ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯ ಹೊಸ ಬಸ್ನಿಲ್ದಾಣಕ್ಕೆ ಜಗಜ್ಯೋತಿ ಬಸವೇಶ್ವರ ಅಥವಾ ಕಿತ್ತೂರ ರಾಣಿ ಚನ್ನಮ್ಮ ಹೆಸರಿಡಬೇಕು ಎಂದು ಆನಂದನಗರದ ಅಂಬಣ್ಣವರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಲಿಂಗಾಯತ ಸಮಾಜದ ಸದಸ್ಯರು ಸ್ಥಳೀಯ ಶಾಸಕರಾದ ಶಾಸಕ ಮಹೇಶ ಟೆಂಗಿನಕಾಯಿ, ಪ್ರಸಾದ ಅಬ್ಬಯ್ಯ ಮತ್ತು ಅರವಿಂದ ಬೆಲ್ಲದ ಅವರಿಗೆ ಭಾನುವಾರ ಮನವಿ ಪತ್ರ ಸಲ್ಲಿಸಿದರು.

‘ನಗರದಲ್ಲಿ ಹಳೇ, ಹೊಸ ಮತ್ತು ಹೊಸೂರು ಬಸ್ ನಿಲ್ದಾಣಗಳಿದ್ದು, ಹೊರಗಡೆಯಿಂದ ಬರುವ ಪ್ರಯಾಣಿಕರಿಗೆ ನಿರ್ದಿಷ್ಟ ಊರುಗಳಿಗೆ ತೆರಳಲು ಯಾವ ಬಸ್ ನಿಲ್ದಾಣಕ್ಕೆ ಹೋಗಬೇಕೆಂದು ತಿಳಿಯದೆ ಗೊಂದಲಕ್ಕೊಳಗಾಗುತ್ತಿದ್ದಾರೆ. ಹಳೇ ಬಸ್ ನಿಲ್ದಾಣ ನವೀಕರಣವಾಗಿದ್ದು, ಅದಕ್ಕೂ ಹೊಸ ಬಸ್ ನಿಲ್ದಾಣ ಎಂದು ಕರೆಯುತ್ತಾರೆ. ಇಲ್ಲಿರುವ ಮೂರು ಬಸ್ ನಿಲ್ದಾಣಗಳಿಗೆ ನಿರ್ದಿಷ್ಟ ಹೆಸರಿಲ್ಲದಿರುವುದರಿಂದ ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಸವಣ್ಣ, ಚನ್ನಮ್ಮ ಮತ್ತು ಬೆಳವಡಿ ಮಲ್ಲಮ್ಮ ಅವರ ಹೆಸರು ಇಡುವಂತೆ ಸದನದಲ್ಲಿ ಒತ್ತಾಯಿಸಬೇಕು’ ಎಂದು ಆಗ್ರಹಿಸಿದರು.

‘ಬಸವೇಶ್ವರರು ಸರ್ವಧರ್ಮದವರನ್ನು ಸಮಭಾವದಿಂದ ಕಂಡವರು. ಮೇಲು, ಕೀಳೆನ್ನದೆ ಸಮಾನತೆಯ ತತ್ವ ಜಗತ್ತಿಗೆ ಸಾರಿದ ಸಾಂಸ್ಕೃತಿಕ ನಾಯಕ. ಕಿತ್ತೂರು ರಾಣಿ ಚನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿದ ಅಪ್ರತಿಮ ಹೋರಾಟಗಾರ್ತಿ. ಇಂತಹ ಮಹಾನ್ ವ್ಯಕ್ತಿಯ ಹೆಸರನ್ನು ಗೋಕುಲ ರಸ್ತೆಯ ಹೊಸ ಬಸ್ನಿಲ್ದಾಣಕ್ಕೆ ಇಡುವ ಮೂಲಕ, ಹುಬ್ಬಳ್ಳಿಯ ಘನತೆಯನ್ನು ಮತ್ತಷ್ಟು ಹೆಚ್ಚಿಸಬಹುದು’ ಎಂದು ಎರಡೂ ಸಂಘಟನೆಗಳು ಮನವಿ ಪತ್ರದಲ್ಲಿ ತಿಳಿಸಿವೆ.

ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ, ‘ಎರಡು, ಮೂರು ನಾಯಕರ ಹೆಸರು ಮುಂದಿಟ್ಟುಕೊಂಡು ಸದನದಲ್ಲಿ ಧ್ವನಿ ಎತ್ತುವುದು ಕಷ್ಟವಾಗುತ್ತದೆ. ಲಿಂಗಾಯತ ಸಮಾಜದವರೆಲ್ಲ ಸಭೆ ನಡೆಸಿ ಹೊಸ ಬಸ್ ನಿಲ್ದಾಣಕ್ಕೆ ಒಂದು ನಿರ್ದಿಷ್ಟ ಹೆಸರನ್ನು ನಾಮಕರಣ ಮಾಡುವಂತೆ ಒಮ್ಮತದಿಂದ ನಿರ್ಧಾರ ಮಾಡಿ, ಹೆಸರು ಸೂಚಿಸಿದರೆ ಸರ್ಕಾರ ಹಾಗೂ ಸಾರಿಗೆ ಸಚಿವರಿಗೆ ಒತ್ತಾಯಿಸಲು ಸಹಾಯವಾಗಲಿದೆ’ ಎಂದರು.

ಶಾಸಕರಾದ ಅರವಿಂದ ಬೆಲ್ಲದ ಮತ್ತು ಪ್ರಸಾದ ಅಬ್ಬಯ್ಯ ಅವರ ನಿವಾಸಕ್ಕೂ ತೆರಳಿ ಮನವಿ ಪತ್ರ ಸಲ್ಲಿಸಿದರು. ಅಂಬಣ್ಣವರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಶ್ರೀನಿವಾಸ ಉಳ್ಳಿಕಾಶಿ, ಲಿಂಗಾಯತ ಸಮಾಜದ ವತಿಯಿಂದ ವೀರಣ್ಣ ನೀರಲಗಿ ನೇತೃತ್ವದಲ್ಲಿ ಸುಮಾರು 30ಕ್ಕೂ ಹೆಚ್ಚು ಮಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.