ಹುಬ್ಬಳ್ಳಿ: ನಗರದ ನೆಹರೂ ಮೈದಾನದಲ್ಲಿ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗದಿಂದ ನಡೆದ 16ನೇ ‘ಎಡ್ಯುವರ್ಸ್ ಶೈಕ್ಷಣಿಕ ಮೇಳ’ ಭಾನುವಾರ ಕೊನೆಗೊಂಡಿತು. ವಿದ್ಯಾರ್ಥಿಗಳು, ಪೋಷಕರು ಉಪಯುಕ್ತ ಮಾಹಿತಿ ಪಡೆದರು.

ಹುಬ್ಬಳ್ಳಿ ನಗರ, ಧಾರವಾಡ, ಹಾವೇರಿ, ಶಿರಸಿ, ಮುರುಡೇಶ್ವರ ಸೇರಿ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಆಸಕ್ತಿಯಿಂದ ಪಾಲ್ಗೊಂಡರು..

ಸಿಎಂಆರ್ ವಿಶ್ವವಿದ್ಯಾಲಯ, ರಾಮಯ್ಯ ಯುನಿವರ್ಸಿಟಿ, ಪ್ರೆಸಿಡೆನ್ಸಿ ಯುನಿವರ್ಸಿಟಿ, ಮಣಿಪಾಲ್ ಇನ್ಸ್ಟಿಟ್ಯೂಟ್, ಸಪ್ತಗಿರಿ ವಿಶ್ವವಿದ್ಯಾಲಯ, ದಯಾನಂದ ಸಾಗರ ಯುನಿವರ್ಸಿಟಿ, ಪಾರುಲ್ ಯುನಿವರ್ಸಿಟಿ, ದಿ ಆಕ್ಸ್ಫರ್ಡ್ ಎಜುಕೇಷನಲ್ ಇನ್ಸ್ಟಿಟ್ಯೂಟ್, ಕೆಎಲ್ಇ, ಎಸ್ಡಿಎಂ, ಆರ್ವಿ ಯುನಿವರ್ಸಿಟಿ ಸೇರಿ ವಿವಿಧ ಶಿಕ್ಷಣ ಸಂಸ್ಥೆಗಳ ಮಳಿಗೆಗಳು ಇದ್ದವು.

ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಕೋರ್ಸ್ಗಳಿಗೆ ಸಂಬಂಧಿಸಿದ ಡಿಪ್ಲೊಮಾ, ಪದವಿ ಮತ್ತು ಸರ್ಟಿಫಿಕೆಟ್ ಕೋರ್ಸ್ಗಳ ಮಾಹಿತಿ ಪಡೆದರು. ಕೆಲ ಶಿಕ್ಷಣ ಸಂಸ್ಥೆಯವರು ಲ್ಯಾಬ್ ಟೆಕ್ನಿಷಿಯನ್, ರೇಡಿಯಾಲಜಿ, ಡಯಾಲಿಸಿಸ್ ಮುಂತಾದ ಕ್ಷೇತ್ರಗಳಲ್ಲಿ ಉದ್ಯೋಗಾವಾಕಾಶಗಳ ಬಗ್ಗೆ ಮಾಹಿತಿ ನೀಡಿದರು.

ಹುಬ್ಬಳ್ಳಿಯ ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ನೇತ್ರಶಾಸ್ತ್ರ ಕೋರ್ಸ್ಗಳ ಬಗ್ಗೆ ವಿವರಣೆ ನೀಡಿದರು. ಡಾಕ್ಟರ್ ಅಬ್ರಾಡ್ ಮೆಡಿಕಲ್ ಎಜುಕೇಷನಲ್ ಸರ್ವಿಸಸ್ ಪ್ರವೇಟ್ ಲಿಮಿಟೆಡ್ ಮಳಿಗೆಯಲ್ಲಿ ವಿದೇಶಗಳಲ್ಲಿ ವೈದ್ಯಕೀಯ ಶಿಕ್ಷಣದ ಬಗ್ಗೆ ಮಾಹಿತಿ ಒದಗಿಸಲಾಯಿತು. ‘ರಷ್ಯಾ ಸೇರಿ ವಿವಿಧ ದೇಶಗಳಲ್ಲಿ ನಮ್ಮ ಕಂಪನಿ ವತಿಯಿಂದ
50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದಾರೆ’ ಎಂದು ಕಂಪನಿಯ ಪ್ರತಿನಿಧಿ ತಿಳಿಸಿದರು.

