ಹುಬ್ಬಳ್ಳಿ: ಸಮರ್ಪಕ ವಿದ್ಯುತ್ ಪೂರೈಕೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮೀಣ ಭಾಗದ ನೂರಾರು ರೈತರು ನಗರದ ತಬೀಬ್ ಲ್ಯಾಂಡ್ ಬಳಿಯ ಹೆಸ್ಕಾಂ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಇಪ್ಪತ್ತಕ್ಕೂ ಹೆಚ್ಚು ಎತ್ತಿನ ಬಂಡಿ, ಟ್ರ್ಯಾಕ್ಟರ್ ಮೂಲಕ ಮಂಟೂರ ರಸ್ತೆಯ ವೃತ್ತದಿಂದ ಹೆಸ್ಕಾಂ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿ, ಹೆಸ್ಕಾಂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಬಂದು ಬೇಡಿಕೆ ಈಡೇರಿಸುವ ಭರವಸೆ ನೀಡಬೇಕು. ಅಲ್ಲಿಯವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು. ನಂತರ ಹಿರಿಯ ಅಧಿಕಾರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ರೈತ ಮುಖಂಡ ಇರಣ್ಣ ಜಡಿ ಅವರು, ‘ಕೃಷಿ ಪಂಪ್ಸೆಟ್ಗಳಿಗೆ ಸಮರ್ಪಕವಾಗಿ ಹಾಗೂ ಸಮಯಕ್ಕೆ ಸರಿಯಾಗಿ ವಿದ್ಯುತ್ ಸರಬರಾಜು ಮಾಡದ ಕಾರಣ ನೀರಿಲ್ಲದೆ ಬೆಳೆಗಳು ಕಮರಿ ಹೋಗಿವೆ. ನಿರಂತರವಾಗಿ ದಿನಕ್ಕೆ ಕನಿಷ್ಠ ಏಳು ಗಂಟೆ ತ್ರಿಫೇಸ್ ವಿದ್ಯುತ್ ಪೂರೈಸಬೇಕು ಎಂದು ಸಾಕಷ್ಟು ಬಾರಿ ವಿನಂತಿಸಿಕೊಂಡರೂ ಸ್ಪಂದನೆ ಸಿಗುತ್ತಿಲ್ಲ. ವಿದ್ಯುತ್ ಕಡಿತ ಮಾಡುವ ಮೂಲಕ ರೈತರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಆರ್ಥಿಕ ಸಂಕಷ್ಟದಿಂದ ಕುಟುಂಬ ಬೀದಿಗೆ ಬರುವ ಪರಿಸ್ಥಿತಿ ಎದುರಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುದರಡ್ಡಿ ರಡ್ಡೇರ, ಅಶೋಕ ಹೊಸೂರ, ಸಹದೇವಪ್ಪ ಸುಡಕೇನವರ, ರುದ್ರಯ್ಯ ಕೆ., ಚಿನ್ನಪ್ಪ ಕಾಡಪ್ಪನವರ, ಜಾನಕಪ್ಪ ಬಂಕಾಪುರ, ವೀರಭದ್ರಪ್ಪ ರಾಯನಾಳ, ಉಳವಪ್ಪ ಯಂಟ್ರಾವಿ, ಮಂಜುನಾಥ ಕಟಗಿ, ರಮೇಶ ಕೊಪ್ಪದ, ಹನುಮಂತ ಉಗ್ನಿಕೇರಿ, ನಾಗರಾಜ ಕಮಡೊಳ್ಳಿ ಹಾಗೂ ಇತರರು ಇದ್ದರು.

ಹಳೇ ಹುಬ್ಬಳ್ಳಿ, ಮಾವನೂರ, ಕಟ್ನೂರ, ಗಿರಿಯಾಲ, ಗುಡಿಸಾಗರ, ಇನಾಂವೀರಾಪುರ, ಜಂಗ್ಲಿಪೇಟ, ಬೆಳಗಲಿ, ಚವರಗುಡ್ಡ, ರಾಮಾಪುರ, ಕಂಪ್ಲಿಕೊಪ್ಪ, ಕರಡಿಕೊಪ್ಪ, ಚನ್ನಾಪುರ, ಬಮ್ಮಸಮುದ್ರ, ಬುಡರಸಿಂಗಿ ಭಾಗದ ರೈತರು ಸಹ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-26-373351505

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.