ಹುಬ್ಬಳ್ಳಿ: ನಗರದಲ್ಲಿ ಸೋಮವಾರ ಅರ್ಧ ಗಂಟೆ ಗಾಳಿ, ಮಳೆ ಸೃಷ್ಟಿಸಿದ ಅವಾಂತರಕ್ಕೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸಹಾಯವಾಣಿ ಕೇಂದ್ರಕ್ಕೆ ಜನರಿಂದ 1,091 ದೂರು ಕರೆಗಳು ಬಂದಿವೆ. ಅವುಗಳಲ್ಲಿ ಉಣಕಲ್, ಗೋಕುಲ್ ರಸ್ತೆ ಮತ್ತು ಬೈರಿದೇವರಕೊಪ್ಪದ ಸುತ್ತಮತ್ತಲಿನಿಂದ ಬಂದ ಕರೆಗಳೇ ಹೆಚ್ಚಿವೆ.

ಗಿಡ, ಮರ, ಟೊಂಗೆಗಳು ಮುರಿದ ಕುರಿತು ಹಾಗೂ ಗಟಾರು, ಚರಂಡಿ, ಮ್ಯಾನ್ಹೋಲ್, ವಿದ್ಯುತ್ ಕಂಬ, ಬೀದಿ ದೀಪ, ಮನೆ ಗೋಡೆ ಕುಸಿತ, ಕಾಂಪೌಂಡ್ ಕುಸಿತ, ರಸ್ತೆ ಗುಂಡಿ, ಹದಗೆಟ್ಟ ರಸ್ತೆಗೆ ಸಂಬಂಧಿಸಿ ಸಾರ್ವಜನಿಕರು ಕರೆ ಮಾಡಿ ದೂರು ಸಲ್ಲಿಸಿದ್ದಾರೆ.

‘ಉಣಕಲ್, ವಿದ್ಯಾನಗರ ಸುತ್ತಮುತ್ತ ನೂರಕ್ಕೂ ಹೆಚ್ಚು ಗಿಡ–ಮರ, ಟೊಂಗೆಗಳು ಮುರಿದು ಬಿದ್ದಿವೆ. ಗೋಕುಲ ರಸ್ತೆ ಭಾಗದಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಹಳೇಹುಬ್ಬಳ್ಳಿಯ ಕೆಲ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿರುವ ಹಾಗೂ ಉಣಕಲ್ನ ಕೆಲ ಕಡೆ ಮನೆಗಳ ಮೇಲೆ ಟೊಂಗೆಗಳು ಮುರಿದು ಬಿದ್ದಿರುವ ಕುರಿತು ಜನರಿಂದ ದೂರುಗಳು ಬಂದಿವೆ’ ಎಂದು ಪಾಲಿಕೆ ಆಯುಕ್ತ ರುದ್ರೇಶ ಘಾಳಿ ತಿಳಿಸಿದರು.

₹40 ಲಕ್ಷ ನಷ್ಟ: ಬಿರುಗಾಳಿ, ಮಳೆಗೆ ಹುಬ್ಬಳ್ಳಿ ನಗರದಲ್ಲಿ 70ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಉರುಳಿದ್ದು, ನಾಲ್ಕು ವಿದ್ಯುತ್ ಪರಿವರ್ತಕಗಳು (ಟಿಸಿ) ಹಾಳಾಗಿವೆ. ಗೋಕುಲ ರಸ್ತೆ, ಶಿರೂರ ಪಾರ್ಕ್, ಉಣಕಲ್ ಸೇರಿದಂತೆ ನಗರದ ವಿವಿಧೆಡೆ ಸೋಮವಾರ ಸಂಜೆಯಿಂದ ಮಂಗಳವಾರ ತಡ ರಾತ್ರಿವರೆಗೂ ವಿದ್ಯುತ್ ವ್ಯತ್ಯಯವಾಗಿತ್ತು.

‘ಗೋಕುಲ ರಸ್ತೆ ಸುತ್ತಮುತ್ತ 50 ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಎರಡು ದಿನಗಳಿಂದ ವಿದ್ಯುತ್ ಪೂರೈಕೆ ಸ್ಥಗಿತವಾಗಿದೆ. ಈಗಾಗಲೇ ಹೊಸ ಕಂಬ ಹಾಗೂ ಟಿಸಿಗಳನ್ನು ಕಾರ್ಯಸ್ಥಳಕ್ಕೆ ಕಳುಹಿಸಿದ್ದು ದುರಸ್ತಿ ನಡೆದಿದೆ. 200ಕ್ಕೂ ಹೆಚ್ಚು ಸಿಬ್ಬಂದಿ, ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ₹40 ಲಕ್ಷ ನಷ್ಟವಾಗಿದೆ’ ಎಂದು ಹೆಸ್ಕಾಂ ಹುಬ್ಬಳ್ಳಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ನಾಗರಾಜ ಕುಬ್ಬಳ್ಳಿ ತಿಳಿಸಿದರು.

‘ವಲಯಾಧಿಕಾರಿ ಮಟ್ಟದಲ್ಲಿ ರಚಿಸಲಾದ ಟಾಸ್ಕ್ ಫೋರ್ಸ್ ತಂಡ ಸೋಮವಾರ ರಾತ್ರಿಯಿಂದ ನಿರಂತರವಾಗಿ ಕಾರ್ಯ ನಡೆಸುತ್ತಿದ್ದು, ಈಗಾಗಲೇ ಶೇ 60ರಷ್ಟು ಮರ, ಗಿಡಗಳನ್ನು ತೆರವು ಮಾಡಲಾಗಿದೆ. ಕೆಲವು ಕಡೆ ವಿದ್ಯುತ್ ವ್ಯತ್ಯಯವಾಗಿದ್ದು ಹೆಸ್ಕಾಂ ಸಿಬ್ಬಂದಿ ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದಾರೆ’ ಎಂದು ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-24-722210598

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.