ಶನಿವಾರ, ಜುಲೈ 2, 2022
25 °C

ಹುಬ್ಬಳ್ಳಿಯಲ್ಲಿ ಕಪಿಲ್ ದೇವ್ ಮೇನಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಭಾರತ ಕ್ರಿಕೆಟ್ ತಂಡದ‌ ಮಾಜಿ‌ ನಾಯಕ ಕಪಿಲ್ ದೇವ್ ಅವರು ಶನಿವಾರ ನಗರಕ್ಕೆ ಬಂದಿದ್ದು ಅವರೊಂದಿಗೆ ‌ಪೋಟೊ ತೆಗೆಯಿಸಿಕೊಳ್ಳಲು ಅಭಿಮಾನಿಗಳು ಮುಗಿ ಬಿದ್ದರು.

ಟೈಕಾನ್ ಸಮಾವೇಶದ 'ಇವನಿಂಗ್ ವಿತ್ ಲೆಜೆಂಡ್' ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವರು ಬಂದಿದ್ದಾರೆ. ಕಾರ್ಯಕ್ರಮ ಆಯೋಜನೆಯಾಗಿರುವ ನವೀನ್ ಹೋಟೆಲ್‌ನ ಸಮಾರಂಭದ ವೇದಿಕೆಯತ್ತ ಕಪಿಲ್ ದೇವ್ ಬರುತ್ತಿದ್ದಂತೆ ಅಭಿಮಾನಿಗಳು ಹಾಗೂ ಕ್ರಿಕೆಟ್ ಪ್ರೇಮಿಗಳು ಅವರನ್ನು ಸುತ್ತುವರಿದರು. ಕೆಲವರು ಪೋಟೊ ತೆಗೆಯಿಸಿಕೊಂಡರೆ, ಇನ್ನೂ ಕೆಲವರು ಆಟೊಗ್ರಾಫ್ ಪಡೆದರು. ಅಭಿಮಾನಿಗಳನ್ನು ನಿಯಂತ್ರಿಸಲು ಸಂಘಟಕರು‌ ಹರಸಾಹಸ ಪಟ್ಟರು.

ಭಾರತ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ 1983ರಲ್ಲಿ ಚಾಂಪಿಯನ್ ಆದಾಗ ಕಪಿಲ್ ದೇವ್ ನಾಯಕರಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು