ಹುಬ್ಬಳ್ಳಿ: ಅಕ್ಕಿಪೇಟೆಯ ಜಿನಮಂದಿರದಲ್ಲಿ ಮೂರು ದಿನಗಳ ಪಂಚ ಕಲ್ಯಾಣ ಪ್ರತಿಷ್ಠಾನ ಮಹೋತ್ಸವದ ಅಂಗವಾಗಿ ಸೋಮವಾರ ಪ್ರಾತಃಕಾಲ ಅಕ್ಷಯ ತೃತೀಯದ ಶುಭ ಮುಹೂರ್ತದಲ್ಲಿ ಪಾರ್ಶ್ವನಾಥ ಪ್ರತಿಮೆಗೆ ಮಂತ್ರನ್ಯಾಸ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.

ಮಂತ್ರಘೋಷ, ಮಂಗಳವಾದ್ಯಗಳ ಮೊಳಗುವಿಕೆ, ಭಕ್ತ ಗಣದ ಸಂಭ್ರಮ ಸಡಗರ ಜಯಕಾರಗಳ ಮಧ್ಯೆ ಆಚಾರ್ಯ ಪುಣ್ಯಸಾಗರರು, ಸ್ವಸ್ತಿಶ್ರೀಗಳಾದ ಧರ್ಮ ಸೇನ ಭಟ್ಟಾರಕರು, ಭಟ್ಟಾಕಲಂಕ ಭಟ್ಟಾರಕರು, ದೇವೇಂದ್ರಕೀರ್ತಿ ಭಟ್ಟಾರಕರು, ಪ್ರತಿಷ್ಠಾಚಾರ್ಯರು, ಪುರೋಹಿತರು ಸೇರಿ ಗರ್ಭ ಗೃಹದ ಮೂಲ ವೇದಿಕೆಯ ಮೇಲೆ ನೂತನ ಪಾರ್ಶ್ವನಾಥ ತೀರ್ಥಂಕರ ಜಿನಬಿಂಬವನ್ನು ಪ್ರತಿಷ್ಠಾಪಿಸಿದರು. ಮೋಕ್ಷಕಲ್ಯಾಣ ವಿಧಿ, ಸಿದ್ಧಚಕ್ರ ವಿಧಾನಗಳು ನಡೆದವು. ಭಕ್ತರಿಂದ ನಿರ್ಮಿತ ರಜತ ಪಲ್ಲಕ್ಕಿಯನ್ನು ಬಸದಿಗೆ ಸಮರ್ಪಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-24-1259230287

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.