ಹುಬ್ಬಳ್ಳಿ: ‘ಪಶ್ಚಿಮ ಏಷ್ಯಾ ಯುದ್ಧದ ಪರಿಣಾಮ ಇಂಧನ ಕೊರತೆ ಉಂಟಾಗುತ್ತಿದೆ’ ಎನ್ನುವ ವದಂತಿಗೆ ಆತಂಕಗೊಂಡ ವಾಹನ ಸವಾರರು, ಪೆಟ್ರೋಲ್, ಡೀಸೆಲ್ ಖರೀದಿಸಲು ಬುಧವಾರ ಬೆಳಿಗ್ಗೆ ನಗರದ ಪೆಟ್ರೋಲ್ ಬಂಕ್ಗಳಿಗೆ ಮುಗಿಬಿದ್ದರು. ಸರತಿ ಸಾಲಿನಲ್ಲಿ ನಿಂತು ವಾಹನದ ಜೊತೆಗೆ, ಕ್ಯಾನ್, ಬಾಟಲ್, ಬ್ಯಾರೆಲ್ಗಳಲ್ಲಿ ಇಂಧನ ತುಂಬಿಸಿಕೊಂಡರು.

‘ಪೆಟ್ರೋಲ್ ಖಾಲಿಯಾಗುತ್ತಿದೆ’ ಎನ್ನುವ ವದಂತಿ ಗ್ರಾಮೀಣ ಭಾಗಕ್ಕೂ ವ್ಯಾಪಿಸಿದ್ದರಿಂದ, ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಪೆಟ್ರೋಲ್ ಬಂಕ್ಗಳಲ್ಲೂ ಗ್ರಾಹಕರ ಸಂಖ್ಯೆ ಹೆಚ್ಚಾಗಿತ್ತು. ಕೆಲವರು ನಗರ ಪ್ರದೇಶಕ್ಕೆ ಬಂದು ವಾಹನಗಳಿಗೆ ಇಂಧನ ತುಂಬಿಸಿಕೊಂಡರು.

ನಗರದ ಗೋಕುಲ ರಸ್ತೆ, ಕೇಶ್ವಾಪುರ, ದೇಶಪಾಂಡೆನಗರ, ವಿದ್ಯಾನಗರದಲ್ಲಿರುವ ಬಂಕ್ಗಳಲ್ಲಿ ವಾಹನಗಳ ಸಾಲು ದೊಡ್ಡದಾಗಿತ್ತು. ಮಂಗಳವಾರ ಸಂಜೆಯಿಂದಲೇ ಧಾರವಾಡ ಹಾಗೂ ಇತರ ಭಾಗಗಳಲ್ಲಿ ವದಂತಿ ಹಬ್ಬಿತ್ತು. ಜಿಲ್ಲಾಧಿಕಾರಿ ಆರ್. ಸ್ನೇಹಲ್ ಅವರು ‘ಇಂಧನ ಕೊರತೆಯಿಲ್ಲ, ಜನರು ಆತಂಕಕ್ಕೊಳಗಾಗಬಾರದು. ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದ್ದರು.

ಬುಧವಾರವೂ ಅದೇ ಪರಿಸ್ಥಿತಿ ಮುಂದುವರಿದ ಹಿನ್ನೆಲೆಯಲ್ಲಿ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಐಒಸಿಎಲ್, ಬಿಪಿಸಿಎಲ್ ಮತ್ತು ಎಚ್ಪಿಸಿಎಲ್ ಕಂಪನಿಯ ಮುಖ್ಯಸ್ಥರೊಂದಿಗೆ ನಗರದಲ್ಲಿ ಸಭೆ ನಡೆಸಿ ಚರ್ಚಿಸಿತು. ಜಿಲ್ಲೆಯಲ್ಲಿ ಸಂಗ್ರಹವಿರುವ ಇಂಧನದ ಮಾಹಿತಿ ಪಡೆದು, ‘ವಾಹನ ಹೊರತುಪಡಿಸಿ ಬಾಟಲ್, ಕ್ಯಾನ್ನಲ್ಲಿ ಪೆಟ್ರೋಲ್ ವಿತರಿಸಬಾರದು. ಎಲ್ಲ ಪೆಟ್ರೋಲ್ ಬಂಕ್ನಲ್ಲೂ ಪೋಸ್ಟರ್ ಅಂಟಿಸಿ, ಅನಿಲ ಸಂಗ್ರವಿರುವ ಕುರಿತು ಜನರಿಗೆ ಮಾಹಿತಿ ನೀಡಬೇಕು’ ಎಂದು ಸೂಚಿಸಿತು.

