ಹುಬ್ಬಳ್ಳಿ: ಇಲ್ಲಿನ ಹಳೇ ಹುಬ್ಬಳ್ಳಿಯ ಕರ್ನಾಟಕ ಎಜುಕೇಷನ್ ವೆಲ್ಫೇರ್ ಮತ್ತು ಕಲ್ಚರಲ್ ಸೊಸೈಟಿಯ ಸಂಸ್ಥಾಪಕ, ಕಾರ್ಯದರ್ಶಿಯ ಹೆಸರಲ್ಲಿ ಕೆಲವರು ನಕಲಿ ರಾಜೀನಾಮೆ ಪತ್ರ ಸೃಷ್ಟಿಸಿ, ನಕಲಿ ಸಹಿ ಹಾಕಿ ಅವರನ್ನೇ ಆಡಳಿತ ಮಂಡಳಿಯಿಂದ ತೆಗೆದು ಹಾಕಿರುವ ಆರೋಪದ ಕುರಿತು ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2009ರ ಜುಲೈನಲ್ಲಿ ಸಹಕಾರ ಸಂಘದ ಅಧಿನಿಯಮದ ಅಡಿ ಸೊಸೈಟಿ ನೋಂದಣಿ ಮಾಡಿದ್ದು, ಸಯ್ಯದಲಾಲ್ ಸವಣೂರು ಅವರು ಸಂಸ್ಥಾಪಕ, ಕಾರ್ಯದರ್ಶಿ ಆಗಿದ್ದರು. 2016ರಲ್ಲಿ ಸಂಘದ ಆಡಳಿತ ಮಂಡಳಿಯ ಕೆಲವರು ಅವರ ಹೆಸರಲ್ಲಿ ನಕಲಿ ಸಹಿ, ನಕಲಿ ಠರಾವು ಹಾಗೂ ನಕಲಿ ರಾಜೀನಾಮೆ ಪತ್ರ ಸೃಷ್ಟಿಸಿ ಆಡಳಿತ ಮಂಡಳಿಯಿಂದ ತೆಗೆದು ಹಾಕಿದ್ದಾರೆ. ಧಾರವಾಡದ ನೋಂದಣಿ ಕಚೇರಿಯಲ್ಲಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹಲ್ಲೆ, ಪ್ರಕರಣ ದಾಖಲು: ಇಲ್ಲಿನ ಹೊಸೂರು ಬಸ್ ನಿಲ್ದಾಣದ ಹಿಂಭಾಗ ಪ್ರವೇಶದ್ವಾರದಲ್ಲಿ ಖಾಸಗಿ ವಾಹನ ಪ್ರವೇಶಿಸುವುದನ್ನು ತಡೆದಿದ್ದ ಗೃಹರಕ್ಷಕ ದಳದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಮೇಲೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೃಹರಕ್ಷಕ ದಳ ಸಿಬ್ಬಂದಿ ಸುರೇಶ ಜಾಧವ ಗಾಯಗೊಂಡಿದ್ದು ಕೆಎಂಸಿ–ಆರ್ಐ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ವೆಂಕಟೇಶ ಕಲಬುರ್ಗಿಯು ಕಾರನ್ನು ಏಕಾಏಕಿ ನಿಲ್ದಾಣದ ಒಳಗೆ ಒಯ್ಯುತ್ತಿದ್ದಾಗ, ಸುರೇಶ ತಡೆದಿದ್ದಾರೆ. ಅದರಿಂದ ಕೋಪಗೊಂಡ ವೆಂಕಟೇಶ ಕಲ್ಲಿನಿಂದ ಅವರ ತಲೆಗೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಳವು: ಇಲ್ಲಿಯ ಶಿವಗಿರಿಯ ಅಪಾರ್ಟ್ಮೆಂಟ್ನಲ್ಲಿರುವ ವಿಜಯಕುಮಾರ ವಿಧಾತೆ ಅವರ ಮನೆ ಬಾಗಿಲಿನ ಬೀಗ ಮುರಿದು, ₹2 ಲಕ್ಷ ಮೌಲ್ಯದ ಮಾಂಗಲ್ಯ ಸರ ಕಳವು ಮಾಡಲಾಗಿದೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-24-2001069695

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.