ಧ್ವಜಾರೋಹಣದೊಂದಿಗೆ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ | ವಾದ್ಯಮೇಳ ಸಹಿತ ಸಮ್ಮೇಳನಾಧ್ಯಕ್ಷರ ಮೆರವಣಿಗೆ | ರಂಗೋಲಿಗಳಿಂದ ಅಲಂಕೃತಗೊಂಡಿದ್ದ ಸಭಾಂಗಣ

ಹುಬ್ಬಳ್ಳಿ: ‘ಸಾಮಾಜಿಕ ಮಾಧ್ಯಮಗಳಿಂದಾಗಿ ಬರಹಗಾರರಿಗೆ ಹೆಚ್ಚು ಅವಕಾಶಗಳು ದೊರೆಯುತ್ತಿವೆ. ಬರೆಯುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆದರೆ ಗುಣಮಟ್ಟ ಕಂಡುಬರುತ್ತಿಲ್ಲ’ ಎಂದು ಸಾಹಿತಿ ಸ್ನೇಹಾ ವಿ. ಭೂಸನೂರ ಹೇಳಿದರು.

ಇಲ್ಲಿನ ಲಿಂಗರಾಜನಗರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಭಾನುವಾರ ನಡೆದ ಹುಬ್ಬಳ್ಳಿ ನಗರ ತಾಲ್ಲೂಕು 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಅವರು, ‘ಸಮಕಾಲೀನ ಸಮಸ್ಯೆಗಳಿಗೆ ಸಾಹಿತ್ಯ ಸ್ಪಂದಿಸುತ್ತಿಲ್ಲ’ ಎಂದರು.

‘ನಿಂತ ನೆಲಕ್ಕೆ, ಅದರ ಚರಿತ್ರೆ ಮತ್ತು ಪರಂಪರೆಗೆ ಸ್ಪಂದಿಸಲಾರದ ಭಾವಶೂನ್ಯರಾಗಿದ್ದೇವೆ. ನಮ್ಮ ಮಕ್ಕಳಿಗೆ ಚರಿತ್ರೆ, ಕಲೆ, ಸಾಹಿತ್ಯ, ಸಂಸ್ಕೃತಿ ಗೊತ್ತಿಲ್ಲ. ವಿಚಿತ್ರವೆಂದರೆ, ಹೀಗೆ ಗೊತ್ತಿರದೇ ಇರುವುದೂ ಒಂದು ನಷ್ಟ ಎಂಬುದೇ ಗೊತ್ತಿಲ್ಲ’ ಎಂದರು.

‘ಪುರುಷನಿಗೆ ಸಮನಾಗಿ ಮಹಿಳೆ ನಡೆಯುತ್ತಿದ್ದರೂ ಆಕೆಯನ್ನು ನೋಡುವ ದೃಷ್ಟಿಕೋನ ಬದಲಾಗಿಲ್ಲ. ಇಂದಿಗೂ ಲಕ್ಷಾಂತರ ಹೆಣ್ಣುಮಕ್ಕಳಿಗೆ ಜ್ಞಾನದ ಬಾಗಿಲು ತೆರೆದಿಲ್ಲ. ಉದ್ಯೋಗ, ಆರೋಗ್ಯ, ಭದ್ರತೆ ಮಹಿಳೆಯ ಪಾಲಿಗೆ ಕನಸಿನ ಮಾತಾಗಿದೆ’ ಎಂದು ವಿಷಾದಿಸಿದರು.

ಸಮ್ಮೇಳನ ಉದ್ಘಾಟಿಸಿದ ಕಲಬುರಗಿಯ ಸಾಹಿತಿ ಜಯಶ್ರೀ ವೀರಣ್ಣ ದಂಡೆ, ‘ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಯೋಗ್ಯತೆಯನ್ನು ಶರಣರು ವಚನ ಸಾಹಿತ್ಯದ ಮೂಲಕ 12ನೇ ಶತಮಾನದಲ್ಲೇ ತಂದುಕೊಟ್ಟಿದ್ದಾರೆ. ಕನ್ನಡ ಇಂದಿಗೂ ಚಾಲನೆಯಲ್ಲಿರಲು ಬಸವಾದಿ ಶರಣರು ಅಂದು ನೀಡಿದ ಕೊಡುಗೆಯೇ ಕಾರಣ’ ಎಂದು ಹೇಳಿದರು.

