ಹುಬ್ಬಳ್ಳಿ: ‘ಹಿರಿಯ ನಾಗರಿಕರು ಸಮಾಧಾನದಿಂದ ಇರುವುದನ್ನು ರೂಢಿಸಿಕೊಳ್ಳಬೇಕು. ಸಮಚಿತ್ತ ಭಾವ ಇರಬೇಕು. ಸರ್ವರ ಹಿತ ಬಯಸಬೇಕು’ ಎಂದು ಶಿಕ್ಷಣ ತಜ್ಞ ಮಹೇಶ ಮಾಶ್ಯಾಳ ಹೇಳಿದರು.

ಇಲ್ಲಿನ ಲಿಂಗರಾಜ ನಗರದ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಪ್ರೋಬಸ್ ಕ್ಲಬ್ನಿಂದ ಏರ್ಪಡಿಸಿದ್ದ ಸಭೆ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ‘ಸೆಕೆಂಡ್ ಇನ್ನಿಂಗ್ಸ್; ಬದುಕು ಈಗಷ್ಟೆ ಶುರುವಾಗಿದೆ’ ವಿಷಯದ ಕುರಿತು ಮಾತನಾಡಿದರು.

‘ವಾದ–ವಿವಾದ ಮಾಡದೆ, ಆರೋಗ್ಯಕರ ಸಂವಾದ ಮಾಡಬೇಕು. ಅಂತರಂಗದ ಅರಿವು ಜಾಗೃತಗೊಳಿಸಬೇಕು. ಹಿರಿಯ ನಾಗರಿಕರು ಇತರರಿಗೆ ಸಲಹೆ ನೀಡುವುದನ್ನು ಬಿಟ್ಟು, ಸಮ್ಮತಿ, ಸಹಕಾರ, ಸಂಸ್ಕೃತಿ ಮತ್ತು ಸಮೃದ್ಧಿ ಹೊಂದಿ ಸಂತೋಷವಾಗಿರಬೇಕು’ ಎಂದು ತಿಳಿಸಿದರು.

ಕ್ಲಬ್ ಉಪಾಧ್ಯಕ್ಷ ಎಸ್.ಐ. ಅಂಕಲಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಬಿ.ವಿ. ಹಳೇಮನಿ, ಸದಸ್ಯರಾದ ವಿ.ಬಿ. ಕಣವಿ, ಎಸ್.ಎಸ್. ಕರಡಿ, ಕೆ.ಎಸ್. ಕೌಜಲಗಿ, ನಿರ್ದೇಶಕ ಬಿ.ಎಸ್. ಮಾಳವಾಡ ಇದ್ದರು. ಏಪ್ರಿಲ್ ತಿಂಗಳಲ್ಲಿ ಜನಿಸಿದ ಸದಸ್ಯರ ಜನ್ಮದಿನ ಆಚರಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-24-542399518

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.