ಹುಬ್ಬಳ್ಳಿ: ಬೆಂಗಳೂರು– ಮೈಸೂರು– ಹುಬ್ಬಳ್ಳಿ ವಲಯಗಳಿಂದ ರಾಜಸ್ಥಾನ ಮತ್ತು ಗುಜರಾತ್ಗೆ ತೆರಳುವ ಪ್ರಯಾಣಿಕರ ಸಂಖ್ಯೆ ವರ್ಷವಿಡೀ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಆ ರಾಜ್ಯಗಳಿಗೆ ಹೆಚ್ಚಿನ ರೈಲ್ವೆ ಸೇವೆ ಒದಗಿಸಬೇಕು ಎಂದು ಯಾತ್ರಿ ಹಿತಾರ್ಥ ಸಂಘರ್ಷ ಸಮಿತಿಯಿಂದ ನೈರುತ್ಯ ರೈಲ್ವೆಯ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

‘ಹುಬ್ಬಳ್ಳಿ– ಜೋಧಪುರ, ಹುಬ್ಬಳ್ಳಿ– ಅಹಮದಾಬಾದ್, ಯಶವಂತಪುರ– ಬಾರ್ಮೇರ್, ಹುಬ್ಬಳ್ಳಿ– ಅಜ್ಮೇರ್ ಮಾರ್ಗದಲ್ಲಿ ಪ್ರತಿ ದಿನ ಹಾಗೂ ಹುಬ್ಬಳ್ಳಿ– ತಿರುಪತಿಗೆ ಮತ್ತೊಂದು ಹೆಚ್ಚುವರಿ ರೈಲು ಓಡಿಸಬೇಕು’ ಎಂದು ಮನವಿಯಲ್ಲಿ ಕೋರಲಾಗಿದೆ.

‘ಚೆನ್ನೈ– ಹುಬ್ಬಳ್ಳಿ ರೈಲ್ವೆಯನ್ನು ಮಿರಜ್ ವರೆಗೆ ವಿಸ್ತರಿಸಬೇಕು. ವಾಸ್ಕೊ–ಹೌರಾ ರೈಲನ್ನು ನಾಲ್ಕು ದಿನಗಳ ಬದಲಿಗೆ ಪ್ರತಿ ದಿನವೂ ಓಡಿಸಬೇಕು. ಮಿರಜ್– ಬಿಕಾನೇರ್ ರೈಲ್ವೆಯನ್ನು ವಾರಕ್ಕೆ ಎರಡು ಬಾರಿ ಹುಬ್ಬಳ್ಳಿಯಿಂದ ಓಡಿಸಬೇಕು. ಹುಬ್ಬಳ್ಳಿ– ಭಾವನಗರ ಮಾರ್ಗದಲ್ಲಿ ವಾರಕ್ಕೆ ಎರಡು ಬಾರಿ ರೈಲ್ವೆ ಓಡಿಸಬೇಕು. ಬೆಂಗಳೂರು– ಹುಬ್ಬಳ್ಳಿ– ಪುಣೆ ರೈಲ್ವೆ ಮಾರ್ಗವನ್ನು ಹೈ–ಸ್ಪೀಡ್ ಕಾರಿಡಾರ್ಗೆ ಸೇರಿಸಬೇಕು’ ಎಂದು ಒತ್ತಾಯಿಸಲಾಗಿದೆ.

ನಿಯೋಗದಲ್ಲಿ ಸುಭಾಸಸಿಂಗ್ ಜಮಾದಾರ, ದೂದಾರಾಮ ಚೌಧರಿ, ಅಮೃತ ಜೈನ್, ಉತ್ತಮ ಉಸಾಥಿಯಾ, ಮಹೇಂದ್ರ ಪಾಲ್ಗೋತಾ, ಸತೀಶ ಮಾಲಿ, ಬಾಬುಲಾಲ ಜೈನ್, ಪರಭತಸಿಂಗ ಖಿಚಿ, ಧರ್ಮೇಂದ್ರ ಮಾಲಿ, ಬಾಬುಲಾಲ ಶಿರವಿ, ಅಭಿಷೇಕ ಮೆಹ್ರಾ, ತ್ರಿವೇಂದ್ರ ಖತ್ರಿ, ಈಶ್ವರ ಶರ್ಮಾ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-24-1847082321

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.