ಹುಬ್ಬಳ್ಳಿ: ‘ನಗರದ ಗಣೇಶಪೇಟೆಯಲ್ಲಿ ನೂತನವಾಗಿ ನಿರ್ಮಿಸಿದ ಮೀನು ಮಾರುಕಟ್ಟೆಯಲ್ಲಿನ ಮಳಿಗೆಗಳ ಹಂಚಿಕೆಯಲ್ಲಿ ಮೀನು ಮಾರಾಟಗಾರರಿಗೆ ಅನ್ಯಾಯವಾಗಿದೆ’ ಎಂದು ಕರ್ನಾಟಕ ಹಿಂದುಳಿದ ಅಲ್ಪಸಂಖ್ಯಾತರ ವಿಕಾಸ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಯ್ಯದ್ ತನವೀರ ಹಯಾತಸಾಬ್ ಕಿತ್ತೂರ ಆರೋಪಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಳಿಗೆ ನಿರ್ಮಾಣಕ್ಕೆ ಮುನ್ನ ಇದ್ದ ಮಾರಾಟಗಾರರನ್ನು ಬಿಟ್ಟು, ಯಾರ ಒತ್ತಡಕ್ಕೆ ಮಣಿದು ತಮಗೆ ಬೇಕಾದವರಿಗೆ ಮಳಿಗೆ ಹಂಚಿಕೆ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ’ ಎಂದು ಹೇಳಿದರು.

‘ಈ ವಿಚಾರವಾಗಿ ಮುಖ್ಯಮಂತ್ರಿ, ಜಿಲ್ಲಾಧಿಕಾರಿ, ಪಾಲಿಕೆ ಸದಸ್ಯರು ಹಾಗೂ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಮುಖ್ಯಮಂತ್ರಿ, ಜಿಲ್ಲಾಧಿಕಾರಿ ಅವರಿಂದ ಪ್ರತಿಕ್ರಿಯೆಯೂ ಬಂದಿದೆ. ಆದರೆ ಆಯುಕ್ತರು ಮಾತ್ರ ಸ್ಪಂದಿಸಿಲ್ಲ. ನಾವು ನ್ಯಾಯಾಲಯ ಮತ್ತು ಲೋಕಾಯುಕ್ತರ ಮೊರೆ ಹೋಗುತ್ತೇವೆ’ ಎಂದರು.

ಮೀನು ಮಾರಾಟಗಾರ ಇಂತಿಯಾಜ್ ಅಹ್ಮದ್ ಚೌಧರಿ ಅವರು, ‘ಮಳಿಗೆ ನಿರ್ಮಾಣಕ್ಕೂ ಮುನ್ನ 52 ಮೀನು ಮಾರಾಟಗಾರರಿದ್ದರು. ಈಗ ನಿರ್ಮಿಸಿದ್ದು 36 ಮಳಿಗೆ ಮಾತ್ರ. ಮೊದಲು ಇದ್ದವರಲ್ಲಿ ಹೆಚ್ಚೆಂದರೆ 10 ಮಾರಾಟಗಾರರಿಗೆ ಮಾತ್ರ ಮಳಿಗೆ ಸಿಕ್ಕಿರಬಹುದು. ಉಳಿದವರಿಗೆ ಅನ್ಯಾಯ ಆಗಿದೆ’ ಎಂದು ಆಕ್ಷೇಪಿಸಿದರು.

‘ಬಾಕಿ ಉಳಿದ ಬಾಡಿಗೆ ಮೊತ್ತವನ್ನು ಬಡ್ಡಿ ಸಹಿತ ಭರಿಸಬೇಕು. ಈಗ ಮಳಿಗೆ ಪಡೆಯಲು ₹50 ಸಾವಿರ ಮುಂಗಡ ಹಾಗೂ ಒಂದು ವರ್ಷದ ಬಾಡಿಗೆಯನ್ನು ಮುಂಚಿತವಾಗಿಯೇ ತುಂಬಬೇಕು ಎಂದು ಪಾಲಿಕೆಯವರು ಹೇಳುತ್ತಿದ್ದಾರೆ. ಬಡವರಾದ ನಮಗೆ ಅಷ್ಟೊಂದು ಹಣ ತುಂಬಲು ಸಾಧ್ಯವಿಲ್ಲ. ಹಳೆಯ ಬಾಡಿಗೆ ಸಂಪೂರ್ಣ ಮನ್ನಾ ಮಾಡಬೇಕು. ಮುಂಗಡದಲ್ಲಿ ರಿಯಾಯಿತಿ ನೀಡಬೇಕು ಎಂದು ಮನವಿ ಮಾಡಿದ್ದೇವೆ. ಹೊಸಬರಿಗೆ ₹25 ಸಾವಿರಕ್ಕೆ ಕೊಡುತ್ತಿದ್ದಾರೆ. ಅಷ್ಟು ಮೊತ್ತವನ್ನು ನಾವೇ ಭರಿಸುತ್ತಿದ್ದೆವು. ಆದರೆ ಅದಕ್ಕೆ ಸ್ಪಂದಿಸುತ್ತಿಲ್ಲ’ ಎಂದು ಮೀನು ಮಾರಾಟಗಾರ ಇರಿಯಾಸ್ ಹೈರಾತಿ ಅಸಮಾಧಾನ ಹೊರಹಾಕಿದರು. ಮೀನು ಮಾರಾಟಗಾರ ಜಾಕಿರಿಯಾ ಹೊಸೂರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-24-957161123

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.