ಹುಬ್ಬಳ್ಳಿ: ಹಳೇಕೋರ್ಟ್ ವೃತ್ತದ ಬಳಿಯ ಶಿರಡಿ ಸಾಯಿಬಾಬಾ ಮಂದಿರದ ವ್ಯವಹಾರದ ಕುರಿತು ಮನವಿ ಸಲ್ಲಿಸಲು ತೆರಳಿದ ಸಂದರ್ಭದಲ್ಲಿ, ಮಂದಿರದ ಅಧ್ಯಕ್ಷ ಮಹಾದೇವ ಮಾಶ್ಯಾಳ ಅವರು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ, ಬಸವರಾಜ ಗೌಡರ ಅವರು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

‘ಮಂದಿರದಲ್ಲಿ ಅಕ್ರಮ ವ್ಯವಹಾರಗಳು ನಡೆದಿದ್ದು, ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಯುತ್ತಿದೆ. ವರದಿ ಬರುವವರೆಗೂ ಮಂದಿರದಲ್ಲಿ ಯಾವುದೇ ವ್ಯವಹಾರ ನಡೆಸಬಾರದು ಎಂದು ಮೇ 13ರಂದು ಸಂಘಟನೆ ಜೊತೆ ಸಮಿತಿಗೆ ಮನವಿ ಸಲ್ಲಿಸಲು ಹೋದಾಗ, ಮಹಾದೇವ ಅವರು ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮೂವರ ವಿರುದ್ಧ ಪ್ರಕರಣ: ಇಲ್ಲಿಯ ಉಪ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ಅಯೂಬ್ ಬ್ಯಾಳಿ ಅವರಿಗೆ ಬ್ರೆಡ್ ಪೊಟ್ಟಣದಲ್ಲಿ ಮೊಬೈಲ್ ಹಾಗೂ ಸಿಮ್ ಸರಬರಾಜು ಮಾಡಿದ ಆರೋಪದ ಮೇಲೆ ಮೂವರ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೈದಿ ಅಯೂಬ್ ಬ್ಯಾಳಿ, ಇಲಿಯಾಸ್ ಬ್ಯಾಳಿ ಮತ್ತು ಸಮದ್ ಬಾದಾಮಿ ವಿರುದ್ಧ ಕಾರಾಗೃಹ ಅಧೀಕ್ಷಕರು ದೂರು ನೀಡಿದ್ದಾರೆ.

ಕಳವು: ಗೋಕುಲ ರಸ್ತೆಯ ಮಾಂಗಳ್ಯ ಮಾಲ್ ಎದುರು ನಿಲ್ಲಿಸಿದ್ದ ಕಾರಿನ ಹಿಂಬದಿಯ ಗ್ಲಾಸ್ ಒಡೆದು ₹2.33 ಲಕ್ಷ ಮೌಲ್ಯದ ಚಿನ್ನಾಭರಣ, ರೇಷ್ಮೇ ಸೀರೆ, ₹10 ಸಾವಿರ ಮೌಲ್ಯದ ಎರಡು ಮೊಬೈಲ್ ಕಳವು ಮಾಡಲಾಗಿದೆ ಎಂದು ಗದುಗಿನ ಅನೂಪ ಕೆಂಚನಗೌಡ್ರ ಅವರು ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಚಿನ್ನಾಭರಣ ಕಳವು: ಗೋಕುಲ ರಸ್ತೆ ಹೊಸ ಬಸ್ ನಿಲ್ದಾಣದಿಂದ ಬೆಳಗಾವಿಗೆ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದ ನಗರದ ಮೋಹನ ಕೋಟೆಕರ್ ಅವರ ಬ್ಯಾಗ್ನಲ್ಲಿದ್ದ ₹9.31 ಲಕಕ್ಷ ಮೌಲ್ಯದ ಚಿನ್ನಾಭರಣ ಕಳವು ಆಗಿದೆ. ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲ್ಯಾಪ್ಟಾಪ್ ಕಳವು: ಇಲ್ಲಿನ ಬಿವಿಬಿ ಕ್ಯಾಂಪಸ್ ಒಳಗಿರುವ ಆರ್.ಎಚ್. ಕುಲಕರ್ಣಿ ಕಟ್ಟಡದ ಕೊಠಡಿಯಲ್ಲಿದ್ದ ವಿದ್ಯಾರ್ಥಿಗಳ ₹1.10 ಲಕ್ಷ ಮೌಲ್ಯದ ಎರಡು ಲ್ಯಾಪ್ಟಾಪ್ ಕಳವು ಆಗಿದೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-24-543153577

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.