ಸಮ್ಮೇಳನಾಧ್ಯಕ್ಷರಿಗೆ ಧ್ವಜ ಹಸ್ತಾಂತರಿಸಿದ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಕೆ.ಎಸ್. ಕೌಜಲಗಿ, ‘ಯಾಂತ್ರಿಕತೆ– ತಾಂತ್ರಿಕ ಬೆಳವಣಿಗೆಗಳ ಬಗ್ಗೆ ಸಮ್ಮೇಳನಗಳಲ್ಲಿ ಚರ್ಚೆ ನಡೆಯಬೇಕು. ಕನ್ನಡದ ಬುದ್ಧಿಜೀವಿಗಳು ಮೌನವಾಗಿದ್ದಾರೆ. ಸಂಶೋಧನೆಗಳು ಸೊರಗಿವೆ. ಜಾಲತಾಣ, ಧಾರಾವಾಹಿಗಳಲ್ಲಿ ಕನ್ನಡದ ಕೊಲೆಯಾಗುತ್ತಿದೆ. ಕೇರಳದಲ್ಲಿ ಮಲಯಾಳವನ್ನು ಏಕೈಕ ಅಧಿಕೃತ ಭಾಷೆ ಎಂದು ಗುರುತಿಸಿದಂತೆ ರಾಜ್ಯದಲ್ಲೂ ಕನ್ನಡವನ್ನು ಗುರುತಿಸಬೇಕು’ ಎಂದು ಹೇಳಿದರು.

ಕೃತಿ ಬಿಡುಗಡೆ: ಕೃಷ್ಣಸಖಿ ನಾಗರತ್ನ ಅವರ ‘ನೋವಲ್ಲರಳಿದ ಹೂ ನಗು’, ಸ್ನೇಹಾ ಭೂಸನೂರ ಸಂಪಾದಿತ– ಪಂ. ಗುರುಬಸವಾಚಾರ್ಯ ಹಿರೇಮಠ ವಿರಚಿತ ‘ವಚನ ಸಂಗೀತ’, ಶಾಂತಾ ಕೆ. ಬಸವರಾಜ ಅವರ ‘ಬಸವೇಶ್ವರ– ಸಂಪುಟ 5’, ಅನುಪಮ ಆದಾಪೂರ ಅವರ ‘ಬೇವೂರ ಜನಪದ ಹಾಡುಗಳು’ ಹಾಗೂ ಸ್ನೇಹಾ ಭೂಸನೂರ ಅವರ ‘ಬಿಸಿಲುಂಡ ಅರಿಶಿನ’ ಕೃತಿಯ ಇಂಗ್ಲಿಷ್ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು.

ಬೀದರ್ನ ಬಸವಗಿರಿಯ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಗಂಗಾಂಬಿಕಾ ಅಕ್ಕ, ವಿಶ್ವಭಾರತಿ ಬಾಲಕಿಯರ ಪ್ರೌಢಶಾಲೆ ಕಾರ್ಯಾಧ್ಯಕ್ಷ ವೆಂಕಣ್ಣ ಕಿರೇಸೂರ, ಕಟ್ಟಿಮಂಗಳಾದೇವಿ ಮಹಿಳಾ ಮಂಡಳದ ಅಧ್ಯಕ್ಷೆ ಲತಾ ಉಮರಾಣಿ, ಪ್ರೊಬಸ್ ಕ್ಲಬ್ ಅಧ್ಯಕ್ಷ ಎಂ.ಜಿ. ಸಜ್ಜನರ, ಸಮುದಾಯ ಭವನ ಅಧ್ಯಕ್ಷ ಜಿ.ಬಿ. ಕಲಕೋಟಿ, ಕೋಳಿವಾಡ ಗ್ರಾನೈಟ್ಸ್ನ ಶಂಕರ ಕೋಳಿವಾಡ, ಕನ್ನಡ ಸಾಹಿತ್ಯ ಪರಿಷತ್ ಹುಬ್ಬಳ್ಳಿ ನಗರ ತಾಲ್ಲೂಕು ಘಟಕದ ಅಧ್ಯಕ್ಷೆ ವಿದ್ಯಾ ವಂಟಮುರಿ ಹಾಗೂ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.

ಸರ್ಕಾರದ ಕಾನೂನು ಸುವ್ಯವಸ್ಥೆ ಪರಿಕರಗಳೆಲ್ಲ ಕಾಗದದೊಳಗಿನ ಹುಲಿಗಳಾಗಿವೆ. ವ್ಯವಸ್ಥೆಯಲ್ಲಿನ ಪರಿವರ್ತನೆಗೆ ಕಾನೂನಿಗಿಂತ ನಮ್ಮ ಆತ್ಮಬಲ ನಮ್ಮ ಮನೋಬಲದ ದಾರಿ ಮುಖ್ಯವಾಗಿದೆ
ಸ್ನೇಹಾ ವಿ. ಭೂಸನೂರ ಸಮ್ಮೇಳನಾಧ್ಯಕ್ಷೆ

‘ಸಾಹಿತ್ಯಕ್ಕೂ ಬೇಕು ‘ಗ್ಯಾರಂಟಿ’

ಕನ್ನಡ ಸಾಹಿತ್ಯ ಪರಿಷತ್ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗರಾಜ ಅಂಗಡಿ ಮಾತನಾಡಿ ‘ಸರ್ಕಾರದಿಂದ ಅನುದಾನ ಇಲ್ಲದಿದ್ದರೂ ತಾಲ್ಲೂಕು ಸಾಹಿತ್ಯ ಸಮ್ಮೇಳನಗಳನ್ನು ನಡೆಸುತ್ತಿದ್ದೇವೆ. ಮುಖ್ಯಮಂತ್ರಿಗಳು ಪಂಚಗ್ಯಾರಂಟಿಗಳನ್ನು ಕೊಟ್ಟಂತೆ ಸಾಹಿತ್ಯಕ್ಕೂ ಗ್ಯಾರಂಟಿ ನೀಡುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು. ‘ಸಾಹಿತ್ಯ ಭವನದ ದುರಸ್ತಿಗೆ ಅನುದಾನಕ್ಕಾಗಿ ಎಲ್ಲ ರಾಜಕಾರಣಿಗಳು ಅಧಿಕಾರಿಗಳ ಬಳಿ ಬೇಡಿಕೊಂಡಿದ್ದೇನೆ. ಜಿಲ್ಲಾಡಳಿತ ಶಾಸಕರು ಉಸ್ತುವಾರಿ ಸಚಿವರು ಯಾರೂ ಸ್ಪಂದಿಸುತ್ತಿಲ್ಲ. ಅಧಿಕಾರಿಗಳೂ ರಾಜಕಾರಣಿಗಳಂತೆ ಆಡುತ್ತಿದ್ದಾರೆ. ಸಾಹಿತ್ಯ ಪರಿಷತ್ ಉಳಿಸುವ ನಿಟ್ಟಿನಲ್ಲಿ ಎಂಥ ಹೋರಾಟಕ್ಕೂ ಸಿದ್ಧನಿದ್ದೇನೆ’ ಎಂದು ಹೇಳಿದರು.

ಗೋಷ್ಠಿ ಕವಿಗೋಷ್ಠಿ ಸಾಂಸ್ಕೃತಿಕ ಕಾರ್ಯಕ್ರಮ

ಸಂಶೋಧಕ ಜೆ.ಎಂ. ನಾಗಯ್ಯ ಅಧ್ಯಕ್ಷತೆಯಲ್ಲಿ ‘ಆಲೋಚನೆ– ವಿವೇಚನೆ’ ಗೋಷ್ಠಿ ನಡೆಯಿತು. ‘ಸಾಹಿತ್ಯ ಮತ್ತು ಸಾಮಾಜಿಕ ಪರಿವರ್ತನೆ’ ಕುರಿತು ನಿವೃತ್ತ ಪ್ರಾಚಾರ್ಯೆ ನಳನಿ ಬೆಂಗೇರಿ ‘ಜನಪದ ಸಂಸ್ಕೃತಿ’ ಕುರಿತು ಪೊಲೀಸ್ ಅಧಿಕಾರಿ ಜ್ಯೋತಿರ್ಲಿಂಗ ಹೊನಕಟ್ಟಿ ಮಾತನಾಡಿದರು. ‘ಕಿವಿಯಾಗೋಣ ಬನ್ನಿ...’ ಎಂಬ ಕವಿಗೋಷ್ಠಿಯಲ್ಲಿ 15ಕ್ಕೂ ಅಧಿಕ ಕವಿಗಳು ಕವನ ವಾಚನ ಮಾಡಿದರು. ಕವಿ ಸಿ.ಎಂ. ಮುನಿಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಮೈತ್ರೇಯಿಣಿ ಗದಿಗೆಪ್ಪಗೌಡರ ಆಶಯ ನುಡಿಗಳನ್ನು ಆಡಿದರು. ವಿಶ್ವಭಾರತಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯರು ನಾಡಗೀತೆ ಪ್ರಸ್ತುತಪಡಿಸಿದರು. ಭಕ್ತಿ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಸಮ್ಮೇಳನಾಧ್ಯಕ್ಷರೊಂದಿಗೆ ಮಾತುಕತೆ ಪದಾಧಿಕಾರಿಗಳ ಬಹಿರಂಗ ಸಭೆ ನಡೆಯಿತು.

ಸಮ್ಮೇಳನದ ನಿರ್ಣಯಗಳು

* ಪ್ರಾಥಮಿಕ ಹಂತದಿಂದ 7ನೇ ತರಗತಿಯ ವರೆಗೆ ಕನ್ನಡ ಮಾಧ್ಯಮವನ್ನು ಕಡ್ಡಾಯಗೊಳಿಸಲೇಬೇಕು

* ಕೇಂದ್ರ ಸರ್ಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಭಾಷೆಗೆ ಅವಕಾಶ ನೀಡಲೇಬೇಕು

* ಕಲೆ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಗಳು ಕನ್ನಡ– ಕನ್ನಡಿಗ– ಕರ್ನಾಟಕ ಅಸ್ಮಿತೆಯನ್ನು ಅಭಿವೃದ್ಧಿಪಡಿಸಲು ಕ್ರಿಯಾತ್ಮಕವಾಗಿ ಕೆಲಸ ಮಾಡಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.