ಹುಬ್ಬಳ್ಳಿ: ವಾರದಲ್ಲಿ ಕೆಲವು ದಿನ ಮಾತ್ರ ಸಂಚರಿಸುತ್ತಿದ್ದ ನೈರುತ್ಯ ರೈಲ್ವೆ ವಿಭಾಗದ ಮೂರು ರೈಲುಗಳ ಕಾಯಂ ಸಂಚಾರಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣದಲ್ಲಿ ಸೋಮವಾರ ಹಸಿರು ನಿಶಾನೆ ತೋರಿದರು.

ನಂತರ ಮಾತನಾಡಿದ ಅವರು, ‘ಉತ್ತರ ಕರ್ನಾಟಕ ಭಾಗದ ಜನರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ, ನೈರುತ್ಯ ರೈಲ್ವೆಯು ಪ್ರಮುಖ ವಿಶೇಷ ರೈಲುಗಳನ್ನು ‘ನಿಯಮಿತ ಸೇವೆ’ಗಳನ್ನಾಗಿ ಪರಿವರ್ತಿಸಿದೆ. ಇದು ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಸಂಪರ್ಕ ಕ್ರಾಂತಿಗೆ ವೇಗ ನೀಡಲಿದೆ’ ಎಂದು ಹೇಳಿದರು.

‘ಈ ರೈಲುಗಳ ಕಾಯಂ ಸಂಚಾರದಿಂದಾಗಿ ಹಬ್ಬ ಮತ್ತು ರಜೆಯ ದಿನಗಳಲ್ಲಿ ಟಿಕೆಟ್ ಅಭಾವ ತಗ್ಗಲಿದ್ದು, ಟಿಕೆಟ್ ದರದಲ್ಲೂ ಶೇ 25-30 ರಷ್ಟು ಇಳಿಕೆಯಾಗಲಿದೆ. ಅಲ್ಲದೆ, ಹುಬ್ಬಳ್ಳಿ, ಗದಗ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ನಿತ್ಯ ಪ್ರಯಾಣಿಕರು, ವ್ಯಾಪಾರಸ್ಥರು ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ’ ಎಂದರು.

ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಪಿ. ಅನಂತ್ ಸೇರಿದಂತೆ ರೈಲ್ವೆ ಅಧಿಕಾರಿಗಳು ಇದ್ದರು.

ಹೊಸ ರೈಲುಗಳ ವಿವರ: ಹುಬ್ಬಳ್ಳಿ–ವಿಜಯಪುರ ಪ್ಯಾಸೆಂಜರ್ ರೈಲು (56919) ಬೆಳಿಗ್ಗೆ 6.35ಕ್ಕೆ ಹುಬ್ಬಳ್ಳಿಯಿಂದ ಹೊರಟು ಮಧ್ಯಾಹ್ನ 12.35ಕ್ಕೆ ವಿಜಯಪುರ ತಲುಪಲಿದೆ. ವಿಜಯಪುರ–ಹುಬ್ಬಳ್ಳಿ ಪ್ಯಾಸೆಂಜರ್ ರೈಲು (56920) ಮಧ್ಯಾಹ್ನ 12ಕ್ಕೆ ವಿಜಯಪುರದಿಂದ ಹೊರಟು, ಸಂಜೆ 6 ಗಂಟೆಗೆ ಹುಬ್ಬಳ್ಳಿ ತಲುಪಲಿದೆ.

ಹುಬ್ಬಳ್ಳಿ– ವಿಜಯಪುರ ಮೆಮು ರೈಲು (66501) ಸಂಜೆ 4.45ಕ್ಕೆ ಹುಬ್ಬಳ್ಳಿಯಿಂದ ಹೊರಟು ರಾತ್ರಿ 10.10ಕ್ಕೆ ವಿಜಯಪುರ ತಲುಪಲಿದೆ. ವಿಜಯಪುರ–ಹುಬ್ಬಳ್ಳಿ ಮೆಮು ರೈಲು (66502) ಬೆಳಿಗ್ಗೆ 5.45ಕ್ಕೆ ವಿಜಯಪುರದಿಂದ ಹೊರಟು, ಬೆಳಿಗ್ಗೆ 11 ಗಂಟೆಗೆ ಹುಬ್ಬಳ್ಳಿಗೆ ಬರಲಿದೆ.

ಹುಬ್ಬಳ್ಳಿ – ಹೃಷಿಕೇಶ ನಡುವೆ ಈವರೆಗೆ ವಾರಕ್ಕೊಮ್ಮೆ ಮಾತ್ರ ರೈಲು (17363/64) ಸೇವೆ ಇತ್ತು. ಮೇ 12ರಿಂದ ಈ ರೈಲುಗಳು ಪ್ರತಿನಿತ್ಯ ಸಂಚರಿಸಲಿವೆ. ಪ್ರತಿದಿನ ಸಂಜೆ 7.45ಕ್ಕೆ ಹುಬ್ಬಳ್ಳಿಯಿಂದ ಹೊರಡುವ ರೈಲು, ಒಟ್ಟು 51 ಗಂಟೆ 45 ನಿಮಿಷ ಪ್ರಯಾಣದ ಬಳಿಕ ಯೋಗ ನಗರಿ ಹೃಷಿಕೇಶ ತಲುಪಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-24-1814635401

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.