ಹುಬ್ಬಳ್ಳಿ: ‘ಇಲ್ಲಿನ ಉಣಕಲ್ ಗ್ರಾಮದ 15 ವರ್ಷದ ಕುಸ್ತಿಪಟು ಮಡಿವಾಳೇಶ ಅಶೋಕ ಚಿಲ್ಲಣ್ಣವರ, ಪುದುಚೇರಿಯಲ್ಲಿ ನಡೆದ ದಕ್ಷಿಣ ಭಾರತ ಕುಸ್ತಿ ಚಾಂಪಿಯನ್ಷಿಪ್ನ 48 ಕೆ.ಜಿ. ಫ್ರೀಸ್ಟೈಲ್ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದಾನೆ’ ಎಂದು ವಾಯುಪುತ್ರ ಸ್ಫೋರ್ಟ್ಸ್ ಫೌಂಡೇಷನ್ ಮುಖ್ಯಸ್ಥ ಅಶೋಕ ಚಿಲ್ಲಣ್ಣವರ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕುಸ್ತಿ ತರಬೇತಿಯಲ್ಲಿ ತೊಡಗಿರುವ ಮಡಿವಾಳೇಶ, ಈಗಾಗಲೇ ಅನೇಕ ಕುಸ್ತಿ ಪಂದ್ಯಾವಳಿಗಳಲ್ಲಿ ಪಾಲ್ಗೊಂಡು ಉತ್ತಮ ಸಾಧನೆ ಮಾಡಿದ್ದಾರೆ. ಉಣಕಲ್ನ ಕಲ್ಮೇಶ್ವರ ಗರಡಿ ಮನೆಯಲ್ಲಿ ಕುಸ್ತಿ ತರಬೇತಿ ಆರಂಭಿಸಿದ ಇವನು, ನಂತರ ವಾಯುಪುತ್ರ ಸ್ಪೋರ್ಟ್ಸ್ ಫೌಂಡೇಷನ್ ಅಡಿಯಲ್ಲಿ ಪ್ರಾಥಮಿಕ ಕುಸ್ತಿ ತರಬೇತಿ ಪಡೆದುಕೊಂಡಿದ್ದನು’ ಎಂದರು.

‘ದೆಹಲಿ ಕ್ರೀಡಾ ವಿಶ್ವವಿದ್ಯಾಲಯದಲ್ಲಿ ತರಬೇತಿ ಪಡೆಯುತ್ತಿರುವ ಬಾಲಕನ ಪ್ರತಿಭೆ ಗುರುತಿಸಿ 5ನೇ ತರಗತಿಯಲ್ಲಿದ್ದಾಗ ಧಾರವಾಡದ ಡಿವೈಇಎಸ್ ಕ್ರೀಡಾ ಶಾಲೆಗೆ ದಾಖಲಿಸಲಾಗಿತ್ತು. 7ನೇ ತರಗತಿಯಲ್ಲಿ ದೆಹಲಿ ಸ್ಪೋರ್ಟ್ ಯುನಿವರ್ಸಿಟಿಗೆ ಆಯ್ಕೆಯಾಗಿ, ಈಗ ಹತ್ತನೇ ತರಗತಿ ವ್ಯಾಸಂಗದ ಜೊತೆಗೆ ಕುಸ್ತಿ ತರಬೇತಿಯನ್ನೂ ಮುಂದುವರಿಸಿದ್ದಾನೆ. ಏಷ್ಯನ್ ಗೇಮ್ಸ್ ಪದಕ ವಿಜೇತ ರಣವೀರಸಿಂಗ್ ಅವರು ದೆಹಲಿಯಲ್ಲಿ ಮುಖ್ಯ ತರಬೇತುದಾರರಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ’ ಎಂದು ತಿಳಿಸಿದರು.

ಕುಸ್ತಿಪಟು ಬಾಲಕ ಮಡಿವಾಳೇಶ ಚಿಲ್ಲಣ್ಣವರ, ಸುರೇಶ ಬಾಗಣ್ಣವರ, ಮಂಜುನಾಥ ಚಿಲ್ಲಣ್ಣವರ, ಸಂಜೀವ ದಮ್ಮಕ್ಕನಾಳ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-24-1470075875

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.