ಹುಬ್ಬಳ್ಳಿ: ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆ ಕಾಮಗಾರಿ ಜನತೆಯನ್ನು ಹೈರಾಣಾಗಿಸಿದೆ. ಚನ್ನಮ್ಮ ವೃತ್ತದ ಬಳಿ ನಿರ್ಮಿಸಿದ್ದ ಪಿಲ್ಲರ್ ಒಂದಕ್ಕೆ ಪೀಯರ್ ಕ್ಯಾಪ್ (ಸೇತುವೆಯ ಕಂಬದ ಮೇಲ್ಭಾಗದ ರಚನೆ) ಅಳವಡಿಕೆ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿಯಿಂದ ಏಕಾಏಕಿ ಕಾರವಾರ ಮತ್ತು ಬೆಂಗಳೂರು ಕಡೆಗೆ ತೆರಳುವ ಏಕಮುಖ ರಸ್ತೆಯನ್ನು ಬಂದ್ ಮಾಡಿದ ಪರಿಣಾಮ, ಬುಧವಾರ ಇಡೀದಿನ ಚನ್ನಮ್ಮ ವೃತ್ತದ ಸುತ್ತಮುತ್ತ ವಾಹನಗಳ ಸಂಚಾರ ದಟ್ಟಣೆ ಏರ್ಪಟ್ಟಿತ್ತು.

ನಗರ ಮತ್ತು ಉಪನಗರ ಸಾರಿಗೆ ಬಸ್ ನಿಲ್ದಾಣದ ಎದುರಿನಿಂದ ಚನ್ನಮ್ಮ ವೃತ್ತದ ಮೂಲಕ ಕಾರವಾರ ಮತ್ತು ಬೆಂಗಳೂರಿಗೆ ತೆರಳಲು ತಾತ್ಕಾಲಿವಾಗಿ ದ್ವಿಪಥ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಭಾಗದ ಕೊನೆಯಲ್ಲಿ ಮೇಲ್ಸೇತುವೆಗೆ ನಿರ್ಮಿಸಿದ್ದ ಬೃಹತ್ ಪಿಲ್ಲರ್ಗೆ ಪೀಯರ್ ಕ್ಯಾಪ್ ಅಳವಡಿಕೆ ಮಾಡಲು ಎನ್ಎಚ್ ಪಿಡ್ಬ್ಯೂಡಿ, ಮುಂಜಾಗ್ರತಾ ಕ್ರಮವಾಗಿ ಏಕಮುಖ ರಸ್ತೆ ಸಂಚಾರವನ್ನು ಮುನ್ಸೂಚನೆ ನೀಡದೆ ಬಂದ್ ಮಾಡಿದೆ.

ಈ ಮಾಹಿತಿಯಿಲ್ಲದ ವಾಹನ ಸವಾರರು ಎಂದಿನಂತೆ ಸಂಚರಿಸಿದ ಪರಿಣಾಮ ಚನ್ನಮ್ಮ ವೃತ್ತದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ಹಾಗೂ ನೀಲಿಜಿನ್ ರಸ್ತೆಯ ಉತ್ತರ ಸಂಚಾರ ಪೊಲೀಸ್ ಠಾಣೆವರೆಗೆ, ವಿಜಯಪುರ ರಸ್ತೆಯ ದೇಸಾಯಿ ವೃತ್ತದವರೆಗೆ ಸುಮಾರು ಒಂದು, ಒಂದೂವರೆ ಕಿ.ಮೀ. ವಾಹನಗಳ ಸಂಚಾರ ಅಸ್ತವ್ಯಸ್ತವಾಗಿತ್ತು. ಬೆಳಿಗ್ಗೆ ಒಂಬತ್ತರಿಂದ ಆರಂಭವಾದ ಸಂಚಾರ ದಟ್ಟಣೆ ರಾತ್ರಿ ಎಂಟು ಗಂಟೆವರೆಗೂ ಮುಂದುವರಿದಿತ್ತು.

