ಹುಬ್ಬಳ್ಳಿ: ‘ಹಳೇ ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸ್ ಠಾಣೆ ಸಮೀಪ ಬಾಂತಿಕಟ್ಟಾದಲ್ಲಿ ನಿರ್ಮಿಸಲಾದ ಶಂಕರ ಶಿವಾಚಾರ್ಯ ಶತಮಾನೋತ್ಸವ ಭವನದ ಉದ್ಘಾಟನಾ ಕಾರ್ಯಕ್ರಮ ಏ. 23ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ’ ಎಂದು ಕಾರ್ಯಕ್ರಮದ ಉಸ್ತುವಾರಿಸಿದ್ದಪ್ಪ ಡಂಬಳ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಿದ್ಧಿ ವಿನಾಯಕ, ನೀಲಕಂಠೇಶ್ವರ ಮೂರ್ತಿ ಪ್ರತಿಷ್ಠಾಪನೆ, ಪೂರ್ವ ಜಗದ್ಗುರುಗಳ ನವೀಕೃತ ಗದ್ದುಗೆ ಮಂಟಪ ಜನಾರ್ಪಣೆ ಕೂಡ ನಡೆಯಲಿದೆ. ಜಗದ್ಗುರು ವೀರಭಿಕ್ಷಾವರ್ತಿ ನೀಲಕಂಠ ಮಠದ ಅಧ್ಯಕ್ಷ ಶಿವಶಂಕರ ಸ್ವಾಮೀಜಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸುವರು’ ಎಂದರು.

‘ಏ.24 ರಂದು ಬೆಳಿಗ್ಗೆ ಸಮಾಜದ ಶ್ರೇಯೋಭಿವೃದ್ಧಿಗೆಿ ಸಿದ್ಧಿ ವಿನಾಯಕ, ನೀಲಕಂಠೇಶ್ವರನಿಗೆ ಮಹಾರುದ್ರಾಭಿಷೇಕ, ಏ.25ರಂದು ಬೆಳಿಗ್ಗೆ ಗುರು ನೀಲಕಂಠೇಶ್ವರ ಜಯಂತ್ಯುತ್ಸವ, 9 ಗಂಟೆಗೆ ಮೆರವಣಿಗೆ, 11.30ಕ್ಕೆ ಧರ್ಮಸಭೆ ಜರುಗಲಿದೆ. ಎಲ್ಲ ಕಾರ್ಯಕ್ರಮಗಳಲ್ಲಿ ವಿವಿಧ ಸ್ವಾಮೀಜಿಗಳು, ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಬಸವರಾಜ ಬೈಲಮ್ಮನವರ, ಬಸವರಾಜ ಭಾವಿಮನಿ, ಅಮರಯ್ಯ ನೀಲಕಂಠಮಠ, ಈರಣ್ಣ ಜಡಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-24-2022335843

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.