ಅಂತರ ಜಿಲ್ಲಾ ಕ್ರಿಕೆಟ್‌ ಟೂರ್ನಿ: ಹುಬ್ಬಳ್ಳಿ, ಬೆಳಗಾವಿ ನಗರ ತಂಡಕ್ಕೆ ಗೆಲುವು

ಶನಿವಾರ, ಏಪ್ರಿಲ್ 20, 2019
27 °C
14 ವರ್ಷದ ಒಳಗಿನವರ ಕ್ರಿಕೆಟ್‌

ಅಂತರ ಜಿಲ್ಲಾ ಕ್ರಿಕೆಟ್‌ ಟೂರ್ನಿ: ಹುಬ್ಬಳ್ಳಿ, ಬೆಳಗಾವಿ ನಗರ ತಂಡಕ್ಕೆ ಗೆಲುವು

Published:
Updated:

ಹುಬ್ಬಳ್ಳಿ: ಬೆಳಗಾವಿ ನಗರ ತಂಡ, ಕೆಎಸ್‌ಸಿಎ ಧಾರವಾಡ ವಲಯ ಆಯೋಜಿಸಿರುವ 14 ವರ್ಷದ ಒಳಗಿನವರ ಅಂತರ ಜಿಲ್ಲಾ ಕ್ರಿಕೆಟ್‌ ಟೂರ್ನಿಯ ಭಾನುವಾರದ ಪಂದ್ಯದಲ್ಲಿ 97 ರನ್‌ಗಳ ಸುಲಭ ಗೆಲುವು ಸಾಧಿಸಿತು.

ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬೆಳಗಾವಿ ತಂಡ 41 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 189 ರನ್‌ ಗಳಿಸಿತ್ತು. ಎದುರಾಳಿ ಧಾರವಾಡ ನಗರ ತಂಡ 33 ಓವರ್‌ಗಳಲ್ಲಿ 92 ರನ್‌ ಗಳಿಸುವಷ್ಟರಲ್ಲಿ ಆಲೌಟ್‌ ಆಯಿತು.

ಶನಿವಾರ ನಡೆದ ಪಂದ್ಯದಲ್ಲಿ ಹುಬ್ಬಳ್ಳಿ ನಗರ ತಂಡ ಧಾರವಾಡ ನಗರ ತಂಡದ ಎದುರು ಒಂಬತ್ತು ವಿಕೆಟ್‌ಗಳ ಗೆಲುವು ಪಡೆಯಿತು. ಮತ್ತೊಂದು ಹೋರಾಟದಲ್ಲಿ ಗದಗ ಜಿಲ್ಲಾ ತಂಡದ ಎದುರು ಕಾರವಾರ ನಗರ ತಂಡ  ಮೂರು ವಿಕೆಟ್‌ಗಳ ಜಯ ಸಾಧಿಸಿತು.

ಸಂಕ್ಷಿಪ್ತ ಸ್ಕೋರು:

ಬೆಳಗಾವಿ ನಗರ ತಂಡ 41 ಓವರ್‌ಗಳಲ್ಲಿ 7 ವಿಕೆಟ್‌ಗೆ 189 (ಉತ್ಕರ್ಷ್‌ ಶಿಂಧೆ 13, ಸಿದ್ದೇಶ ಅಸಲಕರ್‌ 20, ಪಿಯೂಷ್‌ ಗೆಹ್ಲೋಟ್‌ ಔಟಾಗದೆ 56, ಅಕ್ಷಯ ಬಾಗಡೆ 29, ಅಭಿಷೇಕ ನಿಕ್ಕಂ ಔಟಾಗದೆ 31; ಶಬಾಜ್‌ ಜಮಖಂಡಿ 11ಕ್ಕೆ1, ಬಿ. ವೇದಾಂಗ 38ಕ್ಕೆ2, ಡಿ.ಕೆ. ಸುಹಾನ್‌ 23ಕ್ಕೆ3). ಧಾರವಾಡ ನಗರ ತಂಡ 33 ಓವರ್‌ಗಳಲ್ಲಿ 92 (ಶಬಾಜ್‌ ಜಮಖಂಡಿ ಔಟಾಗದೆ 48; ಅಕ್ಷಯ ಬಾಗಡೆ 23ಕ್ಕೆ3, ಸಮರ್ಥ್‌ ಪಾವಲೆ 17ಕ್ಕೆ3, ಆಕಾಶ ಕುಲಕರ್ಣಿ 3ಕ್ಕೆ1, ಜಿ. ಜೀತ್‌ 1ಕ್ಕೆ1) ಫಲಿತಾಂಶ: ಬೆಳಗಾವಿ ನಗರ ತಂಡಕ್ಕೆ 97 ರನ್‌ ಗೆಲುವು.

ಧಾರವಾಡ ನಗರ ತಂಡ 38.4 ಓವರ್‌ಗಳಲ್ಲಿ 75 (ಅನಷ್‌ ಪಲಂಕರ 27; ಕುಣಾಲ್‌ ಶಾನಭಾಗ್ 14ಕ್ಕೆ2, ಕೆ. ಆದಿತ್ಯ 16ಕ್ಕೆ2, ಬಿ. ಮಣಿಕಂಠ 5ಕ್ಕೆ2). ಹುಬ್ಬಳ್ಳಿ ನಗರ ತಂಡ 11.5 ಓವರ್‌ಗಳಲ್ಲಿ 1 ವಿಕೆಟ್‌ಗೆ 76 (ವೀರಜ್‌ ಹಾವೇರಿ ಅಜೇಯ 21, ಅಭಯ ಕುಲಕರ್ಣಿ ಅಜೇಯ 24) ಫಲಿತಾಂಶ: ಹುಬ್ಬಳ್ಳಿ ನಗರ ತಂಡಕ್ಕೆ 9 ವಿಕೆಟ್‌ ಗೆಲುವು.

ಗದಗ ಜಿಲ್ಲಾ ತಂಡ 17.3 ಓವರ್‌ಗಳಲ್ಲಿ 101 (ಆರ್‌. ಹರ್ಷ 25, ರೋಹಿತ ಪಾಲಂಕರ 16; ವೈಶಾಖ ಕುರಬರ 44ಕ್ಕೆ2, ಶ್ರೇಯಸ್‌ ಶ್ಯಾಮನೂರ 4ಕ್ಕೆ5). ಕಾರವಾರ ನಗರ ತಂಡ 20.3 ಓವರ್‌ಗಳಲ್ಲಿ 7 ವಿಕೆಟ್‌ಗೆ 102 (ಸ್ಕಂದ ಶಾಸ್ತ್ರಿ 25; ವೆಂಕಟೇಶ ರಾಯಬಾಗ 17ಕ್ಕೆ3). ಕಾರವಾರ ನಗರ ತಂಡಕ್ಕೆ ಮೂರು ವಿಕೆಟ್‌ ಗೆಲುವು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !