ಹುಬ್ಬಳ್ಳಿ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ರದ್ದುಪಡಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ಮುಖಂಡರು, ಸಾಹಿತಿಗಳು ನಗರದಲ್ಲಿ ಭಾನುವಾರ ಪ್ರತಿಭಟನಾ ಜಾಥಾ ನಡೆಸಿದರು.

ಚನ್ನಮ್ಮ ವೃತ್ತದಿಂದ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದವರೆಗೆ ಜಾಥಾ ಕೈಗೊಂಡ ಪ್ರತಿಭಟನಕಾರರು, ‘ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಜನವಿರೋಧಿಯಾಗಿರುವ ಎಸ್ಐಆರ್ ರದ್ದುಪಡಿಸಬೇಕು’ ಎಂದು ಘೋಷಣೆ ಕೂಗಿದರು.

ಸಾಹಿತಿ ಕುಂ.ವೀರಭದ್ರಪ್ಪ ಮಾತನಾಡಿ, ‘ಎಸ್ಐಆರ್ ಮೂಲಕ ದೇಶದಲ್ಲಿ ಮುಸ್ಲಿಮರನ್ನು ಮಾತ್ರ ಮತದಾನದಿಂದ ದೂರ ಇಡುತ್ತಿಲ್ಲ. ಜೊತೆಗೆ ಮಹಿಳೆಯರು, ದಲಿತರು, ಬಡವರು, ಅಲ್ಪಾಸಂಖ್ಯಾತರು ಮತ್ತು ಎಡಪಂಥೀಯ ವಿಚಾರಧಾರೆವುಳ್ಳವರನ್ನು ಹೊರಗಿಡುವ ಹುನ್ನಾರ ಇದರ ಹಿಂದೆ ಇದೆ. ಎಸ್ಐಆರ್ ರದ್ದುಪಡಿಸುವವರೆಗೆ ನಮ್ಮ ಹೋರಾಟ ಇರಲಿದೆ’ ಎಂದರು.

ಲೇಖಕಿ ಸವಿತಾ ಬನ್ನಾಡಿ ಮಾತನಾಡಿ, ‘ಮೃತರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆಯದೆ, ಬದುಕಿರುವವರ ಹೆಸರುಗಳನ್ನು ಎಸ್ಐಆರ್ ನೆಪದಲ್ಲಿ ತೆಗೆಯಲಾಗುತ್ತಿದೆ. ಇದು ಒಂದರ್ಥದಲ್ಲಿ ಜನಾಂಗೀಯ ಹತ್ಯೆ’ ಎಂದರು.

ನಿವೃತ್ತ ಪ್ರಾಧ್ಯಾಪಕ ಅಶೋಕ ಶೆಟ್ಟರ್ ಮಾತನಾಡಿ, ‘ದೇಶದಲ್ಲಿ ಎಸ್ಐಆರ್ ಮೂಲಕ ಸಾಂವಿಧಾನಿಕ ಪ್ರಜಾಸತ್ತೆಯ ಮೇಲೆ ದಾಳಿ ನಡೆಯುತ್ತಿದೆ. ಈ ಮೂಲಕ ಕೊಟ್ಯಂತರ ಜನರನ್ನು ಮತಾಧಿಕಾರದಿಂದ ವಂಚಿಸಲಾಗುತ್ತಿದೆ. ಆಳುವ ಪಕ್ಷಕ್ಕೆ ಅನುಕೂಲ ಮಾಡಿಕೊಡುವ ಪಕ್ಷಪಾತಿ ಧೋರಣೆಯನ್ನು ಚುನಾವಣಾ ಆಯೋಗ ಅನುಸರಿಸುತ್ತಿದೆ’ ಎಂದರು.

ಪ್ರಮುಖರಾದ ಸಿದ್ದು ತೇಜಿ, ಗುರುನಾಥ ಉಳ್ಳಿಕಾಶಿ, ಶಿವಸುಂದರ್, ಮೂಡ್ನಾಕೂಡು ಚಿನ್ನಸ್ವಾಮಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-24-830868375

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.