ಹುಬ್ಬಳ್ಳಿ: ಜೈನ ಮುನಿಗಳು ಮತ್ತು ಸಾಧ್ವಿಯರು ಪಾದಯಾತ್ರೆ ಮಾಡುವಾಗ, ಸೌಲಭ್ಯದ ಜೊತೆಗೆ ಸೂಕ್ತ ರಕ್ಷಣೆ ನೀಡುವಂತೆ ಆಗ್ರಹಿಸಿ ಜೈನ ಸಮುದಾಯದವರು ನಗರದಲ್ಲಿ ಸುರಕ್ಷಾ ಮೆರವಣಿಗೆ ನಡೆಸಿದರು.

ಕಂಚಗಾರ ಗಲ್ಲಿಯ ಶಾಂತಿನಾಥ ಜೈನ ಮಂದಿರದಿಂದ ಮಿನಿ ವಿಧಾನಸೌಧದವರೆಗೆ ಬುಧವಾರ ಮೆರವಣಿಗೆ ನಡೆಸಿದ ಅವರು, ಜಿಲ್ಲಾಧಿಕಾರಿ, ತಹಶೀಲ್ದಾರ್ ಮತ್ತು ಶಾಸಕ ಮಹೇಶ ಟೆಂಗಿನಕಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

‘ರಾಜ್ಯ, ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾದಯಾತ್ರೆ ವೇಳೆ ಅಪಘಾತದಿಂದ ಮುನಿಗಳು, ಸಾಧ್ವಿಯರು ಮೃತಪಟ್ಟಿದ್ದಾರೆ. ಕೆಲ ಅಪಘಾತಗಳು ಸಂಶಯಾಸ್ಪದವಾಗಿವೆ. ಅಂತಹ ಪ್ರಕರಣಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ, ತನಿಖೆಗೆ ಒಳಪಡಿಸಬೇಕು. ಪಾದಯಾತ್ರೆ ಸಂದರ್ಭ ಆಯಕಟ್ಟಿನ ರಸ್ತೆಗಳಲ್ಲಿ ಎಚ್ಚರಿಕೆ ಫಲಕ, ಸುರಕ್ಷತಾ ವಲಯ, ಹೆದ್ದಾರಿ ಗಸ್ತು ನಡೆಸಲು ಭದ್ರತಾ ಸಿಬ್ಬಂದಿ ನಿಯೋಜನೆ, ವಾಹನ ಚಾಲಕರಿಗೆ ಜಾಗೃತಿ, ಪ್ರತ್ಯೇಕ ಪಾದಚಾರಿ ಮಾರ್ಗ ನಿರ್ಮಿಸಬೇಕು’ ಎಂದು ಅವರು ಆಗ್ರಹಿಸಿದರು.

ಆಚಾರ್ಯ ಭಗವಂತ ಶ್ರೀ ಚಂದ್ರಭೂಷಣ ಸೂರೀಶ್ವರ ಮಹಾರಾಜ ಮುನಿ ನೇತೃತ್ವದಲ್ಲಿ ಜಯಂತಿಲಾಲ ಪಿ., ಉಕಚಂದ್ ಬಾಫ್ನಾ, ರಾಜೇಂದ್ರ ಬೀಳ್ಗಿ, ಶರದ್ ಮೋಮಯ, ಶಾಂತಿಲಾಲ ಜೈನ, ಮಹೇಂದ್ರ ಸಿಂಘಿ ಮತ್ತಿತರರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-51-1578500112

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.