ಹುಬ್ಬಳ್ಳಿ: ‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಫಸಲ್ ಬಿಮಾ ಯೋಜನೆ ರೈತರಿಗೆ ಅನುಕೂಲವಾಗುವ ಬದಲು ಶೋಷಣೆಗೆ ಕಾರಣವಾಗುತ್ತಿದೆ. ಯೋಜನೆಯಲ್ಲಿ ಅವ್ಯವಹಾರ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಭಾರತೀಯ ಕಿಸಾನ್ ಸಂಘ–ಕರ್ನಾಟಕ ಪ್ರದೇಶದ ರಾಜ್ಯಾಧ್ಯಕ್ಷ ಭೀಮಸೇನ ಕೋಕರೆ ಆಗ್ರಹಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಳೆ ವಿಮೆಗಾಗಿ ವಂತಿಗೆ ಪಾವತಿಸಿದ ರೈತರಿಗೆ ಬೆಳೆ ಹಾನಿಯಾದಾಗ ವಿಮೆ ಪರಿಹಾರ ಪಾವತಿಸಬೇಕು. ಆದರೆ, ಐದು–ಆರು ವರ್ಷಗಳಿಂದ ವಂತಿಗೆ ಪಾವತಿಸುತ್ತ ಬಂದ ಯಾವೊಬ್ಬ ರೈತರಿಗೂ ವಿಮೆ ಪರಿಹಾರ ಪಾವತಿಯಾಗಿಲ್ಲ. ಬೆಳೆಹಾನಿಯಿಂದ ನಷ್ಟ ಅನುಭವಿಸಿದ್ದಲ್ಲದೆ, ವಿಮೆಗಾಗಿ ಪಾವತಿಸಿದ ಹಣದಿಂದಲೂ ನಷ್ಟ ಅನುಭವಿಸುವಂತಾಗಿದೆ’ ಎಂದರು.

‘ವಿಮಾ ಕಂಪನಿ, ಕೃಷಿ ಇಲಾಖೆ, ಕಂದಾಯ ಇಲಾಖೆ ಹಾಗೂ ಮಧ್ಯವರ್ತಿಗಳು ಸೇರಿಕೊಂಡು ರೈತರಿಗೆ ಆಮಿಷ ತೋರಿಸಿ, ಅವರಿಂದ ದಾಖಲೆ ಪತ್ರಗಳನ್ನು ಪಡೆದು 50:50 ಅನುಪಾತದಲ್ಲಿ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ. ಯೋಜನೆಗೆ ಒಳಪಡದ ರೈತರ ಬೆಳೆಗಳಿಗೂ ವಿಮಾ ಹಣ ಬರುವಂತೆ ಮಾಡಿದ್ದಾರೆ. ಈ ಅನ್ಯಾಯದ ಕುರಿತು ಕಲಘಟಗಿಯಲ್ಲಿ 12 ದಿನ ನಿರಂತರ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿ ಅವರು ಪ್ರಕರಣ ದಾಖಲಿಸುವಂತೆ ಸೂಚಿಸಿದ್ದಾರೆ. ಸೀಮಿತ ಅವಧಿಯಲ್ಲಿ ತನಿಖೆ ಪೂರ್ಣಗೊಳಿಸಿ ನ್ಯಾಯ ಒದಗಿಸಬೇಕು’ ಎಂದು ವಿನಂತಿಸಿದರು.

ಸಂಘಟನೆಯ ವಿವೇಕ ಮೋರೆ, ರಮೇಶ ಕೊರವಿ, ಪುಟ್ಟಸ್ವಾಮಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-24-1985541139

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.