ಹುಬ್ಬಳ್ಳಿ: ನಗರದ ಅಕ್ಕಿಪೇಟೆಯಲ್ಲಿನ ಪಾರ್ಶ್ವನಾಥ ದಿಗಂಬರ ಜಿನಮಂದಿರದಲ್ಲಿ ಶನಿವಾರ ಪಂಚಕಲ್ಯಾಣ ಮಹೋತ್ಸವವು ಶ್ರಾವಕ, ಶ್ರಾವಕಿಯರ ಸಂಭ್ರಮದೊಂದಿಗೆ ಆರಂಭವಾಯಿತು.

ಇದೇ ವೇಳೆ ಆಚಾರ್ಯ ಪುಣ್ಯಸಾಗರ ಮಹಾರಾಜರ ಸಾನ್ನಿಧ್ಯದಲ್ಲಿ ಧ್ವಜಾರೋಹಣ ನೆರವೇರಿತು.

ಜಿನಬಿಂಬಗಳನ್ನು ಎತ್ತಿಕೊಂಡ ಇಂದ್ರ ವೇಷ ಧಾರಿ ಶ್ರಾವಕ ಶ್ರಾವಕಿಯರನ್ನು ಹೊತ್ತ ಆನೆ, ರಥಗಳು ಜಿನಭಕ್ತಿ ಸಂಗೀತದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಿತು.

ಮಂಗಲ ಕಲಶ ಸ್ಥಾಪನೆ, ಯಾಗ ಮಂಟಪ ಉದ್ಘಾಟನೆ, ಸಭಾಮಂಟಪ ಉದ್ಘಾಟನೆಗಳು ನಡೆದವು. ಎಸ್ಡಿಎಂನ ಪದ್ಮಲತಾ ನಿರಂಜನ ಕುಮಾರ್ ಅವರು ದೀಪ ಬೆಳಗಿಸಿದರು. ನಂತರ ಜಿನ ಪ್ರತಿಮೆಗಳಿಗೆ ಅಭಿಷೇಕ, ಯಾಗಮಂಡಲ ಆರಾಧನೆ ನಡೆಯಿತು.

ಈ ವೇಳೆ ಆಶೀರ್ವಚನ ನೀಡಿದ ಆಚಾರ್ಯ ಪುಣ್ಯಸಾಗರರು, ‘ಲೋಕ ಕಲ್ಯಾಣಕ್ಕಾಗಿ ಕಾಲಕಾಲಕ್ಕೆ ತೀರ್ಥಂಕರರ ಜನನವಾಗುತ್ತದೆ. ಸಾರ್ವಜನಿಕರ ಸುಖ, ಶಾಂತಿ, ನೆಮ್ಮದಿಗಾಗಿ ಅವರು ಮಾರ್ಗ ತೋರುತ್ತಾರೆ’ ಎಂದರು.

ಭಾನುವಾರ ಜನ್ಮ ಕಲ್ಯಾಣ, ಉತ್ಸವ ಅಭಿಷೇಕ, ರಾಜದರ್ಬಾರ ಹಾಗೂ ದೀಕ್ಷಾ ಕಲ್ಯಾಣ ಕಾರ್ಯಕ್ರಮ ನಡೆಯಲಿದೆ ಎಂದು ಶಾಂತಿನಾಥ ಹೋತಪೇಟಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-24-866392755

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.