ಹುಬ್ಬಳ್ಳಿ: ‘ದುಡಿಯುವ ಕೈಗಳು ಆಳುವ ಕೈಗಳಾಗಬೇಕು. ಶೋಷಣಾರಹಿತ ಸಮಾಜ ನಿರ್ಮಾಣವೇ ಮೇ ದಿನಾಚರಣೆಯ ಮೂಲ ಆಶಯ’ ಎಂದು ಭಾರತೀಯ ಕ್ರಾಂತಿಕಾರಿ ಕಾರ್ಮಿಕ ಸಂಘಗಳ ಒಕ್ಕೂಟದ ಅಧ್ಯಕ್ಷ ಕೆ.ಎಸ್. ಶರ್ಮಾ ಹೇಳಿದರು.

ನಗರದ ಗೋಕುಲ ರಸ್ತೆಯ ವಿಶ್ವಶ್ರಮ ಚೇತನದ ಕೆ.ಎಸ್. ಶರ್ಮಾ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆ, ಸಾಧಕರಿಗೆ ಸನ್ಮಾನ, ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಾರ್ಮಿಕರ ಹಕ್ಕುಗಳಿಗಾಗಿ ಜಗತ್ತಿನಾದ್ಯಂತ ನಿರಂತರ ಹೋರಾಟಗಳು ನಡೆಯುತ್ತಲೇ ಇವೆ. ಆದರೆ, ಇಂದಿಗೂ ಮೇ ದಿನಾಚರಣೆ ಆಶಯ ಪೂರ್ಣವಾಗಿಲ್ಲ. ಕಾರ್ಮಿಕ ದಿನಾಚರಣೆ ಕೇವಲ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ, ಹಾಡು-ನೃತ್ಯಕ್ಕೆ ಸೀಮಿತವಾಗಬಾರದು. ನಿಜವಾದ ಕ್ರಾಂತಿಕಾರಿ ಆಶಯವನ್ನು ಅರಿತು ಸಮಾಜ ಪರಿವರ್ತನೆಗೆ ಮುಂದಾಗಬೇಕು’ ಎಂದು ತಿಳಿಸಿದರು.

‘ಸಮಾಜದಲ್ಲಿ ವರ್ಗ ತಾರತಮ್ಯ ಮತ್ತು ಶೋಷಣೆ ಇನ್ನೂ ಜೀವಂತವಾಗಿದೆ. ದುಡಿಯುವ ವರ್ಗ ಸಂಘಟಿತವಾಗಿ, ಹಕ್ಕುಗಳಿಗಾಗಿ ಹೋರಾಟ ಮುಂದುವರಿಸಬೇಕಿದೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ದುಡಿಯುವ ಜನರೇ ನಾಡಿನ ನಿಜವಾದ ಒಡೆಯರು’ ಎಂದರು.

ಡಾ.ಸಿ.ಸಿ. ಹಿರೇಮಠ, ಸೋಮಶೇಖರ್ ಹುದ್ದಾರ, ಕರ್ನಾಟಕ ರಾಜ್ಯ ದಿನಗೂಲಿ ನೌಕರರ ಮಹಾಮಂಡಲದ ಗೌರವ ಕಾನೂನು ಸಲಹೆಗಾರ ಎನ್.ಬಿ. ಕುಲಕರ್ಣಿ, ಸುಲೋಚನಾ ಕೆ. ಪೋತ್ನಿಸ್, ಡಾ. ಅಶ್ವಿನಿ ಪಾಟೀಲ, ಡಾ. ರೂಪಿಕಾ ಸೇರಿದಂತೆ ವೈದ್ಯಕೀಯ ತಜ್ಞರು, ಕಾರ್ಮಿಕ ಮುಖಂಡರು ಹಾಗೂ ವಿದ್ಯಾರ್ಥಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-24-700205053

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.