ಹುಬ್ಬಳ್ಳಿ: ಇಲ್ಲಿನ ಅಮರಗೋಳದಲ್ಲಿರುವ ಕರ್ನಾಟಕ ಗೃಹ ಮಂಡಳಿ (ಕೆಎಚ್ಬಿ) ಅಭಿವೃದ್ಧಿಪಡಿಸಿದ 2ನೇ ಹಂತದ ಬಡಾವಣೆಯನ್ನು ಹು–ಧಾ ಮಹಾನಗರ ಪಾಲಿಕೆಗೆ ಹಸ್ತಾಂತರಿಸುವಂತೆ ತಾಲ್ಲೂಕು ಕಾನೂನು ಸೇವಾ ಸಮಿತಿ ಆದೇಶಿಸಿದೆ.

ರಸ್ತೆ, ಬೀದಿ ದೀಪ, ಕುಡಿಯುವ ನೀರು, ಚರಂಡಿ, ಉದ್ಯಾನ, ಬಸ್ ಸೌಕರ್ಯಗಳ ಸಮಸ್ಯೆ ಎದುರಿಸುತ್ತಿದ್ದ ಇಲ್ಲಿನ ನಿವಾಸಿಗಳು, ಮೂಲಸೌಕರ್ಯ ಕಲ್ಪಿಸಲು ಆದೇಶಿಸುವಂತೆ ಕಾನೂನು ಸೇವಾ ಸಮಿತಿಗೆ ಅರ್ಜಿ ಸಲ್ಲಿಸಿದ್ದರು.

‘ಬಡಾವಣೆಯಲ್ಲಿನ ಮೂಲಸೌಕರ್ಯಗಳ ಪುನರ್ನಿರ್ಮಾಣಕ್ಕೆಗೃಹಮಂಡಳಿಯು ಮಹಾನಗರ ಪಾಲಿಕೆಗೆ ₹8 ಕೋಟಿ ಪಾವತಿ ಮಾಡಬೇಕು. ನಿವಾಸಿಗಳು ಕಳೆದ ಆರು ವರ್ಷಗಳ ಆಸ್ತಿ ತೆರಿಗೆಯನ್ನು ಮೂರು ತಿಂಗಳ ಒಳಗಾಗಿ ಪಾಲಿಕೆಗೆ ಭರಿಸಬೇಕು ಹಾಗೂ ಇ–ಸ್ವತ್ತು ಸೇರಿದಂತೆ ಎಲ್ಲ ಸೌಕರ್ಯಗಳನ್ನು ಪಡೆದುಕೊಳ್ಳಬಹುದು. ಆದೇಶದ ದಿನಾಂಕದಿಂದ ಒಂದು ತಿಂಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಬೇಕು’ ಎಂಬ ಷರತ್ತುಗಳನ್ನು ವಿಧಿಸಿ ಮಾರ್ಚ್ 26ರಂದು ಸೂಚಿಸಿದೆ.

‘ಈಗಾಗಲೇ ನೀರಿನ ಸಮಸ್ಯೆ ಕೊಂಚ ಪರಿಹಾರವಾಗಿದೆ. ಈ ಮೊದಲು 10 ದಿನಗಳಿಗೊಮ್ಮೆ ಬರುತ್ತಿದ್ದನೀರು, ಈಗ 4 ದಿನಗಳಿಗೊಮ್ಮೆ ಬರುತ್ತಿದೆ. ಪಾಲಿಕೆಗೆ ಹಸ್ತಾಂತರವಾದ ಬಳಿಕ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುವ ಭರವಸೆ ಇದೆ’ ಎಂದು ಅರ್ಜಿದಾರ ಮೃತ್ಯುಂಜಯ ಮಟ್ಟಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ನಿವಾಸಿಗಳು ಎದುರಿಸುತ್ತಿರುವ ತೊಂದರೆಯ ಕುರಿತು ‘ಪ್ರಜಾವಾಣಿ’ಯ ಜನವರಿ 23ರ ಸಂಚಿಕೆಯಲ್ಲಿ ‘ನೆಮ್ಮದಿ ಸಿಕ್ಕಿಲ್ಲ; ಕಷ್ಟ ಕೇಳುವವರಿಲ್ಲ’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು. ವರದಿಗೆ ಸ್ಪಂದಿಸಿದ ಅಧಿಕಾರಿಗಳು, ಹಸ್ತಾಂತರ ಪ್ರಕ್ರಿಯೆಯನ್ನು ಚುರುಕುಗೊಳಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-24-753294285

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.