ಹುಬ್ಬಳ್ಳಿ: ‘ಬಾಯಿ ಕ್ಯಾನ್ಸರ್ಗೆ ಉಚಿತ ತಪಾಸಣೆ ಹಾಗೂ ಗುಟ್ಕಾ, ತಂಬಾಕು ಚಟ ಬಿಡಿಸಲು ವಿಶೇಷ ಶಿಬಿರವನ್ನು ಮೇ 31ರಂದು ಬೆಳಿಗ್ಗೆ 10 ಗಂಟೆಗೆ ಇಲ್ಲಿನ ಕಲ್ಯಾಣ ನಗರದ ಲೇಸರ್ ವೇದಾ ಡೆಂಟಲ್ ಇನ್ಸ್ಟಿಟ್ಯೂಟ್ನಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ವೇದ ಯಾವಗಲ್ ಹೆಲ್ತ್ ಕೇರ್ ಫೌಂಡೇಷನ್ ನಿರ್ದೇಶಕ ಡಾ.ಚಂದ್ರಶೇಖರ ಯಾವಗಲ್ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಾಯಿ ಕ್ಯಾನ್ಸರ್ನಲ್ಲಿ ದೇಶ ಮೊದಲ ಸ್ಥಾನದಲ್ಲಿದೆ. ಪ್ರತಿ 90 ಸೆಕೆಂಡ್ಗೆ ಒಬ್ಬ ವ್ಯಕ್ತಿಯಲ್ಲಿ ಬಾಯಿ ಕ್ಯಾನ್ಸರ್ಗೆ ಕಂಡು ಬರುತ್ತಿದೆ. ಗುಟ್ಕಾ, ತಂಬಾಕು, ಪಾನ್ ಸೇವನೆಯ ಚಟ ಇಲ್ಲದವರಲ್ಲಿಯೂ ಬಾಯಿ ಕ್ಯಾನ್ಸರ್ ಕಂಡುಬಂದ ಉದಾಹರಣೆಗಳಿವೆ’ ಎಂದರು.

‘ಜನರು ಮಧುಮೇಹ, ರಕ್ತದೊತ್ತಡ ತಪಾಸಣೆ ಜತೆಯಲ್ಲಿ ಆಗಾಗ್ಗೆ ಬಾಯಿ ಕ್ಯಾನ್ಸರ್ ಬಗ್ಗೆಯೂ ತಪಾಸಣೆ ಮಾಡಿಸಬೇಕು. ಓರಲ್ ಬ್ಲೂ ಲೇಸರ್ ತಪಾಸಣೆ ಮೂಲಕ ಬಾಯಿಯ ಚರ್ಮವನ್ನು ಪರೀಕ್ಷಿಸಿ, ಐದು ನಿಮಿಷದಲ್ಲಿ ಬಾಯಿ ಕ್ಯಾನ್ಸರ್ ಇರುವುದನ್ನು ಪತ್ತೆ ಮಾಡಬಹುದು. ಈ ತಪಾಸಣೆ ಮೂಲಕ ಒಂದು ದಿನದಲ್ಲಿ 500 ಜನರ ಬಾಯಿ ಕ್ಯಾನ್ಸರ್ ಪತ್ತೆ ಮಾಡಬಹುದು’ ಎಂದು ಹೇಳಿದರು.

‘ಸಿನಿಮಾ ಕಲಾವಿದರ ಜಾಹೀರಾತುಗಳಿಗೆ ಮರುಳಾಗಿ ಯುವಕರು ಗುಟ್ಕಾ, ತಂಬಾಕು ಸೇವನೆಯಂತಹ ಚಟಗಳಿಗೆ ದಾಸರಾಗಬಾರದು. ಈ ಚಟ ಬಿಡಿಸಲು ಶಿಬಿರದಲ್ಲಿ ಅಗತ್ಯ ಏರ್ಪಾಡು ಮಾಡಿಕೊಳ್ಳಲಾಗಿದ್ದು, ಮೂರು ರೀತಿಯ ಚಿಕಿತ್ಸೆ ನೀಡಲಾಗುತ್ತದೆ’ ಎಂದು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-24-1128017214

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.