ಹುಬ್ಬಳ್ಳಿ: ‘ಮಲಪ್ರಭಾ ಬಲದಂಡೆ ಮತ್ತು ಎಡದಂಡೆ ಪುನರ್ ಅಭಿವೃದ್ಧಿ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ. ಈ ಬಗ್ಗೆ ಐವರ ಸಮಿತಿ ರಚಿಸಿ, ಪುನಃ ತನಿಖೆ ನಡೆಸಬೇಕು’ ಎಂದು ರೈತ ಸೇನಾ ಕರ್ನಾಟಕ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.

‘ಪ್ರಕರಣದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವಂತೆ ನನಗೆ ಕೆಲ ಅಧಿಕಾರಿಗಳು ಆಮಿಷವೊಡ್ಡಿದ್ದು, ಇದು ತನಿಖೆ ಆಗಬೇಕು. ಇದಕ್ಕೆ ಸ್ಪಂದಿಸದಿದ್ದರೆ, ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರೊಂದಿಗೆ ಹೋರಾಟ ನಡೆಸಲಾಗುವುದು. ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗುವುದು’ ಎಂದು ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

‘ಮಲಪ್ರಭಾ ಬಲದಂಡೆ ಮತ್ತು ಎಡದಂಡೆ ಪುನರ್ ಅಭಿವೃದ್ಧಿ ಕಾಮಗಾರಿಗೆ ₹ 2,168.39 ಕೋಟಿ ವೆಚ್ಚವಾಗಿದೆ. ಆದರೆ, ಕಾಮಗಾರಿ ಕಳಪೆಯಾಗಿದೆ. ವಿಸ್ತೃತ ಯೋಜನಾ ವರದಿ (ಡಿಪಿಆರ್) ಇಲ್ಲದಿದ್ದರೂ ಈ ಹಣದಲ್ಲಿ ಪ್ರವಾಸಿ ಮಂದಿರ, ವಸತಿಗೃಹಗಳನ್ನು ನಿರ್ಮಿಸಲಾಗಿದೆ. ಈ ಕಾಮಗಾರಿಯೂ ಕಳಪೆಯಾಗಿದೆ’ ಎಂದು ಅವರು ದೂರಿದರು.

‘ಕಳಪೆ ಕಾಮಗಾರಿ ಕುರಿತು ಕಳೆದ ವರ್ಷ ಜೂನ್ನಲ್ಲಿ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ತನಿಖಾಧಿಕಾರಿ ಯೋಗೇಶ ಎಂಬುವರು ತನಿಖೆ ನಡೆಸಿ, ಎಲ್ಲವೂ ಸರಿ ಇದೆ ಎಂದು ವರದಿ ನೀಡಿದರು. ತನಿಖಾಧಿಕಾರಿ ಮತ್ತು ನೀರಾವರಿ ಇಲಾಖೆ ಸೂಪರಿಟೆಂಡೆಂಟ್ ಎಂಜಿನಿಯರ್ ಶ್ರೀನಿವಾಸ ಮಲ್ಲಿಗವಾಡ ಅವರು ಹೊಂದಾಣಿಕೆ ಮಾಡಿಕೊಳ್ಳಲು ಆಮಿಷವೊಡ್ಡಿದ್ದರು. ಅದರ ಆಡಿಯೊ ಮತ್ತು ಕಳಪೆ ಕಾಮಗಾರಿ ಚಿತ್ರಗಳನ್ನು ಒಳಗೊಂಡ ಸಿಡಿಗಳನ್ನು ಲೋಕಾಯುಕ್ತ, ಮುಖ್ಯಮಂತ್ರಿಗೆ ಕಳಿಸಲಾಗಿದೆ’ ಎಂದರು.

ಸಂಘಟನೆಯ ಮುಖಂಡರಾದ ಮಲ್ಲಣ್ಣ ಆಲೇಕಾರ, ಗುರು ರಾಯನಗೌಡ್ರ, ಕರ್ಜಗಿಮಠ, ಶಿವಪ್ಪ ಹೊರಕೇರಿ, ಅಶೋಕ ಸಾತಣ್ಣವರ, ರಮೇಶ ಗಡ್ಡೇಣ್ಣವರ, ಶಿವು ಬಡಿಗೇರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-24-1554776337

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.