ಗದಗನ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ವಿಶ್ವವಿದ್ಯಾಲಯದಲ್ಲಿರುವ ಬಿಎ, ಬಿ.ಕಾಂ, ಬಿಪಿಎಚ್, ಬಿ.ಎಸ್ಸಿ ಸೇರಿದಂತೆ ವಿವಿಧ ಕೋರ್ಸ್ಗಳ ಕುರಿತು ಸಿಬ್ಬಂದಿ ಮಾಹಿತಿ ಒದಗಿಸಿದರು.

ಕೆಲ ವಿದ್ಯಾರ್ಥಿನಿಯರು ಎಂಜಿನಿಯರಿಂಗ್ ಕೋರ್ಸ್ಗಳಿಗೆ ಪೂರಕವಾದ ಎಲೆಕ್ಟ್ರಾನಿಕ್, ಮೆಕ್ಯಾನಿಕಲ್, ಸಿವಿಲ್, ಡೆಟಾ ಸೈನ್ಸ್ ಮತ್ತು ಆರೋಗ್ಯ ರಕ್ಷಣೆ ಮತ್ತು ವೈದ್ಯಕೀಯ ಉಪಕರಣಗಳಿಗೆ ಸಂಬಂಧಿಸಿದ ಬಯೋಮೆಡಿಕಲ್ ಎಂಜಿನಿಯರಿಂಗ್ ಕೋರ್ಸ್ಗಳ ಬಗ್ಗೆ ಮಾಹಿತಿ ಪಡೆದರು. ಇದಕ್ಕೆ ಪೂರಕವಾಗಿ ವಿಷಯ ಪರಿಣತರು ವೇದಿಕೆ ಕಾರ್ಯಕ್ರಮದಲ್ಲಿ ವೈದ್ಯಕೀಯ– ಅರೆ ವೈದ್ಯಕೀಯ, ಎಂಜಿನಿಯರಿಂಗ್ನ ವಿವಿಧ ವಿಭಾಗಗಳ ಕೋರ್ಸ್ಗಳ ಮಹತ್ವ, ದೇಶ– ವಿದೇಶಗಳಲ್ಲಿ ಉದ್ಯೋಗಾವಕಾಶ ಹಾಗೂ ವೇತನದ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಮಾದರಿ ಸಿಇಟಿ ಮತ್ತು ನೀಟ್ ಪರೀಕ್ಷೆ ನಡೆಸಲಾಯಿತು. ಇದರಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದವರಿಗೆ ಬಹುಮಾನ ವಿತರಿಸಲಾಯಿತು.

‘ಅರೆ ವೈದ್ಯಕೀಯ ಕ್ಷೇತ್ರದಲ್ಲಿಯೂ ಉತ್ತಮ ವೇತನ’

‘ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕಾಲೇಜು ಹಾಗೂ ಸೀಟುಗಳ ಸಂಖ್ಯೆ ಕಡಿಮೆ. ವಿದ್ಯಾರ್ಥಿಗಳು ವೈದ್ಯಕೀಯ ಕ್ಷೇತ್ರಕ್ಕೆ ಪೂರಕವಾದ ನರ್ಸಿಂಗ್, ಫಿಸಿಯೋಥೆರಫಿ, ಲ್ಯಾಬ್ ಟೆಕ್ನಿನಿಷಿಯನ್, ರೇಡಿಯಾಲಜಿಸ್ಟ್, ಆಪರೇಷನ್ ಥೀಯೇಟರ್ ತಂತ್ರಜ್ಞಾನ, ಅನಸ್ಥೇಶಿಯಾ ಟೆಕ್ನಾಲಜಿ.. ಹೀಗೆ ಅರೆ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಕೋರ್ಸ್ಗಳನ್ನೂ ಅಧ್ಯಯನ ಮಾಡಬಹುದು’ ಎಂದು ಶಿಕ್ಷಣ ತಜ್ಞ ವಿಶ್ವನಾಥ ಎಂ.ಪಟ್ಟಣಶೆಟ್ಟಿ ಹೇಳಿದರು.