ರಸ್ತೆ ಬಂದ್ ಇದ್ದಾಗಲೂ ಲಾರಿ, ಗೂಡ್ಸ್ ಸೇರಿದಂತೆ ಬೃಹತ್ ವಾಹನಗಳು ನಗರ ಪ್ರವೇಶಿಸಿದ ಪರಿಣಾಮ ಮತ್ತಷ್ಟು ಸಂಚಾರ ದಟ್ಟಣೆಗೆ ಕಾರಣವಾಯಿತು. ಪಾದಚಾರಿಗಳು ಸಹ ಪರದಾಡಿದರು. ಮಧ್ಯಾಹ್ನದ ಬಿರು ಬಿಸಿಲಲ್ಲಿ ಅರ್ಧಗಂಟೆಗೂ ಹೆಚ್ಚು ಸಂಚಾರ ದಟ್ಟಣೆಯಲ್ಲಿ ಸಿಲುಕಿದ ಬಸ್ ಪ್ರಯಾಣಿಕರು, ವಾಹನ ಸವಾರರು ತೀವ್ರ ಸಂಕಷ್ಟ ಅನುಭವಿಸಿದರು. ಸಂಚಾರ ಪೊಲೀಸರು ಸಹ ಟ್ರಾಫಿಕ್ ಸಮಸ್ಯೆ ಸರಿದೂಗಿಸಲು ಪ್ರಯಾಸಪಟ್ಟರು.

‘ಮೇಲ್ಸೇತುವೆ ಕಾಮಗಾರಿಯ ವಿಳಂಬ ಹಾಗೂ ಅದು ತಂದೊಡ್ಡುತ್ತಿರುವ ಸಮಸ್ಯೆ ಹುಬ್ಬಳ್ಳಿ ಜನರ ತಾಳ್ಮೆ ಪರೀಕ್ಷಿಸುತ್ತಿದೆ. ಎರಡು ವರ್ಷದ ಹಿಂದೆಯೇ ಮುಕ್ತಾಯವಾಗಬೇಕಿದ್ದ ಕಾಮಗಾರಿ, ಇನ್ನೂ ಪೂರ್ಣಗೊಂಡಿಲ್ಲ. ಎರಡು, ಮೂರು ತಿಂಗಳಿಗೊಮ್ಮೆ ಪರಿಶೀಲನೆಗೆ ಬರುವ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಅವರು ಮೂರು ತಿಂಗಳು, ಆರು ತಿಂಗಳು ಗಡುವು ನೀಡಿ ಹೋಗುತ್ತಾರೆ. ಇನ್ನೂ ಎರಡು ವರ್ಷವಾದರೂ ಕಾಮಗಾರಿ ಮುಕ್ತಾಯವಾಗುವ ಲಕ್ಷಣಗಳಿಲ್ಲ’ ಎಂದು ಸಂಗ್ರಾಮ ಸೇನೆ ಅಧ್ಯಕ್ಷ ಸಂಜೀವ ದುಮ್ಮಕನಾಳ ಅಸಮಾಧಾನ ವ್ಯಕ್ತಪಡಿಸಿದರು.

‘ರಸ್ತೆ ಬಂದ್ ಮಾಡುವ ಕುರಿತು ಸಾರ್ವಜನಿಕರಿಗೆ ಮುನ್ಸೂಚನೆ ನೀಡಿ, ಬದಲಿ ಮಾರ್ಗದ ವ್ಯವಸ್ಥೆ ಮಾಡಿದ್ದರೆ ಸಂಚಾರ ದಟ್ಟಣೆ ಏರ್ಪಡುತ್ತಿರಲಿಲ್ಲ. ಸಂಚಾರ ಪೊಲೀಸರ ವೈಫಲ್ಯದಿಂದ ಸಾರ್ವಜನಿಕರು ಸಮಸ್ಯೆ ಅನುಭವಿಸುವಂತಾಗಿದೆ’ ಎಂದು ಬೈಕ್ ಸವಾರ ಸಿದ್ದಪ್ಪ ಹಿರೇಮಠ ಆಕ್ರೋಶ ವ್ಯಕ್ತಪಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-24-434824186

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.