ಹುಬ್ಬಳ್ಳಿ: ನಗರದ ವಿವಿಧೆಡೆ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಂ ಅವರ ಜಯಂತಿಯನ್ನು ಭಾನುವಾರ ಅದ್ದೂರಿಯಾಗಿ ಆಚರಿಸಲಾಯಿತು. ವಿವಿಧ ಸಂಘ–ಸಂಸ್ಥೆಗಳ ಕಾರ್ಯಕರ್ತರು ಇಂದಿರಾಗಾಜಿನ ಮನೆ ಉದ್ಯಾನದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬೈಕ್ ರ್ಯಾಲಿ ನಡೆಸಿ ಸಂಭ್ರಮಿಸಿದರು. ಸರ್ಕಾರಿ ಕಚೇರಿಗಳಲ್ಲಿ, ಶಾಲಾ–ಕಾಲೇಜುಗಳಲ್ಲಿ ಸಭೆ ಸಮಾರಂಭ ನೆರವೇರಿಸಿ ಅವರ ಯಶೋಗಾಥೆ ಬಗ್ಗೆ ತಿಳಿಸಲಾಯಿತು.

ಹು–ಧಾ ಮಹಾನಗರ ಪಾಲಿಕೆ: ಇಂದಿರಾಗಾಂಧಿ ಮನೆ ಉದ್ಯಾನದಲ್ಲಿರುವ ಜಗಜೀವನರಾಂ ಅವರ ಪ್ರತಿಮೆಗೆ ಪಾಲಿಕೆ ವತಿಯಿಂದ ಮಾಲಾರ್ಪಣೆ ಮಾಡಲಾಯಿತು. ಕಮಿಷನರ್ ರುದ್ರೇಶ ಘಾಳಿ ಮಾತನಾಡಿ, ‘ಬಿಹಾರದಲ್ಲಿ ಜನಿಸಿದ ಇವರು, ಹಸಿರು ಕ್ರಾಂತಿಯ ರೂವಾರಿಯಾಗಿ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಮಹಾನ್ ನಾಯಕರು’ ಎಂದರು. ಮೇಯರ್ ಜ್ಯೋತಿ ಪಾಟೀಲ, ಮುಖ್ಯ ಲೆಕ್ಕಾಧಿಕಾರಿ ಶಂಕರಾನಂದ ಬನಶಂಕರಿ, ಉಪ ಆಯುಕ್ತ ಹನುಮಂತ ಆಸಂಗಿ, ಅಧಿಕಾರಿಗಳಾದ ಗಿರೀಶ ತಳವಾರ, ಉಮೇಶ ಸವಣೂರು, ಬಸವರಾಜ ಜಿದ್ದಿ ಹಾಗೂ ಇತರರು ಪಾಲ್ಗೊಂಡಿದ್ದರು.

ತಾಲ್ಲೂಕು ಆಡಳಿತ: ಮಿನಿ ವಿಧಾನಸೌಧದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಹರ ತಹಶೀಲ್ದಾರ್ ಮಹೇಶ ಗಸ್ತೆ ಮಾತನಾಡಿದರು. ‘ದೇಶದಲ್ಲಿರುವ ವಿವಿಧ ಜಾತಿ, ಧರ್ಮಗಳಿಗೆ ತನ್ನದೇ ಆದ ಮಹತ್ವವಿದ್ದು, ಎಲ್ಲರಿಗೂ ಸಮಾನತೆ ತಂದುಕೊಟ್ಟ ಮಹಾನ್ ನಾಯಕ ಬಾಬು ಜಗಜೀವನರಾಂ ಆಗಿದ್ದಾರೆ. ಶೋಷಿತ ಜನರಿಗೆ ಧ್ವನಿಯಾಗಿ, ನ್ಯಾಯ ಸಿಗಬೇಕೆಂದು ಹೋರಾಡಿ, ಜಾತಿ ಪದ್ಧತಿ ಹೋಗಲಾಡಿಸಲು ಶ್ರಮಿಸಿದ ದಿಟ್ಟ ನಾಯಕ ಅವರಾಗಿದ್ದರು’ ಎಂದರು. ಗ್ರಾಮಿಣ ಉಪ ತಹಶೀಲ್ದಾರ್ ಶಿವಾನಂದ, ಶಹರ ಬಿಇಒ ಎಚ್.ಎಂ. ಫಡ್ನೇಶಿ, ಗುರುನಾಥ ಉಳ್ಳಿಕಾಶಿ ಇತರರು ಪಾಲ್ಗೊಂಡಿದ್ದರು.

ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ: ಇಂದಿರಾಗಾಜಿನ ಮನೆಯ ಆವರಣದಲ್ಲಿರುವ ಜಗಜೀವನರಾಂ ಅವರ ಪ್ರತಿಮೆಗೆ ಮಹಾಮಂಡಳದ ವತಿಯಿಂದ ಪುಷ್ಪ ನಮನ ಸಲ್ಲಿಸಲಾಯಿತು. ಈ ವೇಳೆ ಬಾಬು ಜಗಜೀವನರಾಂ ಅವರ ಹೆಸರನ್ನು ಧಾರವಾಡದ ಕೃಷಿ ವಿಶ್ವ ವಿದ್ಯಾಲಯಕ್ಕೆ ಇಡಬೇಕು ಎನ್ನುವ ನಿರ್ಣಯ ಕೈಗೊಳ್ಳಲಾಯಿತು.

ಮಹಾಮಂಡಳದ ಅಧ್ಯಕ್ಷ ಗುರುನಾಥ ಉಳ್ಳಿಕಾಶಿ, ಕೆಎಂಸಿ–ಆರ್ಐ ನಿರ್ದೇಶಕ ಡಾ. ಈಶ್ವರ ಹೊಸಮನಿ, ಡಾ. ಸೂರ್ಯಕಾಂತ, ಡಾ. ರಾಜಶೇಖರ ದ್ಯಾಬೇರಿ, ಪರಶುರಾಮ ಅರಕೇರಿ, ಆನಂದ ಮೊದಲಬಾವಿ, ಪ್ರಭು ಅಣ್ಣಿಗೇರಿ, ಬಸವರಾಜ ತೇರದಾಳ, ಲೋಹಿತ ಗಾಮನಗಟ್ಟಿ, ಶಾಂತರಾಜ ಪೋಳ, ಮಂಜುಳಾ ಬೆಣಗಿ, ಪ್ರಶಾಂತ ವಾಲಿ, ರತ್ನಾ ಗಬ್ಬೂರ, ಯಲ್ಲಪ್ಪ ಬಾಗಲಕೋಟಿ ಇದ್ದರು.

ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ: ಗೋಕುಲ ರಸ್ತೆಯಲ್ಲಿರುವ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು. ಸಂಸ್ಥೆ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಪಿ.ಆರ್. ಕಿರಣಗಿ ಅವರು ಜಗಜೀವನರಾಂ ಅವರ ಜೀವನ ಚರಿತ್ರೆ ಕುರಿತು ಮಾತನಾಡಿದರು. ಮುಖ್ಯ ಉಗ್ರಾಣ ಮತ್ತು ಖರೀದಿ ನಿಯಂತ್ರಣಾಧಿಕಾರಿ ಇಮಾಮ್ ಕಾಸಿಮ್ ಕಂದಗಲ್, ವಿ.ಎಫ್. ಬಿಜಾಪುರ, ಜಯಪ್ಪ ಮಳಗಿ, ದ್ಯಾಮಣ್ಣ ಭಜಂತ್ರಿ, ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-24-1839931955

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.