ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ನಿಸರ್ಗ ಫೌಂಡೇಶನ್ ಉದ್ಘಾಟನೆ ಜೂನ್ 5ಕ್ಕೆ

Last Updated 3 ಜೂನ್ 2022, 6:44 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮನೆಗೊಂದು ಮರ ಹಾಗೂ ವಿದ್ಯೆಯಿಂದಲೇ ಪರಿವರ್ತನೆ ಸಾಧ್ಯ ಎಂಬ ಸಂಕಲ್ಪದೊಂದಿಗೆ, ನಗರದ ವೀರಾಪುರ ಓಣಿಯಲ್ಲಿ ನಿಸರ್ಗ ಫೌಂಡೇಶನ್ ಉದ್ಘಾಟನೆ ಸಮಾರಂಭವನ್ನು ಬೆಳಿಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು‌ ಫೌಂಡೇಶನ್ ಅಧ್ಯಕ್ಷ ಶಶಿಕಾಂತ ಬೆಜವಾಡ ಹೇಳಿದರು.

ಮನೆಗೊಂದು ಸಸಿ ಬೆಳೆಸಿ ಪರಿಸರ ಉಳಿಸುವುದು, ಉಚಿತ ಮನೆ ಪಾಠ (ಟ್ಯೂಶನ್ ಕ್ಲಾಸ್) ಹಾಗೂ ದಿನಂಪ್ರತಿ ಕನಿಷ್ಠ 100 ಜನರಿಗೆ ಉಚಿತ ಊಟದ ವ್ಯವಸ್ಥೆ ಮಾಡುವ ಗುರಿಯನ್ನು ಫೌಂಡೇಶನ್‌ ಹೊಂದಿದೆ ಎಂದು ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಫೌಂಡೇಶನ್ ಚಟುವಟಿಕೆಗಳಿಗಾಗಿ ನಾನು ಮತ್ತು ನನ್ನ ಸ್ನೇಹಿತರ ಬಳಗ ತಿಂಗಳಿಗೊಮ್ಮೆ ಒಂದು ದಿನದ ದುಡಿಮೆಯ ಹಣವನ್ನು ನೀಡಲಿದ್ದೇವೆ. ಜೊತೆಗೆ, ಆರ್ಥಿಕವಾಗಿ ಹಿಂದುಳಿದ ಕಡು ಬಡವರಿಗೆ ಆರೋಗ್ಯ, ಶಿಕ್ಷಣ, ಮದುವೆ ಖರ್ಚುಗಳಿಗೂ ಫೌಂಡೇಶನ ಕೈಲಾದ ಮಟ್ಟಿಗೆ ಸಹಾಯ‌ ಮಾಡಲಿದೆ. ಉಚಿತವಾಗಿ ಆರೋಗ್ಯ ತಪಾಸಣೆ ಶಿಬಿರವನ್ನು ಏರ್ಪಡಿಸಲಿದೆ ಎಂದರು‌.

ಫೌಂಡೇಶನ್ ನ ಪ್ರಶಾಂತ ಸುಳ್ಳದ, ಜಗದೀಶ ಅಡವಿಮಠ, ರಾಜು ವಾವಳಕರ, ಗೋವಿಂದ ಬೇಂದ್ರೆ, ಇಮ್ಮಿಯಾಜ ಬಿಜಾಪೂರ, ದಾದಾಪೀರ, ಈರಣ್ಣ ಅಕ್ಕಿ, ಅಜ್ಜಪ್ಪ ಹಿರೇಮಠ, ಶಿವಾನಂದ ಮಮ್ಮಿಗಟ್ಟ, ಮಂಜು ನಾಝರೆ, ನಾಗರಾಜ ಅಂಬಿಗೇರ, ಮಹೇಶ ಭಜಂತ್ರಿ ಹಾಗೂ ಮಹೇಶ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT