ಹುಬ್ಬಳ್ಳಿ: ಇಲ್ಲಿನ ಹಳೇ ಕೋರ್ಟ್ ಸಮೀಪದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ರಾಮನವಮಿ ಪ್ರಯುಕ್ತ ಒಂದು ವಾರದಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಗುರುವಾರ ಸಾಯಿಬಾಬಾ ಪಲ್ಲಕ್ಕಿ ಉತ್ಸವ ಮತ್ತು ರಥೋತ್ಸವ ಜರುಗಿತು.

ಛತ್ರಿ, ಚಾಮರ, ಹೂವಿನ ತುಪಾಕಿ, ವಾದ್ಯಮೇಳ ಸಮೇತ ಭಕ್ತರು ಪಲ್ಲಕ್ಕಿ ಹಾಗೂ ರಥದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಸಾಯಿ ಮಂದಿರದಿಂದ ದಾಜಿಬಾನಪೇಟೆ ಮಾರ್ಗವಾಗಿ ದುರ್ಗದಬೈಲು ತಲುಪಿ ಕೊಪ್ಪಿಕರ್ ರಸ್ತೆಯ ಮೂಲಕ ಮುಖ್ಯರಸ್ತೆ ಮಾರ್ಗವಾಗಿ ಮಂದಿರಕ್ಕೆ ವಾಪಸಾಯಿತು.

ಗಂಗಾವತಿಯಿಂದ ಬಂದಿದ್ದ ‘ನ್ಯೂ ಆಲ್ ಮ್ಯೂಜಿಕಲ್ ಸ್ಟಾಫ್’ ವಾದ್ಯಮೇಳದ ವಾದ್ಯನಾದ ಮತ್ತು ನರ್ತಿಸುತ್ತಾ ವಾದ್ಯ ನುಡಿಸುವುದು ಆಕರ್ಷಕವಾಗಿತ್ತು. ವಿದ್ಯುತ್ ತುಪಾಕಿ ಮೂಲಕ ಗಾಳಿಯಲ್ಲಿ ಹೂವು ಹಾರಿಸುವುದು ಸಂಭ್ರಮವನ್ನು ಇಮ್ಮಡಿಸಿತ್ತು. ಮಾರ್ಗದುದ್ದಕ್ಕೂ ಸಾರ್ವಜನಿಕರು ಪಲ್ಲಕ್ಕಿ ಮತ್ತು ರಥದ ಮುಂದೆ ನಿಂತು ನಮಿಸಿ, ದರ್ಶನ ಪಡೆದರು.

ಭಕ್ತರ ದಟ್ಟಣೆ: ಸಾಯಿಮಂದಿರದಲ್ಲಿ ರಾಮನವಮಿ ನಿಮಿತ್ತ ವಿಶೇಷ ಪೂಜಾ ವಿಧಿವಿಧಾನಗಳು ಗುರುವಾರ ಬೆಳಿಗ್ಗೆಯಿಂದಲೇ ಆರಂಭವಾದವು.ಮಂದಿರದಲ್ಲಿ ದಿನವಿಡೀ ಭಕ್ತರ ದಟ್ಟಣೆ ಇತ್ತು. ಮಹಿಳೆಯರು ಭಕ್ತಿಯಿಂದ ತೊಟ್ಟಿಲೋತ್ಸವ ನೆರವೇರಿಸಿದರು.

ಮಂದಿರದ ಪಕ್ಕದಲ್ಲಿ ಹೂವು ಹಾಗೂ ಇತರ ಪೂಜಾ ಸಾಮಗ್ರಿಗಳ ಮಾರಾಟ ಜೋರಾಗಿತ್ತು. ಮಂದಿರದೊಳಗೆ ಭಕ್ತರಿಗೆ ಅಭಿಷೇಕ ಹಾಗೂ ಪ್ರಸಾದ ವಿತರಣೆ ನಿರಂತರವಾಗಿತ್ತು. ಭಕ್ತರ ದಟ್ಟಣೆ ನಿಯಂತ್ರಿಸುವುದಕ್ಕಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು.

‘ರಾಮನವಮಿ ನಿಮಿತ್ತ ಮಾರ್ಚ್ 19ರಿಂದ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದು, ಮಾರ್ಚ್ 27ರಂದು ಮುಕ್ತಾಯ ಆಗಲಿವೆ’ ಎಂದು ಶಿರಡಿ ಸಾಯಿಬಾಬಾ ಉತ್ಸವ ಸಮಿತಿ ಅಧ್ಯಕ್ಷೆ ಪಾರ್ವತಿ ಆನಂದ ಕಮತಗಿ ತಿಳಿಸಿದ್ದಾರೆ.

ಮಂದಿರ ಸಮಿತಿಯ ಪದಾಧಿಕಾರಿಗಳಾದ ಬ್ರಜ್ ಮೋಹನ್ ಭುತಡಾ, ಸುಮಾ ಮಳಗಿ, ಸೂರಜಸಿಂಗ್ ಠಾಕೂರ್, ಪ್ರಕಾಶ ಚಳಗೇರಿ ಮತ್ತಿತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-24-453434793

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.