ಹುಬ್ಬಳ್ಳಿ: ‘ಕೆಲವು ಸಂದರ್ಭಗಳಲ್ಲಿ ಪ್ಲಂಬಿಂಗ್ ಕೆಲಸ ಅಪಾಯಕಾರಿಯಾಗಿ ಇರುತ್ತದೆ. ಹಾಗಾಗಿ, ಎಲ್ಲ ಪ್ಲಂಬರ್ಗಳು ಕಾರ್ಮಿಕ ಕಾರ್ಡ್ ಮಾಡಿಸಿಕೊಳ್ಳಬೇಕು’ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.

ಹುಬ್ಬಳ್ಳಿ– ಧಾರವಾಡ ಜಿಲ್ಲಾ ಲೈಸನ್ಸ್ಡ್ ಪ್ಲಂಬರ್ ಸಂಘದ ರಜತ ಮಹೋತ್ಸವದ ಅಂಗವಾಗಿ ಇಲ್ಲಿನ ಇಂದಿರಾ ಗಾಜಿನ ಮನೆ ಆವರಣದಲ್ಲಿ ಆಯೋಜಿಸಿರುವ ಎರಡು ದಿನಗಳ ಪ್ಲಂಬಿಂಗ್ ವಸ್ತು ಪ್ರದರ್ಶನಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.

‘ನವಲಗುಂದದಲ್ಲಿ ಕಾರ್ಮಿಕರು ಹಾಗೂ ಬಡವರಿಗಾಗಿ 63 ಎಕರೆ ಪ್ರದೇಶದಲ್ಲಿ 3 ಸಾವಿರ ಮನೆಗಳನ್ನು ನಿರ್ಮಿಸಲಾಗುವುದು. ಅಣ್ಣಿಗೇರಿಯಲ್ಲೂ 19 ಎಕರೆ ಭೂಮಿ ಖರೀದಿಸಲು ತೀರ್ಮಾನ ಮಾಡಿದ್ದೇವೆ. ಪ್ಲಂಬರ್ಗಳು ಸೇರಿದಂತೆ ಎಲ್ಲ ಕಾರ್ಮಿಕರಿಗೆ ಅಗತ್ಯ ಸಹಾಯ ಮಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ’ ಎಂದರು.

‘ಈ ಸರ್ಕಾರದಲ್ಲಿ ಏನೂ ಸಿಗಲ್ಲ’: ‘ಪ್ಲಂಬಿಂಗ್ ಸಂಘಕ್ಕೆ ನಿವೇಶನ ಮಂಜೂರು ಮಾಡಿ, ಕಟ್ಟಡ ನಿರ್ಮಿಸಿಕೊಡಬೇಕು ಹಾಗೂ ಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪಿಸಬೇಕು’ ಎಂದು ಸಂಘದ ಅಧ್ಯಕ್ಷ ಮಕಬೂಲಸಾಬ ಉಂಟವಾಲ ಅವರು ಶಾಸಕ ಮಹೇಶ ಟೆಂಗಿನಕಾಯಿ ಅವರಿಗೆ ಮನವಿ ಸಲ್ಲಿಸಿದರು.

ಕೋನರಡ್ಡಿ ನಿರ್ಗಮನದ ಬಳಿಕ ವೇದಿಕೆಗೆ ಬಂದ ಶಾಸಕ ಟೆಂಗಿನಕಾಯಿ ಇದಕ್ಕೆ ಪ್ರತಿಕ್ರಿಯಿಸಿ, ‘ಈಗ ಇರುವ ಸರ್ಕಾರದಲ್ಲಿ ನಿಮ್ಮ ಯಾವ ಬೇಡಿಕೆಯೂ ಈಡೇರುವುದಿಲ್ಲ. ಉಚಿತವಾಗಿ ನಿವೇಶನ ನೀಡಲು ಅವಕಾಶವಿಲ್ಲ. ಸಮುದಾಯ ಸೌಕರ್ಯಗಳಿಗೆ (ಸಿಎ) ಮೀಸಲಿಟ್ಟ ಜಾಗ ಗುರುತಿಸಿದರೆ ಅದನ್ನು ರಿಯಾಯಿತಿ ದರದಲ್ಲಿ ನೀಡಲು ಪ್ರಯತ್ನಿಸಲಾಗುವುದು. ಹೀಗೆ ಗುರುತಿಸಲಾದ ನಿವೇಶನ ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಇದ್ದರೆ, ಅಲ್ಲಿ ಕಟ್ಟಡ ನಿರ್ಮಾಣಕ್ಕೆ ಶಾಸಕರ ಅನುದಾನದಿಂದ ₹10 ಲಕ್ಷ ಒದಗಿಸಲಾಗುವುದು’ ಎಂದರು.

‘ಹೊಸ ಕಾಲ, ಅಗತ್ಯಕ್ಕೆ ತಕ್ಕಂತೆ ಕೌಶಲ ಅಭಿವೃದ್ಧಿಯೂ ಅಗತ್ಯ. ಅದಕ್ಕಾಗಿ ಕೌಶಲಾಭಿವೃದ್ಧಿ ಕೇಂದ್ರ ಸ್ಥಾಪಿಸಲು ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ ಅವರ ಜೊತೆಗೂಡಿ ಶ್ರಮಿಸುವೆ. ಸದನದಲ್ಲಿಯೂ ಈ ಕುರಿತು ಧ್ವನಿ ಎತ್ತುವೆ’ ಎಂದು ಭರವಸೆ ನೀಡಿದರು.

ಸಂಘದ ಗೌರವಾಧ್ಯಕ್ಷ ನಾಗರಾಜ ಕಲಘಟಗಿ, ಗೌರವ ಕಾರ್ಯಾಧ್ಯಕ್ಷ ಎಂ.ಆರ್. ಪಾಟೀಲ, ಉಪಾಧ್ಯಕ್ಷ ರಾಜೇಂದ್ರ ಮಠಪತಿ, ಸಹ ಉಪಾಧ್ಯಕ್ಷ ಹನುಮಂತಪ್ಪ ಮಣ್ಣವಡ್ಡರ, ಪ್ರಧಾನ ಕಾರ್ಯದರ್ಶಿ ತಾಜುದ್ದಿನ ಮುಲ್ಲಾ, ಸಹ ಕಾರ್ಯದರ್ಶಿ ಸಾಗರ ಪೂಜಾರ, ಖಜಾಂಚಿ ನಯೀಮ ಅಖ್ತರ ಖಾನಬಾಯಿ, ಸಹ ಖಜಾಂಚಿ ಸುರೇಶ ಚಿನ್ನಪ್ಪನವರ ಹಾಗೂ ಕಾರ್ಯಕಾರಣಿ ಸದಸ್ಯರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-24-1963879623

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.