ಹುಬ್ಬಳ್ಳಿ: ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದಿದ್ದರಿಂದ ಗ್ರಾಮೀಣ ಭಾಗದಲ್ಲಿ ಕೃಷಿ ಚಟುಟವಟಿಕೆಗಳು ಗರಿಗೆದರಿವೆ. ರೈತಾಪಿ ವರ್ಗದವರು ಹೊಲಗಳನ್ನು ಹದ ಮಾಡುವಲ್ಲಿ ಹಾಗೂ ಮುಂಗಾರು ಪೂರ್ವ ಸುರಿದ ಮಳೆಗೆ ಕೆಲವರು ಬಿತ್ತನೆ ಕಾರ್ಯದಲ್ಲಿ ನಿರತರಾಗಿದ್ದಾರೆ.

ತಾಲ್ಲೂಕಿನ ಕುಸಗಲ್, ಬ್ಯಾಹಟ್ಟಿ, ನೂಲ್ವಿ, ಬುಡರಸಿಂಗಿ, ಬೆಳಗಲಿ, ಇನಾಂ ವೀರಾಪುರ ಸೇರಿದಂತೆ ವಿವಿಧ ಭಾಗಗಳ ಹೊಲ–ಗದ್ದೆಗಳಲ್ಲಿ ಕೃಷಿ ಕಾರ್ಯ ಜೋರಾಗಿದೆ. ರೈತರು ಭೂಮಿಯನ್ನು ಹದಗೊಳಿಸಿ, ಬಿತ್ತನೆಗೆ ಮುಂದಾಗಿದ್ದಾರೆ.

ಜೋರು ಮಳೆ: ಹುಬ್ಬಳ್ಳಿ ನಗರ ಹಾಗೂ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಶನಿವಾರ ತಡರಾತ್ರಿ ಭಾರಿ ಗಾಳಿ, ಗುಡುಗು ಸಹಿತ ಬಿರುಸಿನ ಮಳೆ ಸುರಿಯಿತು. ತಡರಾತ್ರಿ 2 ಗಂಟೆ ವೇಳೆ ಆರಂಭವಾದ ಮಳೆ ನಸುಕಿನವರೆಗೂ ಸುರಿದಿದ್ದು, ನಗರದ ಕೆಲವು ತಗ್ಗು ಪ್ರದೇಶಗಳಲ್ಲಿ ನೀರು ನಿಂತಿತ್ತು.

ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಹಳೇ ಕೋರ್ಟ್ ಬಳಿಯ ರಸ್ತೆಗಳು ಕೆಸರು ಗದ್ದೆಯಂತಾಗಿದ್ದವು. ತಗ್ಗು ಬಿದ್ದ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಸಂಚರಿಸಲು ಪರಿದಾಡಿದರು. ದಾಜೀಬಾನಪೇಟೆ, ಕೋಯಿನ್ ರಸ್ತೆ, ಟೆಂಡರ್ ಶೂರ್ ರಸ್ತೆಯ ಶಿರೂರ್ ಪಾರ್ಕ್, ಉಣಕಲ್ ಕ್ರಾಸ್ ಹಾಗೂ ಇತರೆಡೆ ರಸ್ತೆಯಲ್ಲಿ ನೀರು ಸಂಗ್ರಹವಾಗಿತ್ತು.

ರಾಜಕಾಲುವೆ ತುಂಬಿ ಹರಿದ ಪರಿಣಾಮ ಹಳೇ ಹುಬ್ಬಳ್ಳಿಯ ಪಾಂಡುರಂಗ ಕಾಲೊನಿ, ನಾರಾಯಣ ಸೋಫಾ ಬಡಾವಣೆಗಳಲ್ಲಿ ನೀರು ತುಂಬಿತ್ತು. ತೋಳನಕೆರೆ ಉದ್ಯಾನ, ನೆಹರೂ ಮೈದಾನದಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹವಾಗಿತ್ತು. ಕೆಲವೆಡೆ ಭಾನುವಾರ ಸಂಜೆವರೆಗೂ ವಿದ್ಯುತ್ ವ್ಯತ್ಯಯವಾಗಿತ್ತು. ಬಹುತೇಖ ಕಡೆ ಮ್ಯಾನ್ಹೋಲ್ ತುಂಬಿ ರಸ್ತೆ ಮೇಲೆಯೇ ಚರಂಡಿ ನೀರು ಹರಿಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-24-1697291751

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.