ಹುಬ್ಬಳ್ಳಿ: ನವನಗರದ ಪಂಚಾಕ್ಷರಿ ನಗರದಲ್ಲಿರುವ ಕಾಳಿಕಾ ದೇವಸ್ಥಾನದ ಎರಡನೇ ವರ್ಷದ ವರ್ಧಂತಿ ಉತ್ಸವ ಮಾರ್ಚ್ 31 ರಂದು ಬೆಳಿಗ್ಗೆ 8ರಿಂದ ನಡೆಯಲಿದೆ. ದೇವಸ್ಥಾನದಲ್ಲಿ ಕಾಳಿಕಾದೇವಿ, ಗಣೇಶ, ವಿಶ್ವಕರ್ಮ ಹಾಗೂ ನಾಗದೇವತೆಗಳಿಗೆ ಶಂಕರಾಚಾರ್ಯ ಕಡ್ಲಾಸ್ಕರ ಅವರ ನೇತೃತ್ವದಲ್ಲಿ ಅಭಿಷೇಕ, ದುರ್ಗಾ ಹೋಮ, ಪೂಜೆ ನಡೆಯಲಿವೆ.

ಮಧ್ಯಾಹ್ನ 3.30ರಿಂದ ಧಾರ್ಮಿಕ ಸಭೆ ಜರುಗಲಿದ್ದು, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಚಾಲನೆ ನೀಡುವರು. ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಕಾಳಿಕಾ ದೇವಸ್ಥಾನದ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ಖಾತೆಗೆ ಚಾಲನೆ ನೀಡುವರು.

ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ಸುಜ್ಞಾನಮೂರ್ತಿ, ಮಹಾನಗರ ಪಾಲಿಕೆ ಸದಸ್ಯರಾದ ರಾಮಪ್ಪ ಬಡಿಗೇರ, ರಾಜಣ್ಣ ಕೊರವಿ, ಚಂದ್ರಶೇಖರ ಮನಗುಂಡಿ, ಸುನಿತಾ ಮಾಳವದಕರ, ಧಾರವಾಡ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ವಸಂತ ಅರ್ಕಾಚಾರ, ಕಾರ್ಯದರ್ಶಿ ಹನುಮಂತ ನಾಯ್ಕ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-24-189034838

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.