ಹುಬ್ಬಳ್ಳಿ: ‘ಸಾಮೂಹಿಕ ವಿವಾಹ ಎಂದರೆ ಬಡವರ ಮದುವೆಗಳು ಎನ್ನುವ ಭಾವನೆ ಇದೆ. ಅದನ್ನು ಕಿತ್ತೆಸೆದು ಪುಣ್ಯದ ಕೆಲಸ ಎಂದು ಭಾವಿಸಬೇಕು’ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ನಗರದ ಅಕ್ಷಯ ಪಾರ್ಕ್ನ ಸಂತೆ ಮೈದಾನದಲ್ಲಿ ಕ್ಷಮತಾ ಸೇವಾ ಸಂಸ್ಥೆ ಹಾಗೂ ನವಯುಗ ಸಂಘಟನೆಯಿಂದ ಭಾನುವಾರ ಏರ್ಪಡಿಸಿದ್ದ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಮತ್ತು ಉಪನಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನವಯುಗ ಸಂಘಟನೆ ಪ್ರತಿ ವರ್ಷವೂ ಉಚಿತ ಸಾಮೂಹಿಕ ವಿವಾಹ ಮಾಡುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ. ಸಂಘಟನೆಯ ಸೇವಾ ಮನೋಭಾವ ವಿಶೇಷವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖಂಡ ಸುಭಾಸ್ ಸಿಂಗ್ ಜಮಾದಾರ ಮಾತನಾಡಿ, ‘ಇಂದಿನ ದಿನಗಳಲ್ಲಿ ವ್ಯಕ್ತಿಗತ ಕಾರ್ಯಗಳಿಗೆ ಜನರು ಹೆಚ್ಚು ಮಹತ್ವ ನೀಡುತ್ತಾರೆ. ಆದರೆ, ಕೃಷ್ಣಾ ಗಂಡಗಾಳೆಕರ್ ಅವರು ಸಾಮಾಜಿಕ ಬದ್ಧತೆಯಿಂದ ಪ್ರತಿವರ್ಷ ಉಚಿತ ಸಾಮೂಹಿಕ ವಿವಾಹ ಏರ್ಪಡಿಸುತ್ತಿದ್ದಾರೆ. ಮದುವೆಯಲ್ಲಿ ಧರ್ಮ, ಸಂಸ್ಕಾರದಂತಹ ಮೌಲ್ಯಗಳನ್ನು ಅಳವಡಿಸಿದ್ದಾರೆ. ಸಂಸ್ಕಾರಗಳ ಮೂಲಕ ನವಜೋಡಿಗಳು ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡುತ್ತಿರುವುದು ವಿಶಿಷ್ಟವಾಗಿದೆ’ ಎಂದು ಹೇಳಿದರು.

ಬಿಜೆಪಿ ಶಿಸ್ತು ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಲಿಂಗರಾಜ ಪಾಟೀಲ, ‘ಶ್ರೀಮಂತರು ಅದ್ದೂರಿಯಾಗಿ ಮದುವೆ ಮಾಡುತ್ತಾರೆ, ಇನ್ನೊಂದೆಡೆ ಬಡವರು ಮದುವೆ ಮಾಡಲು ಪರದಾಡುವ ಪರಿಸ್ಥಿತಿ ಇರುತ್ತದೆ. ಇಂತಹ ಬಡ ಕುಟುಂಬಗಳಿಗೆ ನೆರವಾಗಲು ನವಯುಗ ಸಂಘಟನೆ 24 ವರ್ಷಗಳಿಂದ ಸಾಮೂಹಿಕ ವಿವಾಹ ಮಾಡಿಕೊಂಡು ಬರುತ್ತಿದೆ’ ಎಂದರು.

ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ನವಯುಗ ಸಂಘಟನೆ ಅಧ್ಯಕ್ಷ ಕೃಷ್ಣಾ ಗಂಡಗಾಳೆಕರ, ತೋಟಪ್ಪ ನಿಡಗುಂದಿ ಮಾತನಾಡಿದರು.

ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮೀಜಿ, ಆನಂದಗುರು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಉದ್ಯಮಿ ರಮೇಶ ಪಾಟೀಲ, ಮುಖಂಡರಾದ ಸುಬ್ರಹ್ಮಣ್ಯ ಶಿರಕೋಳ, ರವಿ ನಾಯಕ, ನಾಗರಾಜ ಕಲಾಲ, ಸೀಮಾ ಲದ್ವಾ, ಪ್ರವೀಣ ಪವಾರ, ರವಿ ಬಂಕಾಪುರ, ಕೊಟ್ರೇಶ, ಅಕ್ಕಮ್ಮ ಹೆಗಡೆ ಇದ್ದರು.

ಹುಬ್ಬಳ್ಳಿಯ ಎರಡತ್ತಿನ ಮಠದ ಸ್ವಾಮೀಜಿ ಅವರ ನೇತೃತ್ವದಲ್ಲಿ ವಿವಾಹ ಮತ್ತು ಉಪನಯನ ಸಂಸ್ಕಾರ ಕಾರ್ಯ ನೆರವೇರಿದವು. ವಧು– ವರರಿಗೆ ಬಂಗಾರದ ತಾಳಿ, ಬೆಳ್ಳಿ ಕಾಲುಂಗರ, ಸೀರೆ, ರವಿಕೆ, ಪಂಚೆ, ಶರ್ಟ್, ಟೋಪಿ ಹಾಗೂ ಬಾಸಿಂಗ್ ನೀಡಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-24-1372977230

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.