‘ವೈದ್ಯಕೀಯ, ಅರೆ ವೈದ್ಯಕೀಯ ಕ್ಷೇತ್ರದಲ್ಲಿನ ಅವಕಾಶ’ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ‘ಪಿಯುಸಿ (ವಿಜ್ಞಾನ) ಮುಗಿಸಿದವರು ವೈದ್ಯರಿಗೆ ಸಹಾಯಕವಾಗುವಂತಹ ಇಂತಹ ಕೋರ್ಸ್ಗಳನ್ನು ಮಾಡಬಹುದು. ದೇಶ–ವಿದೇಶದಲ್ಲಿನ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಉತ್ತಮ ಉದ್ಯೋಗಾವಕಾಶ ಹಾಗೂ ಆಕರ್ಷಕ ವೇತನ ಪಡೆಯಬಹುದು’ ಎಂದು ತಿಳಿಸಿದರು.

‘ಪಿಯುಸಿ ಕಲಾ, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಹೋಟೆಲ್ ಮ್ಯಾನೆಜ್ಮೆಂಟ್ ಕೋರ್ಸ್ಗಳನ್ನೂ ಮಾಡಬಹುದು. ತಮಗೆ ಇಷ್ಟವಾದ ಕೋರ್ಸ್, ಕಾಲೇಜು ಸಿಗಲಿಲ್ಲ ಎಂಬ ಬೇಸರ ಪಡದೇ ದೊರೆತ ಕೋರ್ಸ್ಗಳನ್ನು ಆಸಕ್ತಿಯಿಂದ ಅಧ್ಯಯನ ನಡೆಸಬೇಕು. ಕಾಲೇಜುಗಳ ಆಯ್ಕೆಯಲ್ಲಿ ಹೆಚ್ಚು ಜಾಗೃತಿ ವಹಿಸಬೇಕು’ ಎಂದು ಸಲಹೆ ನೀಡಿದರು.

