊಸ ತಂತ್ರಜ್ಞಾನ ಅಳವಡಿಸಲಾಗಿದ್ದು, ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ನೀರಿನ ಕರ ಪಾವತಿಗೆ ಈಗಾಗಲೇ ಹಲವು ವ್ಯವಸ್ಥೆಗಳಿದ್ದು, ಬಿಬಿಪಿಎಸ್ ಹೊಸ ಸೇರ್ಪಡೆಯಾಗಿದೆ. ಗ್ರಾಹಕರು ಇನ್ನು ಮುಂದೆ ಫೋನ್ ಪೇ, ಪೇಟಿಎಂ, ಭೀಮ್ ಯುಪಿಐ, ಅಮೆಜಾನ್ ಪೇ, ಗೂಗಲ್ಪೇ ಮೂಲಕ ನೀರಿನ ಬಿಲ್ ಅನ್ನು ಸುಲಭವಾಗಿ ಪಾವತಿಸಬಹುದಾಗಿದೆ.

ಹುಬ್ಬಳ್ಳಿ– ಧಾರವಾಡದಲ್ಲಿ 1,84,657 ನಳ ಸಂಪರ್ಕಗಳಿದ್ದು, ಅದರಲ್ಲಿ 1.30 ಲಕ್ಷಕ್ಕೂ ಹೆಚ್ಚು ನಳಗಳಿಗೆ ಮೀಟರ್ ಅಳವಡಿಸಲಾಗಿದೆ. ಪ್ರತಿ ತಿಂಗಳು ₹4 ಕೋಟಿಯಷ್ಟು ನೀರಿನ ಕರ ಸಂಗ್ರಹವಾಗುತ್ತಿದೆ. ಈಗಾಗಲೇ ಜಾರಿಗೆ ತಂದಿರುವ ವಿವಿಧ ಆನ್ಲೈನ್ ಪಾವತಿ ವ್ಯವಸ್ಥೆಯಿಂದ ಕಳೆದ ನಾಲ್ಕು ವರ್ಷಗಳಲ್ಲಿ ಬಿಲ್ ಪಾವತಿ ಶೇ 50ರಷ್ಟು ಹೆಚ್ಚಾಗಿದೆ. ಬಿಬಿಪಿಎಸ್ ವ್ಯವಸ್ಥೆಯಿಂದ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ.

‘ನೀರಿನ ಬಿಲ್ ನಿಗದಿತ ಸಮಯದೊಳಗೆ ಪಾವತಿ ಮಾಡದಿದ್ದರೆ, ಅನಿವಾರ್ಯವಾಗಿ ಬಡ್ಡಿ ತೆರಬೇಕಾಗಿತ್ತು. ಹೀಗಾಗಿ ಬಿಬಿಪಿಎಸ್ ನೀರಿನ ಬಿಲ್ ಪಾವತಿಗೆ ಹೆಚ್ಚುವರಿ, ಸುಲಭ ಆಯ್ಕೆಯಾಗಿದೆ’ ಎಂದು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ (ಕೆಯುಐಡಿಎಫ್ಸಿ) ಅಧಿಕಾರಿಗಳು ತಿಳಿಸಿದರು.

‘ಪಾಲಿಕೆ ವ್ಯಾಪ್ತಿಯಲ್ಲಿ 88 ಜನ ಮೀಟರ್ ರೀಡರ್ಗಳಿದ್ದು, ಅವರು ಮನೆಗಳಿಗೆ ಹೋಗಿ ಬಿಲ್ ಸೃಜಿಸಿದ ನಂತರ ಗ್ರಾಹಕರ ಮೊಬೈಲ್ಗೆ ಬಿಲ್ ಕುರಿತು ಸಂದೇಶ ಹೋಗುತ್ತದೆ. ಒಮ್ಮೆ ಅವರು ಬಿಬಿಪಿಎಸ್ ವ್ಯವಸ್ಥೆ ಮೂಲಕ ಬಿಲ್ ಪಾವತಿಸಿದರೆ ಪ್ರತಿ ತಿಂಗಳು ಅವರಿಗೆ ಅಲರ್ಟ್ ಸಂದೇಶ ಬರುತ್ತದೆ. ಆ ನಂತರ ಅವರು ಮನೆಯಲ್ಲೇ ಕುಳಿತು ಕರ ಪಾವತಿಸಬಹುದು. ತಕ್ಷಣ ಅವರಿಗೆ ರಶೀದಿಯೂ ಬರುತ್ತದೆ’ ಎಂದರು.

www.hdmcwater.in ಮೂಲಕ ಆನ್ಲೈನ್ ಪೇಮೆಂಟ್, ನೀರಿನ ಬಿಲ್ನಲ್ಲಿರುವ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ, ಕರ್ನಾಟಕ ಒನ್, ಹು–ಧಾ ಒನ್, ಎಲ್ ಆ್ಯಂಡ್ ಟಿ ಗ್ರಾಹಕ ಸೇವಾ ಕೇಂದ್ರಗಳಲ್ಲಿಯೂಬಿಲ್ ಪಾವತಿಗೆ ಅವಕಾಶ ಇದೆ. ಅಲ್ಲದೆ, ಮೀಟರ್ ರೀಡರ್ಗಳು ಮನೆಗೆ ಬಂದಾಗ ಕರ ಪಾವತಿಸಿ ರಶೀದಿ ಪಡೆಯಬಹುದು ಎಂದು ಮಾಹಿತಿ ನೀಡಿದರು.

