ಹುಬ್ಬಳ್ಳಿ: ನಗರದ ಹೊಸೂರು ಕ್ರಾಸ್ ಬಳಿಯ ಜೈನ ಮಂದಿರದಲ್ಲಿ ಮಂಗಳವಾರ ರಾತ್ರಿ ಕಳ್ಳರು ಮೂರ್ತಿ, ನಗದು ಸೇರಿದಂತೆ ₹4.50 ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಾರೆ.

ಮಂದಿರಲ್ಲಿದ್ದ ಮೂರ್ತಿಗಳ ಮೇಲಿದ್ದ ಕಿರೀಟ, ಎರಡು ಚಕ್ರ, ಆರತಿ ತಟ್ಟೆ, ಹುಂಡಿಯಲ್ಲಿದ್ದ ಹಣ ದೋಚಲಾಗಿದೆ. ಕಳ್ಳರ ಚಲನವಲನಗಳು ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಸ್ಥಳಕ್ಕೆ ವಿದ್ಯಾನಗರ ಠಾಣೆ ಪೊಲೀಸರು, ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳದಿಂದ ಸಿಬ್ಬಂದಿ ಭೇಟಿ ಪರಿಶೀಲನೆ ನಡೆಸಿದ್ದಾರೆ. ಉತ್ತರ ವಿಭಾಗದ ಎಸಿಪಿ ಶಿವಾನಂದ ಚಲವಾದಿ, ಜೈನ ಸಮುದಾಯದವರಿಂದ ಘಟನೆ ಕುರಿತು ಮಾಹಿತಿ ಪಡೆದರು. ಈ ಬಗ್ಗೆ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಕಳವು; ಆರೋಪಿ ಬಂಧನ: ಬೈಕ್ಗಳ ಸರಣಿ ಕಳವು ಪ್ರಕರಣವನ್ನು ಭೇದಿಸಿರುವ ವಿದ್ಯಾನಗರ ಠಾಣೆ ಪೊಲೀಸರು, ಆರೋಪಿ, ಭೈರಿದೇವರಕೊಪ್ಪದ ನಿವಾಸಿ ಪ್ರಕಾಶ ಪರಸನ್ನವರ ಎಂಬಾತನನ್ನು ಬಂಧಿಸಿದ್ದಾರೆ.

ಆರೋಪಿಯಿಂದ ₹9 ಲಕ್ಷ ಮೌಲ್ಯದ 7 ಯಮಹಾ ಆರ್ಎಕ್ಸ್–100 ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಕೇಶ್ವಾಪುರ, ನವನಗರ ಸೇರಿ ಹಲವೆಡೆ ಕಳವು ಮಾಡಿದ್ದ. ಅಲ್ಲದೆ, ದಾಂಡೇಲಿಯಲ್ಲಿಯೂ ಬೈಕ್ ಕಳವು ಮಾಡಿರುವುದು ವಿಚಾರಣೆ ವೇಳೆ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಯತ್ನ; ಪ್ರಕರಣ ದಾಖಲು: ತಾಯಿಯ ಮೇಲೆ ಸಂಶಯಪಡುತ್ತಿದ್ದ ಕಾರಣಕ್ಕೆ ಮಕ್ಕಳು ತಂದೆಯ ಮೇಲೆ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿದ ಘಟನೆ ಭೈರಿದೇವರಕೊಪ್ಪದಲ್ಲಿ ನಡೆದಿದ್ದು, ನವನಗರ ಎಂಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಂಗಪ್ಪ ಕುರುಬರ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಅವರ ಪತ್ನಿ ಶೋಭಾ, ಮಕ್ಕಳಾದ ಮನು ಹಾಗೂ ಮೇಘಾ ಎಂಬುವರು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-22-1906959520

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.