ಕೊಪ್ಪಳ: ವಿವಿಧ ಸಂಘಟನೆಗಳ ಸಹಯೋಗದಲ್ಲಿ ಮೇ 16 ಹಾಗೂ 17ರಂದು ಹುಬ್ಬಳ್ಳಿಯ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ 12ನೇ ವರ್ಷದ ಮೇ ಸಾಹಿತ್ಯ ಮೇಳ ನಡೆಯಲಿದ್ದು, ಜಿಲ್ಲೆಯಿಂದ 200 ಜನ ಪಾಲ್ಗೊಳ್ಳುವರು.

ಮೇಳದ ಪ್ರಮುಖರಾದ ಅಲ್ಲಮಪ್ರಭು ಬೆಟ್ಟದೂರು ಹಾಗೂ ರತ್ನಾಕರ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಸಾಂವಿಧಾನಿಕ ಪ್ರಜಾಸತ್ತೆಯ ಮೇಲಿನ ದಾಳಿ; ಚಹರೆಗಳು ಮತ್ತು ಹೊರದಾರಿಗಳು’ ಕುರಿತು ಮೇಳದಲ್ಲಿ ಪ್ರಮುಖವಾಗಿ ಚರ್ಚೆಯಾಗಲಿದೆ. ನರಗುಂದ–ನವಲಗುಂದ ರೈತ ಬಂಡಾಯ ವೇದಿಕೆ ಮೂಲಕ ಕಾರ್ಯಕ್ರಮಗಳು ಜರುಗಲಿವೆ’ ಎಂದು ತಿಳಿಸಿದರು.

ಗದಗನ ಲಡಾಯಿ ಪ್ರಕಾಶನ, ಧಾರವಾಡದ ಚಿತ್ತಾರ ಕಲಾ ಬಳಗ, ಕವಲಕ್ಕಿ ಕವಿ ಪ್ರಕಾಶನ ಹಾಗೂ ಮೇ ಸಾಹಿತ್ಯ ಮೇಳದ ಬಳಗ ಕಾರ್ಯಕ್ರಮ ಹಮ್ಮಿಕೊಂಡಿದ್ದು ಚಿತ್ರಕಲಾ ಪ್ರದರ್ಶನ ಮಳಿಗೆ, ಹೋರಾಟದ ಹಾಡುಗಳು, ಉದ್ಘಾಟನಾ ಗೋಷ್ಠಿ, ಬೆಂಗಳೂರಿನ ಸಹಚಾರಿ ನೃತ್ಯ ತಂಡದ ಕಲಾವಿದೆಯರಿಂದ ನರ್ತನ ಪ್ರಸ್ತುತಿ, ಸಾಂವಿಧಾನದ ಪ್ರಜಾಸತ್ತೆ ಸ್ವರೂಪ–ಸಂಘರ್ಷದ ಇತಿಹಾಸ, ಕವಿಗೋಷ್ಠಿ, ಎಸ್ಐಆರ್ ರದ್ದುಗೊಳಿಸಿ ಪ್ರತಿಭಟನಾ ಜಾಥಾ, ವಿವಿಧ ವಿಷಯಗಳ ಕುರಿತು ವಿಚಾರ ಸಂಕಿರಣ ಆಯೋಜಿಸಲಾಗಿದೆ.

ಪ್ರಮುಖರಾದ ರಂಗಕರ್ಮಿ ಶರಣು ಶೆಟ್ಟರ್, ಸಾಹಿತಿ ದೇವೇಂದ್ರಪ್ಪ ಬಡಿಗೇರ ಹಾಗೂ ಶುಕ್ರರಾಜ ತಾಳಿಕೇರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.