‘ಎಂಟು ಸಾವಿರ ಲೀಟರ್ವರೆಗೆ ನೀರು ಬಳಸುವವರಗೆ ಪ್ರತಿ ತಿಂಗಳು ಕನಿಷ್ಠ ₹56 ನೀರಿನ ಬಿಲ್ ಬರುತ್ತದೆ. ಈ ಮೊತ್ತವನ್ನು ಕಟ್ಟಲು ಜನರು ಹೆಚ್ಚು ಹಣ ಖರ್ಚು ಮಾಡಿಕೊಂಡು ಕಚೇರಿಗೆ ಹೋಗಬೇಕಿಲ್ಲ. ಹಿರಿಯ ನಾಗರಿಕರು ಕೌಂಟರ್ಗಳಿಗೆ ಹೋಗಿ ಬಿಲ್ ಪಾವತಿ ಮಾಡಲು ಕಷ್ಟವಾಗುತ್ತದೆ. ಎಲ್ಲರೂ ಫೋನ್ ಪೇ ಬಳಸುವುದರಿಂದ ಈ ವ್ಯವಸ್ಥೆಯಿಂದ ಹೆಚ್ಚು ಅನುಕೂಲಆಗಲಿದೆ’ ಎಂದರು.

ಒಟಿಎಸ್ ಜಾರಿಗೆ ಹೆಚ್ಚಿದ ಒತ್ತಡ

ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ಡಿಸೆಂಬರ್ ಅಂತ್ಯದವರೆಗೆ ಗೃಹ, ಗೃಹೇತರ, ವಾಣಿಜ್ಯ ಬಳಕೆ, ಸಗಟು ನಳ ಸಂಪರ್ಕಗಳು, ಎನ್ರೂಟ್ ಹಾಗೂ ಇತರ ಗ್ರಾಮಗಳ ನೀರಿನ ಕರ ಅಸಲು, ಬಡ್ಡಿ ಸೇರಿ ₹324 ಕೋಟಿ ಬಾಕಿ ಇದ್ದು, ಒಂದು ಬಾರಿ ಪರಿಹಾರ ಯೋಜನೆ (ಒಟಿಎಸ್) ಅಡಿ ನೀರಿನ ಬಿಲ್ ಪಾವತಿಸಲು ಅವಕಾಶ ನೀಡಬೇಕು ಎಂಬ ಒತ್ತಡ ಹೆಚ್ಚುತ್ತಿದೆ.

ಒಟಿಎಸ್ ಮೂಲಕ ಗ್ರಾಹಕರು ಅಸಲು ಪಾವತಿಸಿದರೆ ಅದರ ಬಡ್ಡಿ ಮನ್ನಾ ಆಗುತ್ತದೆ. ಒಟಿಎಸ್ ಜಾರಿಗೆ ಹು–ಧಾ ಮಹಾನಗರ ಪಾಲಿಕೆಯಿಂದ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಪಾಲಿಕೆಯಲ್ಲಿ 2011ರಲ್ಲಿ ಒಟಿಎಸ್ ಜಾರಿ ಮಾಡಲಾಗಿತ್ತು.

ಪಾಲಿಕೆಯಿಂದ ನೀರಿನ ಬಿಲ್ ಪಾವತಿಗೆ ವಿವಿಧ ಗ್ರಾಹಕ ಸ್ನೇಹಿ ವ್ಯವಸ್ಥೆಗಳನ್ನು ಜಾರಿಗೊಳಿಸಲಾಗಿದ್ದು, ಅದಕ್ಕೆ ಬಿಬಿಪಿಎಸ್ ಸೇರ್ಪಡೆಯಾಗಿದೆ. ವಿದ್ಯುತ್ ಬಿಲ್ ರೀತಿ ನೀರಿನ ಬಿಲ್ ಅನ್ನೂ ಸುಲಭವಾಗಿ ಪಾವತಿಸಬಹುದು

ರುದ್ರೇಶ ಘಾಳಿ, ಆಯುಕ್ತ, ಹು–ಧಾ ಮಹಾನಗರ ಪಾಲಿಕೆ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-24-2092927057

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.