ಹುಬ್ಬಳ್ಳಿ: ‘ಅಡುಗೆ ಅನಿಲದ ಸಿಲಿಂಡರ್ ಕಾಳಸಂತೆಯಲ್ಲಿ ಮಾರಾಟ ಮಾಡುವುದು ಕಂಡುಬಂದರೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ಇಲ್ಲಿಯ ಸಂತೋಷ ನಗರದ ಗೃಹ ಕಚೇರಿಯಲ್ಲಿ ಭಾನುವಾರ ಅಧಿಕಾರಿಗಳ ಸಭೆ ನಡೆಸಿ ಅಡುಗೆ ಅನಿಲದ ಸಿಲಿಂಡರ್ ಪೂರೈಕೆಯಲ್ಲಾದ ವ್ಯತ್ಯಯದ ಕುರಿತು ಮಾಹಿತಿ ಪಡೆದರು.

‘ಗೃಹ ಬಳಕೆಗೆ ಪ್ರತಿ ತಿಂಗಳು 11 ಸಾವಿರ ಸಿಲಿಂಡರ್ ಪೂರೈಕೆ ಮಾಡಲಾಗುತ್ತಿತ್ತು. ಈಗ ಅದಕ್ಕಿಂತಲೂ ಹೆಚ್ಚು ಪೂರೈಕೆ ಮಾಡಲಾಗುತ್ತಿದೆ. ಗ್ರಾಹಕರ ನೋಂದಣಿ ಪ್ರಮಾಣ ಹೆಚ್ಚಳ ಆಗಿರುವುದಿಂದ ಬೇಡಿಕೆ ಹೆಚ್ಚಿದೆ. ವಾಣಿಜ್ಯ ಬಳಕೆಗೆ ಮಾತ್ರ ಸಿಲಿಂಡರ್ ಕೊರತೆ ಉದ್ಭವಿಸಿದೆ. ಅವರಿಗೆ ಶೇ 20ರಷ್ಟು ಮಾತ್ರ ಪೂರೈಕೆ ಮಾಡಲಾಗುತ್ತಿದೆ’ ಎಂದು ಅಧಿಕಾರಿಗಳು ಶಾಸಕರಿಗೆ ಮಾಹಿತಿ ನೀಡಿದರು.

‘ನಿತ್ಯ ಬಳಕೆಯಲ್ಲಿ ಸಮಸ್ಯೆ ಕಂಡು ಬರದಿದ್ದರೂ, ಸಿಲಿಂಡರ್ ಅಭಾವದ ಸುದ್ದಿ ಕೇಳಿಬರುತ್ತಿದೆ. ಗ್ರಾಹಕರಿಗೆ ಸಮಸ್ಯೆಯಾಗದಂತೆ ಅಡುಗೆ ಅನಿಲದ ಸಿಲಿಂಡರ್ ಪೂರೈಸಬೇಕು. ಅಕ್ರಮವಾಗಿ ಮಾರಾಟ ಮಾಡುವುದು ಕಂಡುಬಂದಲ್ಲಿ ಅಂತಹ ವಿತರಕರ ಪರವಾನಗಿ ರದ್ದುಪಡಿಸಬೇಕು’ ಎಂದು ಶಾಸಕ ಅಬ್ಬಯ್ಯ ಅಧಿಕಾರಿಗಳಿಗೆ ಸೂಚಿಸಿದರು.

‘ಎಲ್ಲ ಏಜನ್ಸಿಗಳಿಗೆ ಭೇಟಿ ನೀಡಿ, ದಾಸ್ತುನು ಹಾಗೂ ಪೂರೈಕೆ ಮಾಡುವ ಪ್ರಮಾಣ ಪರಿಶೀಲಿಸಬೇಕು. ಜನರ ಸಹಜ ಜೀವನಕ್ಕೆ ಸಿಲಿಂಡರ್ ಪೂರೈಕೆಯಲ್ಲಿ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು’ ಎಂದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕ ವಿನೋದಕುಮಾರ, ಹುಬ್ಬಳ್ಳಿ ಸಹಾಯಕ ನಿರ್ದೇಶಕ ಕೇಶವ ರಾಯ್ಕರ್, ಆಹಾರ ನಿರೀಕ್ಷಕರಾದ ವಿಜಯಕುಮಾರ, ಶಿವು ಹೊನ್ನಳ್ಳಿ, ಅರವಿಂದ ಅಂಗಡಿ, ಮಾರುಕಟ್ಟೆ ನೋಡಲ್ ಅಧಿಕಾರಿ ಸಂಜೀವಕುಮಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.