ಹುಬ್ಬಳ್ಳಿ: ವಾಟ್ಸ್ಆ್ಯಪ್ ನಂಬರ್ಗೆ ಡಿಪಿ ಹಾಕುವ ವಿಚಾರಕ್ಕೆ ಪತಿ, ಪತ್ನಿ ಮಧ್ಯೆ ನಡೆದ ಜಗಳದಲ್ಲಿ ಕೋಪಗೊಂಡ ಪತಿಯು ಕುಟುಂಬದವರ ಮೇಲೆ ಆ್ಯಸಿಡ್ (ಹೈಡ್ರೋಕ್ಲೋರಿಕ್ ಆ್ಯಸಿಡ್) ದಾಳಿ ನಡೆಸಿದ್ದು, ನಾಲ್ಕು ತಿಂಗಳ ಹಸುಗೂಸು ಸೇರಿ ಐವರು ಗಾಯಗೊಂಡಿದ್ದಾರೆ.

ಇಲ್ಲಿನ ತಾರಿಹಾಳದ ವಾಜಪೇಯಿ ನಗರದಲ್ಲಿ ಶನಿವಾರ ಪ್ರಕರಣ ನಡೆದಿದೆ.

ಸುರೇಶ ಪತ್ತಾರ, ಇವರ ಪತ್ನಿ ರಾಜೇಶ್ವರಿ, ಪತ್ನಿಯ ಸಹೋದರಿಯರಾದ ಶ್ರುತಿ ಹಾಗೂ ರೇಷ್ಮಾ ಮತ್ತು ಹಸುಗೂಸಿನ ಮೇಲೆ ಆ್ಯಸಿಡ್ ಬಿದ್ದು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೆಎಂಸಿ–ಆರ್ಐ ಆಸ್ಪತ್ರೆಗೆ ದಾಖಲಿಸಿದ್ದು, ರಾಜೇಶ್ವರಿ ಪತ್ತಾರ ಅವರ ಸ್ಥಿತಿ ಗಂಭೀರವಾಗಿದೆ.

ರಾಜೇಶ್ವರಿ ಅವರು ವಾಟ್ಸ್ಆ್ಯಪ್ ಮೊಬೈಲ್ ನಂಬರ್ಗೆ ಸಹೋದರಿಯರ ಫೋಟೊವನ್ನು ಡಿಪಿ ಇಟ್ಟಿದ್ದರು. ಅದನ್ನು ತೆಗೆಯದಂತೆ ಪತಿ ಸುರೇಶ ಅವರಿಗೆ ತಾಕೀತು ಮಾಡಿದ್ದರು. ಹೀಗಿದ್ದಾಗಲೂ ಸುರೇಶ ಡಿಪಿ ಬದಲಿಸಿದ್ದರು. ಇದರಿಂದ ಅವರ ನಡುವೆ ಜಗಳ ನಡೆದು ವಿಕೋಪಕ್ಕೆ ತಲುಪಿತ್ತು. ಕೋಪಗೊಂಡ ಸುರೇಶ ತಾಮ್ರ, ಹಿತ್ತಾಳೆ ತೊಳೆಯಲು ಬಳಸುವ ಕೆಮಿಕಲ್ನಿಂದ ದಾಳಿ ನಡೆಸಿದ್ದಾರೆ. ಈ ವೇಳೆ ಅವರ ಮೇಲೂ ಕೆಮಿಕಲ್ ಬಿದ್ದು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೃಹಬಂಧನ, ಜೀವ ಬೆದರಿಕೆ: ಸೈಫರ್ ಡಿಜಿಟೆಕ್ ಕಂಪನಿಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಲಾಭ ಬರದ ಕಾರಣ ಮೂವರು ಸೇರಿ ಒಬ್ಬನನ್ನು ಗೃಹಬಂಧನದಲ್ಲಿರಿಸಿ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಗೋಕುಲ ರೋಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಯಲ್ಲಪ್ಪ ಕೆ., ಮಲ್ಲಿಕಾರ್ಜು ಎಚ್. ಮತ್ತು ಮಡಿವಾಳಪ್ಪ ಅವರ ವಿರುದ್ಧ, ಮಲ್ಲಿಕಾರ್ಜುನ ಅವರು ದೂರು ನೀಡಿದ್ದಾರೆ.

ಮಲ್ಲಿಕಾರ್ಜುನ ಅವರು ಸೈಫರ್ ಡಿಜಿಟೆಕ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ಲಾಭ ಗಳಿಸಿದ್ದು, ಆರೋಪಿತರಿಂದಲೂ ಹಣ ಹೂಡಿಕೆ ಮಾಡಿಸಿದ್ದರು. ಆರಂಭದಲ್ಲಿ ಹೆಚ್ಚಿನ ಲಾಭ ಪಡೆದಿದ್ದ ಅವರು, ನಂತರ ನಷ್ಟ ಅನುಭವಿಸಿದ್ದರು. ಈ ಕಾರಣಕ್ಕಾಗಿ ಮೇ 2ರಂದು ಮಲ್ಲಿಕಾರ್ಜುನ ಅವರನ್ನು ಕಾರಿನಲ್ಲಿ ಕರೆದೊಯ್ದು ಮೇ 7ರವರೆಗೂ ಗೃಹಬಂಧನದಲ್ಲಿಸಿ, ಜೀವ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.