ಹುಬ್ಬಳ್ಳಿ: ಇಲ್ಲಿನ ಸಿದ್ಧಾರೂಢ ಮಠದ ವ್ಯವಸ್ಥಾಪಕ ಈರಣ್ಣ ತುಪ್ಪದ ಅವರನ್ನು ಅಮಾನತು ಮಾಡಿ ಮಠದ ಟ್ರಸ್ಟ್ ಕಮಿಟಿಯ ಮುಖ್ಯ ಆಡಳಿತಾಧಿಕಾರಿಯೂ ಆಗಿರುವ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಬಿ.ಎಸ್.ಭಾರತಿ ಅವರು ಆದೇಶಿಸಿದ್ದಾರೆ.

ಈರಣ್ಣ ವಿರುದ್ಧದ ಆಪಾದನೆಗಳ ಸತ್ಯಾಸತ್ಯತೆ ಬಗ್ಗೆ ಕೂಲಂಕುಶ ತನಿಖೆಯ ಅಗತ್ಯತೆ ಕಾರಣ, ಮಠದ ಟ್ರಸ್ಟ್ ಕಮಿಟಿಯ ಏ.20ರ ಸಭೆಯ ಗೊತ್ತುವಳಿ ಅನ್ವಯ ವಿಚಾರಣೆಗೆ ಆದೇಶಿಸಲಾಗಿದೆ.

‘ಈರಣ್ಣ ಅವರನ್ನು ಅಮಾನತಿನಲ್ಲಿಟ್ಟು, ಅವರ ವಿರುದ್ಧದ ಆಪಾದನೆಗಳ ಬಗ್ಗೆ ವಿಚಾರಣೆ ನಡೆಸಿ ಒಂದು ತಿಂಗಳ ಒಳಗೆ ವರದಿ ಸಲ್ಲಿಸಬೇಕು. ಅಲ್ಲದೆ, ಅವರಿಗೆ ಮಠದ ವ್ಯವಸ್ಥಾಪಕ ಕಾರ್ಯದ ನಿರ್ವಹಣೆ ಹೊರತುಪಡಿಸಿ ಮಠದ ಬೇರೆ ಕಾರ್ಯಕ್ಕೆ ತಾತ್ಪೂರ್ತಿಯಾಗಿ ನಿಯೋಜಿಸಬೇಕು’ ಎಂದು ನಿರ್ದೇಶಿಸಿದ್ದಾರೆ.

ಆರೋಪಕ್ಕೆ ಸಂಬಂಧಿಸಿದಂತೆ ತುಪ್ಪದ ಅವರು ಸಮಜಾಯಿಸಿ ನೀಡಿದ್ದರೂ, ಆರೋಪವು ಸಂಶಯಕ್ಕೆ ಕಾರಣವಾಗಿದೆ ಎಂದು ತನಿಖೆಗೆ ಆದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ಮಠದ ಸಿಬ್ಬಂದಿಗೆ ನಿಯಮಾವಳಿ ಮೀರಿ ಬಡ್ತಿ, ಮಠದ ಗೋಶಾಲೆಯ ಜಾನುವಾರುಗಳನ್ನು ಅನಧಿಕೃತವಾಗಿ ಮಾರಾಟ, ನಿಯಮ ಗಾಳಿಗೆ ತೂರಿ ಟೆಂಡರ್ ನಿರ್ವಹಣೆ, ತಮಗೆ ಬೆಂಬಲ ನೀಡದ ಟ್ರಸ್ಟಿಗಳಿಗೆ ಬ್ಲ್ಯಾಕ್ಮೇಲ್ ಮಾಡಿದ್ದಾರೆ’ ಎಂದು ಈರಣ್ಣ ವಿರುದ್ಧ ಭಕ್ತರು ಆರೋಪ ಮಾಡಿದ್ದರು.

‘ಅಮಾನತಿನ ವೇಳೆ ಅವರಿಗೆ ವ್ಯವಸ್ಥಾಪಕ ಹುದ್ದೆ ಹೊರತುಪಡಿಸಿ ಬೇರೆ ಕಾರ್ಯಕ್ಕೆ ನಿಯೋಜಿಸಬೇಕು ಎಂಬ ಆದೇಶವಿದ್ದರೂ ಬೇರೆ ಕಾರ್ಯಕ್ಕೆ ನಿಯೋಜಿಸಿಲ್ಲ. ಅಲ್ಲದೆ, ಅವರನ್ನು ಕಡ್ಡಾಯ ರಜೆಯ ಮೇಲೆ ಕಳಿಸಲಾಗಿದೆ. ಅಲ್ಲದೆ, ಈ ವೇಳೆ ಪೂರ್ಣ ವೇತನ ನೀಡಲಾಗುತ್ತಿದೆ’ ಎಂದು ಭಕ್ತರು ದೂರಿದ್ದಾರೆ.

ಮಠದ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗುರುನಾಥ ಉಳ್ಳಿಕಾಶಿ ಮಾತನಾಡಿ, ‘ ಈರಣ್ಣ ಅವರನ್ನು ಅಮಾನತು ಮಾಡಲಾಗಿದೆ. ಆದರೆ ಅವರನ್ನು ಕಡ್ಡಾಯ ರಜೆ ಮೇಲೆ ಕಳಿಸಿರುವುದು ಕಾನೂನು ಬಾಹಿರ. ಈ ವೇಳೆ ಅವರಿಗೆ ಯಾವುದೇ ವೇತನ ನೀಡಬಾರದು. ಆರೋಪಗಳ ಕುರಿತು ಪಾರದರ್ಶಕ ತನಿಖೆಯಾಗಬೇಕು. ಇದರಲ್ಲಿ ಶಾಮೀಲಾಗಿರುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-24-976857088

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.