ಹುಬ್ಬಳ್ಳಿ: ದೆಹಲಿಯಲ್ಲಿ ವ್ಯವಹಾರ ನಡೆಸಲು ಸಹಕರಿಸುವಂತೆ ನಗರದ ಗೋಕುಲ ರಸ್ತೆಯ ಬೆಲ್ಲದ ಕಂಪನಿಯವರನ್ನು ನಂಬಿಸಿ ₹50 ಲಕ್ಷ ಪಡೆದು ವಂಚಿಸಿದ ಉದ್ಯಮಿ ವಿರುದ್ಧ ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೆಹಲಿಯ ಡಿಫೆನ್ಸ್ ಕಾಲೊನಿಯ ಉದ್ಯಮಿ ಮಹೇಂದ್ರಪಾಲ್ ಆರೋರ ವಿರುದ್ಧ, ಕಂಪನಿ ಉದ್ಯೋಗಿ ರಾಮಚಂದ್ರ ರಾವ್ ದೂರು ನೀಡಿದ್ದಾರೆ. ಮಹೇಂದ್ರಪಾಲ್ ಅವರು ಎರಡು ಬಾರಿ ಕಂಪನಿಗೆ ಭೇಟಿ ನೀಡಿ, ದೆಹಲಿಯಲ್ಲಿ ಉದ್ಯೋಗ ನಡೆಸಲು ತಮ್ಮ ಮಾರ್ಗದರ್ಶನ ಹಾಗೂ ಸಹಕಾರ ಬೇಕು ಎಂದು ನಂಬಿಸಿ ಹಣ ವರ್ಗಾಯಿಸಿಕೊಂಡಿದ್ದರು. ನಂತರ ಹಣ ನೀಡದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಗಾಂಜಾ ವಶ: ಗದಗ ರಸ್ತೆಯ ಚಾಲುಕ್ಯ ಹಾಲ್ ಬಳಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಸಿಸಿಬಿ ಪೊಲೀಸರು ಇಬ್ಬರನ್ನು ಬಂಧಿಸಿ, ₹1.21 ಲಕ್ಷ ಮೌಲ್ಯದ 1 ಕೆಜಿ 210 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

ವಿನೋಭಾ ನಗರದ ನಿವಾಸಿ ರೋಹನ್ ಬಂಡಿ ಮತ್ತು ಗಾಂಧಿವಾಡ ನಿವಾಸಿ ಅಮಿತ್ ಕಾಂಬಳೆ ಬಂಧಿತರು. ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-24-623495524

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.