ಹುಬ್ಬಳ್ಳಿ: ಇಲ್ಲಿಯ ಉಣಕಲ್ನ ಸದ್ಗುರು ಸಿದ್ಧಪ್ಪಜ್ಜನ ರಥೋತ್ಸವವು ಗುರುವಾರ ಯುಗಾದಿ ದಿನದಂದು ಶ್ರದ್ಧಾ–ಭಕ್ತಿಯಿಂದ ಭಕ್ತ ಸಮೂಹದ ನಡುವೆ ಅದ್ಧೂರಿಯಾಗಿ ನಡೆಯಿತು.

ರಥ ಸಾಗುವ ಹುಬ್ಬಳ್ಳಿ–ಧಾರವಾಡ ಮುಖ್ಯರಸ್ತೆಯನ್ನು ಶುಚಿಗೊಳಿಸಿ, ರಂಗೋಲಿ ಹಾಕಲಾಗಿತ್ತು. ದೇವಸ್ಥಾನದ ಮುಂಭಾಗ ಕಿಕ್ಕಿರಿದು ಸೇರಿದ್ದ ಭಕ್ತರು ‘ಸಿದ್ಧಪ್ಪಜ್ಜಗೆ ಜಯವಾಗಲಿ’ ಎಂದು ಘೋಷಣೆಗಳನ್ನು ಕೂಗುತ್ತಾ ರಥ ಎಳೆದರು. ವಾದ್ಯ-ಮೇಳ, ಮಂತ್ರ-ಪಠಣದೊಂದಿಗೆ ರಥವು ಅದ್ಧೂರಿಯಾಗಿ ಸಾಗಿತು. ಭಕ್ತರು ರಥಕ್ಕೆ ಉತ್ತತ್ತಿ, ಬಾಳೆ ಹಣ್ಣು, ಭಂಡಾರ ಎಸೆದು ಹರಕೆ ತೀರಿಸಿದರು. ಸಿಂಗರಿಸಿದ ಜೋಡೆತ್ತುಗಳು ಹಾಗೂ ಚಕ್ಕಡಿ ಉತ್ಸವಕ್ಕೆ ಕಳೆಕಟ್ಟಿತ್ತು.

ಹುಬ್ಬಳ್ಳಿ, ಧಾರವಾಡ ಸೇರಿದಂತೆ ಸ್ಥಳೀಯ ಉಣಕಲ್, ಸಾಯಿನಗರ, ಶ್ರೀನಗರ, ವಿದ್ಯಾನಗರ, ಬೈರಿದೇವರಕೊಪ್ಪದ ನಿವಾಸಿಗಳು ರಥೋತ್ಸವದಲ್ಲಿ ಭಾಗಿಯಾಗಿ, ಇಷ್ಟಾರ್ಥಗಳ ಈಡೇರಿಕೆಗೆ ಪ್ರಾರ್ಥಿಸಿದರು. ಮಕ್ಕಳು ಬಲೂನು, ಆಟಿಕೆ ಸಾಮಗ್ರಿಗಳನ್ನು ಖರೀದಿಸಿ ಸಂಭ್ರಮಿಸಿದರು. ವಿವಿಧ ಭಾಗಗಳಿಂದ ಬಂದ ಭಕ್ತರು ಪೂಜೆ ಸಲ್ಲಿಸಿದರು. ಸ್ವಾಮೀಜಿಗಳ ಹಾಗೂ ಗುರುಹಿರಿಯ ಸಮ್ಮುಖದಲ್ಲಿ ಬೆಳಿಗ್ಗೆ ಸಾಮೂಹಿಕ ವಿವಾಹ ನೆರವೇರಿತು.

ಬೆಳಿಗ್ಗೆ ಸಿದ್ಧಪ್ಪಜ್ಜನ ಪಲ್ಲಕ್ಕಿ ಉತ್ಸವ ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸಿತು. ಜಾತ್ರಾಮಹೋತ್ಸವದ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಬೆಳಿಗ್ಗೆಯಿಂದ ಸಂಜೆವರೆಗೂ ದೇವಸ್ಥಾನದಲ್ಲಿ ವಿಶೇಷಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ರಥೋತ್ಸವ ನಂತರ ಪ್ರಸಾದ ವಿತರಿಸಲಾಯಿತು.

ಯುಗಾದಿ: ವಿಶೇಷ ಪೂಜೆ ವಾಹನ ಖರೀದಿ

ಹುಬ್ಬಳ್ಳಿ: ವಾಣಿಜ್ಯ ನಗರಿ ಜನತೆ ಗುರುವಾರ ಯುಗಾದಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿತು. ಮನೆ ಮನೆಗಳಲ್ಲಿ ದೇವರಿಗೆ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ಬೆಳಿಗ್ಗೆಯೇ ಮನೆ ಎದುರು ಶುಚಿಗೊಳಿಸಿ ರಂಗೋಲಿ ಹಾಕಿ ಮಾವಿನ ತಳಿರು–ತೋರಣಗಳಿಂದ ಮನೆಯನ್ನು ಸಿಂಗರಿಸಲಾಗಿತ್ತು. ಕೆಲವರು ಕುಟುಂಬ ಸಮೇತರಾಗಿ ಸಮೀಪದ ದೇವಸಸ್ಥಾನಗಳಿಗೆ ತೆರಳಿ ಹೊಸ ವರ್ಷದ ಮೊದಲ ಪೂಜೆ ಸಲ್ಲಿಸಿದರು. ಪರಸ್ಪರ ಬೇವು–ಬೆಲ್ಲ ನೀಡಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಮನೆಯಲ್ಲಿ ಹೋಳಿಗೆ ಊಟ ಸಿದ್ಧಪಡಿಸಿ ಅಕ್ಕಪಕ್ಕದವರ ಜೊತೆ ಸವಿದರು. ನಗರದ ಸಿದ್ಧಾರೂಢಮಠ ದುರ್ಗಾದೇವಿ ದೇವಸ್ಥಾನ ಸೇರಿದಂತೆ ವಿವಿಧ ಗುಡಿಗಳಲ್ಲಿ ಬೆಳಿಗ್ಗೆಯಿಂದ ತಡರಾತ್ರಿವರೆಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಕಾರು ಹಾಗೂ ದ್ವಿ ಚಕ್ರ ವಾಹನಗಳ ಮಳಿಗೆಗಳಲ್ಲಿ ವಾಹನ ಖರೀದಿದಾರರು ಮುಗಿಬಿದ್ದಿದ್ದರು. ಮುಂಗಡವಾಗಿ ಕಾಯ್ದಿರಿಸಿದ್ದ ವಾಹನಗಳನ್ನು ಖರೀದಿಸಿ ದೇವಸ್ಥಾನಗಳಿಗೆ ತೆರಳಿ ಪೂಜೆ ಮಾಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.