ಸಿಇಟಿ ಉತ್ತಮ ರ್ಯಾಂಕ್ ಮುಖ್ಯ

‘ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದರೆ ಸಾಲದು, ಕೆ–ಸಿಇಟಿ, ಕಾಮೆಡ್–ಕೆ ಪರೀಕ್ಷೆಯಲ್ಲಿಯೂ ಉತ್ತಮ ರ್ಯಾಂಕ್ ಪಡೆಯಬೇಕು. ಆಗ ಮಾತ್ರ ನಿಮಗೆ ಇಷ್ಟವಾದ ಕಾಲೇಜಿನಲ್ಲಿ ಕೋರ್ಸ್ ಕಲಿಯಬಹುದು’ ಎಂದು ಎಸ್ಡಿಎಂ ಎಂಜಿನಿಯರಿಂಗ್ ಕಾಲೇಜಿನ ಪ್ರೊ.ಶ್ರವಣ ನಾಯಕ್ ತಿಳಿಸಿದರು. ‘ಕಾಮೆಡ್–ಕೆ’ ವಿಷಯ ಕುರಿತು ಮಾತನಾಡಿದ ಅವರು, ‘ಕೆ–ಸಿಇಟಿ ರಾಜ್ಯಕ್ಕೆ ಸೀಮಿತ ಪರಿಕ್ಷೆಯಾದರೆ, ‘ಕಾಮೇಡ್–ಕೆ’ ಪರೀಕ್ಷೆ ರಾಷ್ಟ್ರವ್ಯಾಪ್ತಿ ನಡೆಯುತ್ತದೆ. ಸೀಟು ಹಂಚಿಕೆ ಪ್ರಕ್ರಿಯೆ ಒಂದೇ ರೀತಿಯಲ್ಲಿ ಇರುತ್ತದೆ. ಕಾಲೇಜು ಆಯ್ಕೆಯಲ್ಲಿ ಗೊಂದಲ ಇರಬಾರದು. ಮೊದಲೇ ಮಾಹಿತಿ ಕೈಪಿಡಿಯನ್ನು ಸರಿಯಾಗಿ ಓದಿ, ಪೋಷಕರಿಂದ ಸಲಹೆ ಪಡೆದು ತೀರ್ಮಾನಿಸಬೇಕು. ಆಯ್ಕೆ ಮಾಡಿದ ಸೀಟು ಬೇಡವೆನಿಸಿದರೆ, ನಿಗದಿತ ಅವಧಿಯಲ್ಲಿ ಅದನ್ನು ಮರಳಿಸಬಹುದು‘ ಎಂದು ಹೇಳಿದರು. ‘ಕೆಇಎ, ಮ್ಯಾನೇಜ್ಮೆಂಟ್ ಕೋಟಾದಡಿ ಸೀಟು ಸಿಗದಿದ್ದಾಗ ಕಾಮೆಡ್– ಕೆ ಮೂಲಕ ಸೀಟು ಪಡೆಯಬಹುದು. ಆದರೆ, ಪೋಷಕರ ಆರ್ಥಿಕ ಸ್ಥಿತಿಯೂ ಮುಖ್ಯವಾಗಿರುತ್ತದೆ’ ಎಂದರು.

‘ಪ್ರಜಾವಾಣಿ’ ಕಾರ್ಯ ಶ್ಲಾಘನೀಯ

‘ವೃತ್ತಿಯ ಜತೆಗೆ ಸದೃಢ ಸಮಾಜ ನಿರ್ಮಾಣ ಮಾಡುವ ದೂರದೃಷ್ಟಿಯೊಂದಿಗೆ ಶಿಕ್ಷಣಕ್ಕೆ ಒತ್ತು ನೀಡಲು ಈ ಕಾರ್ಯಕ್ರಮ ಆಯೋಜಿಸಿರುವುದು ಉತ್ತಮ ಕಾರ್ಯ. ದೇಶದ ಸಮಗ್ರ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ಒಂದೇ ಸೂರಿನಡಿ ವಿವಿಧ ವಿಶ್ವವಿದ್ಯಾಲಯಗಳು, ಪ್ರತಿಷ್ಠಿತಿ ಶಿಕ್ಷಣ ಸಂಸ್ಥೆಗಳನ್ನು ಸೇರಿಸಿ ಮಾರ್ಗದರ್ಶನ ಕೊಡಿಸುವ ಮೂಲಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕೆಲಸ ಮಾಡಲಾಗಿದೆ. ವಿದ್ಯಾರ್ಥಿಗಳು ಪೋಷಕರ ಒತ್ತಡಕ್ಕೆ ಕೊರ್ಸ್ ಆಯ್ಕೆ ಮಾಡಿಕೊಳ್ಳಬಾರದು ಎಂದರು.

ಎಲ್ಲರೂ ಎಂಜಿನಿಯರ್, ವೈದ್ಯರು ಆಗಬೇಕೆಂದಿಲ್ಲ. ಎಲ್ಎಲ್ಬಿ, ಬಿ.ಎ, ಬಿ.ಕಾಂ, ಬಿಎಸ್ಸಿ, ಡಿಪ್ಲೊಮಾ ಸೇರಿ ವಿವಿಧ ಕೋರ್ಸ್ ಮಾಡಿದವರಿಗೂ ಉತ್ತಮ ಅವಕಾಶಗಳಿವೆ. ಉತ್ತಮ ವಕೀಲರು, ಲೆಕ್ಕಪರಿಶೋಧಕರಿಗೆ ಹೆಚ್ಚು ಬೇಡಿಕೆ ಇದೆ. ಕೃತಕ ಬುದ್ಧಮತ್ತೆ (ಎಐ) ಸೇರಿ ಹೊಸ ತಂತ್ರಜ್ಞಾನವನ್ನು ತಿಳಿಯುವ ಜತೆಗೆ ಅದನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಆಯೋಜಿಸಬೇಕು. ಅದಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದರು.

