ಹುಬ್ಬಳ್ಳಿ: ಎಸ್.ಎಸ್. ಖಾಸನಿಸ್ ಮತ್ತು ಹರ್ಷ ಎಂಟರ್ಪ್ರೈಸೆಸ್ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡುವುದಾಗಿ ಸಾರ್ವಜನಿಕರಿಂದ ₹50 ಲಕ್ಷಕ್ಕೂ ಹೆಚ್ಚು ಹಣ ಪಡೆದುಕೊಂಡು ವಂಚಿಸಿದ ಸರ್ಕಾರಿ ಶಾಲೆಯ ಶಿಕ್ಷಕ ಹಾಗೂ ಅವರ ಪತ್ನಿ ದೋಷಿಯೆಂದು ಇಲ್ಲಿಯ ಜೆಎಂಎಫ್ಸಿ 2ನೇ ನ್ಯಾಯಾಲಯ ತೀರ್ಪು ನೀಡಿದೆ.

ಕಲಘಟಗಿ ತಾಲ್ಲೂಕಿನಲ್ಲಿ ಗಂಜಿಗಟ್ಟಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದ ಅಂದಾನಪ್ಪ ದುಂದೂರು ಮತ್ತು ಅವರ ಪತ್ನಿ ಶಶಿಕಲಾ ದುಂದೂರು ಶಿಕ್ಷೆಗೆ ಒಳಗಾದ ಅಪರಾಧಿಗಳು.

ಅಂದಾನಪ್ಪ ಅವರಿಗೆ ₹20 ಸಾವಿರ ದಂಡ, ಎರಡು ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು ಶಶಿಕಲಾ ಅವರಿಗೆ ₹10 ಸಾವಿರ ದಂಡ, ಒಂದು ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ ವಂಚನೆಗೊಳಗಾದವರಿಗೆ ತಲಾ ₹40 ಸಾವಿರ ಪರಿಹಾರ, ಸರ್ಕಾರಕ್ಕೆ ₹2 ಸಾವಿರ ದಂಡ ಭರಿಸುವಂತೆ ನ್ಯಾಯಾಧೀಶ ಮಲ್ಲಿಕಾರ್ಜುನ ಅವರು ಆದೇಶ ನೀಡಿದ್ದಾರೆ.

ಅಂದಾನಪ್ಪ ಮತ್ತು ಶಶಿಕಲಾ ಅವರು ಸಾರ್ವಜನಿಕರಿಂದ ಹಣ ಹೂಡಿಕೆ ಮಾಡಿಸಿಕೊಂಡು, ದ್ವಿಗುಣಗೊಳಿಸಿ ಮರಳಿ ಕೊಡುತ್ತೇವೆ ಎಂದು ನಂಬಿಸಿದ್ದರು. ಕೆಲ ದಿನಗಳ ನಂತರ ಅವರಲ್ಲಿ ಹಣ ಕೇಳಿದಾಗ, ಹಣ ಕೊಟ್ಟಿಲ್ಲ ಎಂದು ವಂಚಿಸಿದ್ದರು.

ಈ ಕುರಿತು ಹಣ ನೀಡಿದವರು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇನ್ಸ್ಪೆಕ್ಟರ್ ಆರ್.ಬಿ. ಗಿರಿಯಪ್ಪನವರ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-24-1677583114

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.