‘ಧಾರವಾಡ ಜಿಲ್ಲೆಯಲ್ಲಿ 190 ಪೆಟ್ರೋಲ್ ಬಂಕ್ಗಳು ಅಸೋಸಿಯೇಷನ್ ವ್ಯಾಪ್ತಿಯಲ್ಲಿವೆ. ಇಂಧನ ಖಾಲಿಯಾಗುತ್ತಿದೆ ಎನ್ನುವ ವದಂತಿಗೆ ಜನರು ಹೆಚ್ಚು ಪೆಟ್ರೋಲ್, ಡೀಸೆಲ್ ಹಾಕಿಸಿಕೊಳ್ಳುತ್ತಿರುವುದರಿಂದಕೆಲವು ಬಂಕ್ಗಳಲ್ಲಿ ಖಾಲಿಆಗಿರಬಹುದು. ಕೆಲವೇ ಗಂಟೆಗಳಲ್ಲಿ ಮತ್ತೆ ಪುನರ್ ಸಂಗ್ರಹಿಸಿ ವಿತರಿಸಲಾಗುತ್ತಿದೆ’ ಎಂದು ಧಾರವಾಡ ಜಿಲ್ಲಾ ಪೆಟ್ರೋಲಿಯಂ ಮಾಲೀಕರು ಹಾಗೂ ಡೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಶಾಂತರಾಜ ಪೋಳ ತಿಳಿಸಿದರು.

ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಡಿಸಿಪಿ ಶ್ರುತಿ ಎಂ.ಎಸ್., ‘ಇಂಧನ ಕೊರತೆಯಾಗುತ್ತಿದೆ ಎನ್ನುವ ವದಂತಿಗೆ ಜನರು ಆತಂಕಿತರಾಗಿ ಬಂಕ್ಗಳಿಗೆ ಮುಗಿಬಿದ್ದಿದ್ದಾರೆ. ಪರಿಸ್ಥಿತಿ ನಿಭಾಯಿಸಲು ಬಂಕ್ಗಳಿಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ವಾಹನ ಹೊರತುಪಡಿಸಿ ಬೇರೆ ಯಾವುದರಲ್ಲೂ ಪೆಟ್ರೋಲ್, ಡೀಸೆಲ್ ನೀಡಬಾರದು ಎಂದು ಬಂಕ್ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ’ ಎಂದರು.

ಮಧ್ಯಾಹ್ನದ ವೇಳೆಗೆ ನಗರದ ಬಹುತೇಕ ಬಂಕ್ಗಳಲ್ಲಿ ‘ಇಂಧನ ಸಂಗ್ರಹವಿದ್ದು, ಯಾರೂ ಆತಂಕಕ್ಕೆ ಒಳಗಾಗಬಾರದು. ವಾಹನ ಹೊರತು ಪಡಿಸಿ ಬಾಟಲ್, ಕ್ಯಾನ್ಗಳಲ್ಲಿ ಇಂಧನ ವಿತರಿಸುವುದಿಲ್ಲ’ ಎನ್ನುವ ಬರಹದ ಪೋಸ್ಟರ್ ಅಂಟಿಸಲಾಗಿತ್ತು. ಪರಿಣಾಮ ಸಂಜೆ ವೇಳೆ ಬಂಕ್ ಎದುರು ಗ್ರಾಹಕರ ಸಂಖ್ಯೆ ಸಹಜ ಸ್ಥಿತಿಯತ್ತ ಬಂದಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-24-1229326240

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.