‘ಸಿಇಟಿ, ನೀಟ್ ಅಷ್ಟೇ ಗುರಿ ಆಗದಿರಲಿ’

‘ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಅನುಗುಣವಾಗಿ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು. ವಿಜ್ಞಾನ ಮಾತ್ರವಲ್ಲದೆ ಕಾನೂನು, ಪತ್ರಿಕೋದ್ಯಮ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಅವಕಾಶಗಳಿವೆ. ಸ್ಪರ್ಧಾತ್ಮಕ ಪರೀಕ್ಷೆ ಬರೆದು ಐಎಎಸ್, ಐಪಿಎಸ್ ಅಧಿಕಾರಿಗಳಾಗಬಹುದು ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎ.ಎಂ. ಖಾನ್ ಹೇಳಿದರು.

‘ಪಿಯುಸಿ ನಂತರ ಸಿಇಟಿ, ನೀಟ್ ಬರೆದು ಎಂಜಿನಿಯರಿಂಗ್, ವೈದ್ಯಕೀಯ ಕೋರ್ಸ್ಗಳಿಗೆ ಸೇರುವ ಜತೆಗೆ ಬಿ.ಎಸ್ಸಿ, ಎಂ.ಎಸ್ಸಿ ಮಾಡಿದರೆ ಸಹ ಸಾಕಷ್ಟು ಅವಕಾಶಗಳಿದ್ದು, ಸಂಶೋಧನಾ ಕ್ಷೇತ್ರದಲ್ಲಿಯೂ ಮುಂದುವರಿಯಬಹುದು. ಸಂಶೊಧನ ಮೂಲಕ ವಿಜ್ಞಾನಕ್ಕೆ ಕೊಡುಗೆ ನೀಡಬಹದು’ ಎಂದರು.

‘ಪ್ರಸ್ತುತ ದಿನಗಳಲ್ಲಿ ವೃತ್ತಿ ಅವಕಾಶಗಳು ಸಾಕಷ್ಟು ಇವೆ. ಅದಕ್ಕೆ ತಕ್ಕಂತೆ ಕೋರ್ಸ್ಗಳನ್ನು ಸಹ ವಿನ್ಯಾಸ ಮಾಡಲಾಗಿದೆ. ಬಯೋಟೆಕ್ನಾಲಜಿ, ಮೈಕ್ರೊ ಬಯಾಲಜಿ, ಜೆನೆಟಿಕ್ಸ್, ಅಪ್ಲೈಯ್ಡ್ ಜೆನೆಟಿಕ್ಸ್, ಫಾರೆನ್ಸಿಕ್ ಸೈನ್ಸ್ ಡಾಟಾ ಸೈನ್ಸ್, ಫುಡ್ ಟೆಕ್ನಾಲಜಿ ಕ್ಷೇತ್ರಗಳನ್ನು ಆಯ್ದುಕೊಳ್ಳಬಹುದು. ಇದು ಮಾಹಿತಿ ಯುಗವಾಗಿದ್ದು, ಎಲ್ಲ ಕ್ಷೇತ್ರಗಳಲ್ಲಿ ಡಾಟಾ ಸೈಂಟಿಸ್ಟ್ಗಳಿಗೆ ಹೆಚ್ಚು ಬೇಡಿಕೆ ಇದೆ’ ಎಂದರು.

ಮೇಳ ಹೇಗೆ ಅನ್ನಿಸಿತು?

ಎಡ್ಯುವರ್ಸ್ ಶೈಕ್ಷಣಿಕ ಮೇಳ ವಿದ್ಯಾರ್ಥಿಗಳ ಭವಿಷ್ಯತ್ತಿನ ಶಿಕ್ಷಣಕ್ಕೆ ಯೋಜನಾತ್ಮಕವಾಗಿ ಮುಂದುವರಿಸಲು ಸಹಕಾರಿ ಆಗಿದೆ. ಸಾಕಷ್ಟು ಮಕ್ಕಳು ಶಿಕ್ಷಣ ತಜ್ಞರ, ಅನುಭವಿಗಳ ಮಾತು ಕೇಳಿ, ವಿವಿಧ ಕಾಲೇಜುಗಳ ಮಾಹಿತಿ ಪಡೆದಿದ್ದಾರೆ

–ಪ್ರೊ. ಅಣ್ಣಪ್ಪ ಕೊರವರ, ಮುಖ್ಯಸ್ಥ, ಬಿಎ ವಿಭಾಗ, ಐಬಿಎಂಆರ್ ಕಾಲೇಜ್, ಹುಬ್ಬಳ್ಳಿ

ಇಂತಹ ಶೈಕ್ಷಣಿಕ ಮೇಳವು ಮಕ್ಕಳಿಗೆ ಸ್ಫೂರ್ತಿ ಮತ್ತು ಆತ್ಮವಿಶ್ವಾಸ ತುಂಬುತ್ತದೆ. ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಎರಡೂ ದಿನವೂ ಮೇಳಕ್ಕೆ ಬಂದಿದ್ದು, ಅವರವರ ಆಸಕ್ತಿಗೆ ಅನುಗುಣವಾಗಿ ಕೋರ್ಸ್ಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.

-ಆನಂದ ಟಂಗೊಳ್ಳಿ, ನಿಲಯ ಪಾಲಕ, ಹಿರೆಮಲ್ಲೂರು ಈಶ್ವರನ್ ಪಿಯು ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಧಾರವಾಡ

ಹಲವಾರು ವಿದ್ಯಾರ್ಥಿಗಳು ವಿವಿಧ ಕೋರ್ಸ್ಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಎಂಜಿನಿಯರಿಂಗ್, ಎಂಬಿಬಿಎಸ್ ಹೊರತಾದ ತಾಂತ್ರಿಕ ಕೋರ್ಸ್ಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದು ಕಂಡುಬಂತು.

-ಪ್ರೊ. ಪಲ್ಲವಿ ನಾಯಕ, ಶ್ರೇಯಾ ನರ್ಸಿಂಗ್ ಕಾಲೇಜು, ಧಾರವಾಡ

ಬಹುತೇಕ ವಿದ್ಯಾರ್ಥಿಗಳಿಗೆ ಸ್ಪೀಚ್ ಆ್ಯಂಡ್ ಈಯರ್ ಕೋರ್ಸ್ ಇದೆ ಎಂಬ ಮಾಹಿತಿ ಇರಲಿಲ್ಲ. ಆ ಕೋರ್ಸ್ನಿಂದ ಪ್ರಯೋಜನವೇನು, ತಗುಲುವ ವೆಚ್ಚವೆಷ್ಟು ಎನ್ನುವ ಮಾಹಿತಿ ಪಡೆದು, ಕೆಲವರು ನೋಂದಣಿ ಮಾಡಿಕೊಂಡಿದ್ದಾರೆ.

-ಶಶಾಂಕ ಡಿ., ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿಸ್ಟ್, ಜೆಎಸ್ಎಸ್ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ ಆ್ಯಂಡ್ ಈಯರಿಂಗ್, ಧಾರವಾಡ

ಈಗಷ್ಟೇ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬಂದಿದ್ದು, ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಗೊಂದಲದಲ್ಲಿದ್ದೆ. ಪ್ರತಿಷ್ಠಿತ ಕಾಲೇಜುಗಳ ಮಳಿಗೆಗಳು ಒಂದೇ ಕಡೆ ಲಭ್ಯವಾದ ಕಾರಣ ಅನುಕೂಲವಾಯಿತು.

–ಬಸವರಾಜ ಜಿಗಳೂರು, ಶ್ರೀರಾಮಕೃಷ್ಣ ವಿದ್ಯಾಶಾಲಾ, ಮೈಸೂರು

ಎಂಜಿನಿಯರಿಂಗ್, ಎಂಬಿಬಿಎಸ್ ಅಷ್ಟೇ ಪ್ರಮುಖ ಕೋರ್ಸ್ಗಳಲ್ಲ. ಅದರ ಹೊರತಾಗಿಯೂ ಸಾಕಷ್ಟು ಕೋರ್ಸ್ಗಳಿವೆ ಎಂಬ ಮಾಹಿತಿ ಮೇಳದಲ್ಲಿ ಸಿಕ್ಕಿತು.. ಸಿಇಟಿ ಬಗ್ಗೆ ತಜ್ಞರಿಂದ ಮಾಹಿತಿ ಜೊತೆಗೆ ಮಾದರಿ ಪರೀಕ್ಷೆ ಬರೆದು ಅನುಭವ ಪಡೆದಿದ್ದೇನೆ.

–ಅನುರಾಧಾ ಎಂ. ದಾಸರೆ, ಪಿ.ಸಿ. ಜಾಬಿನ್ ವಿಜ್ಞಾನ ಮಹಾವಿದ್ಯಾಲಯ, ಹುಬ್ಬಳ್ಳಿ

ದ್ವಿತೀಯ ಪಿಯುಸಿ ನಂತರ ಆಸಕ್ತಿಗೆ ಅನುಗುಣವಾಗಿ ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಮಾಹಿತಿ, ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿಂದ ಮೇಳದಲ್ಲಿ ದೊರಕಿತು.

–ಪ್ರೀತಿ ಹುಡೇದ, ಕೆಎಲ್ಇ ಪ್ರೇರಣ ರೆಸಿಡೆನ್ಶಿಯಲ್ ಕಾಲೇಜ್, ಹುಬ್ಬಳ್ಳಿ

ನೇತ್ರಶಾಸ್ತ್ರ ಕೋರ್ಸ್ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ನಾವು ಬೇರೆ ಬೇರೆ ಕಾಲೇಜುಗಳಿಗೆ ಹೋಗಿ ಈ ಕೋರ್ಸ್ ಬಗ್ಗೆ ತಿಳಿಸುವುದು ಕಷ್ಟ. ಮೇಳಕ್ಕೆ ಬಂದಿದ್ದ ಬಹುತೇಕ ವಿದ್ಯಾರ್ಥಿಗಳು ನಮ್ಮ ಮಳಿಗೆಗೆ ಭೇಟಿ ನೀಡಿ ಈ ಬಗ್ಗೆ ಮಾಹಿತಿ ಪಡೆದರು.

–ಪ್ರದೀಪ್, ಸಹಾಯಕ ಪ್ರಾಧ್ಯಾಪಕ, ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆ

ಸ್ಕಿಲ್ ಸರ್ಕಲ್ನಿಂದ ಹುಬ್ಬಳ್ಳಿಯಲ್ಲಿಯೇ ಡಿಜಿಟಲ್ ಮಾರ್ಕೆಟಿಂಗ್, ಎಐ, ಡಾಟಾ ಸೈನ್ಸ್, ಡಾಟಾ ಅನಾಲಿಸಿಸ್ ಸೇರಿ ಮುಂತಾದ ಕೋರ್ಸ್ ಆರಂಭಿಸಲಾಗಿದೆ. ವಿದ್ಯಾರ್ಥಿಗಳು ಪ್ರಯೋಜನ ಪಡೆಯಬೇಕು.

–ಚಿನ್ಮಯ ಮೋನೆ, ಬ್ರಾಂಚ್ ನಿರ್ದೇಶಕ, ಸ್ಕಿಲ್ ಸರ್ಕಲ್ ಹುಬ್ಬಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.