ಗುರುವಾರ , ಡಿಸೆಂಬರ್ 5, 2019
20 °C
ಕೆಎಸ್‌ಸಿಎ ಮೊದಲ ಡಿವಿಷನ್‌ ಕ್ರಿಕೆಟ್‌: ವೀರೇಂದ್ರ ಶತಕ

ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್‌ಗೆ ಭರ್ಜರಿ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ವೀರೇಂದ್ರ ಸಾಂಬ್ರಾಣಿ (123 ರನ್‌) ಶತಕದ ನೆರವಿನಿಂದ ಸವಾಲಿನ ಮೊತ್ತ ಕಲೆಹಾಕಿದ್ದ ಹುಬ್ಬಳ್ಳಿ ಸ್ಪೋರ್ಟ್ಸ್‌ ಕ್ಲಬ್‌ (ಎಚ್‌ಎಸ್‌ಸಿ) ‘ಎ’ ತಂಡ, ಕೆಎಸ್‌ಸಿಎ ಧಾರವಾಡ ವಲಯ ಆಯೋಜಿಸಿರುವ ಮೊದಲ ಡಿವಿಷನ್‌ ಕ್ರಿಕೆಟ್ ಟೂರ್ನಿಯ ಬುಧವಾರದ ಪಂದ್ಯದಲ್ಲಿ 304 ರನ್‌ಗಳ ಭರ್ಜರಿ ಗೆಲುವು ಪಡೆದಿದೆ.

ರೈಲ್ವೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಎಚ್‌ಎಸ್‌ಸಿ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 402 ರನ್‌ ಕಲೆಹಾಕಿತು. ಎದುರಾಳಿ ಬೆಳಗಾವಿಯ ನೀನಾ ಸ್ಪೋರ್ಟ್ಸ್‌ ಕ್ಲಬ್‌ 33.1 ಓವರ್‌ಗಳಲ್ಲಿ 98 ರನ್‌ ಗಳಿಸಿ ತನ್ನ ಹೋರಾಟ ಮುಗಿಸಿತು. ವಿಜೇತ ತಂಡದ ವಿಠ್ಠಲ್‌ ಹಬೀಬ್‌ (79), ರಾಜೂ ಭಟ್ಕಳ (58) ತಂಡ ಸವಾಲಿನ ಮೊತ್ತ ಕಲೆಹಾಕಲು ಕಾರಣರಾದರು. ಇದೇ ತಂಡದ ಕಿಶೋರ ಕಾಮತ್‌ (17ಕ್ಕೆ4) ಮತ್ತು ರಜತ್‌ ಹೆಗ್ಡೆ (32ಕ್ಕೆ3) ಚುರುಕಿನ ಬೌಲಿಂಗ್‌ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ದಿನದ ಇತರ ಪಂದ್ಯಗಳಲ್ಲಿ ಧಾರವಾಡದ ಕ್ರಿಕೆಟ್‌ ಕ್ಲಬ್‌ ಆಫ್‌ ಕರ್ನಾಟಕ ‘ಎ’ ತಂಡ ಬಿಡಿಕೆ ಸ್ಪೋರ್ಟ್ಸ್‌ ಫೌಂಡೇಷನ್‌ ‘ಎ’ ತಂಡದ ಮೇಲೂ, ಧಾರವಾಡದ ಎಸ್‌ಡಿಎಂ ಕ್ರಿಕೆಟ್‌ ಅಕಾಡೆಮಿ ‘ಎ’ ತಂಡ ಬೆಳಗಾವಿಯ ಯೂನಿಯನ್‌ ಜಿಮ್ಖಾನ ವಿರುದ್ಧವೂ ಗೆಲುವು ಸಾಧಿಸಿದವು.

ಸೋಮವಾರ ನಡೆದ ಪಂದ್ಯಗಳಲ್ಲಿ ಎಸ್‌ಡಿಎಂ ‘ಎ’ ತಂಡ ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿ ‘ಎ’ತಂಡದ ಮೇಲೂ, ಹುಬ್ಬಳ್ಳಿಯ ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌ ‘ಎ’ ತಂಡ ಬೆಳಗಾವಿಯ ಅಮೃತ ಪೋತದಾರ ಕ್ರಿಕೆಟ್‌ ಕ್ಲಬ್ ವಿರುದ್ಧವೂ, ಬೆಳಗಾವಿ ಸ್ಪೋರ್ಟ್ಸ್ ಕ್ಲಬ್‌ ‘ಎ’ ತಂಡ ಬೆಳಗಾವಿಯ ಯೂನಿಯನ್‌ ಜಿಮ್ಖಾನ ವಿರುದ್ಧವೂ ಗೆಲುವು ಸಾಧಿಸಿದವು.

ಸಂಕ್ಷಿಪ್ತ ಸ್ಕೋರು: ಬಿಡಿಕೆ ಸ್ಪೋರ್ಟ್‌ ಫೌಂಡೇಷನ್‌ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 236 (ಮೊಹಮ್ಮದ್ ತಹಾ 84, ವೆಂಕಟೇಶ ನಾಗಪುರ 40, ಶಿವಾನಂದ ನಾಯಕ ಔಟಾಗದೆ 29; ಶ್ರೇಯಸ್‌ ಮುರ್ಡೇಶ್ವರ 38ಕ್ಕೆ4, ಲಿಖಿತ್‌ ಬನ್ನೂರ 35ಕ್ಕೆ2). ಕ್ರಿಕೆಟ್‌ ಕ್ಲಬ್‌ ಆಫ್‌ ಕರ್ನಾಟಕ ‘ಎ’ 48.3 ಓವರ್‌ಗಳಲ್ಲಿ 6ವಿಕೆಟ್‌ಗೆ 242 (ಸಮರ್ಥ ಊಟಿ 123; ಹಾರ್ದಿಕ್‌ ಓಜಾ 22ಕ್ಕೆ4, ಶಿವಾನಂದ ನಾಯಕ 28ಕ್ಕೆ2, ಪರೀಕ್ಷಿತ್‌ ಶೆಟ್ಟಿ 34ಕ್ಕೆ2). ಫಲಿತಾಂಶ: ಸಿಸಿಕೆ ತಂಡಕ್ಕೆ 4 ವಿಕೆಟ್‌ ಗೆಲುವು.

ಬೆಳಗಾವಿಯ ಯೂನಿಯನ್‌ ಜಿಮ್ಖಾನ 36.2 ಓವರ್‌ಗಳಲ್ಲಿ 142 (ವೈಷ್ಣವ ಸಂಘಮಿತ್ರ 33, ವಿನೀತ್‌ ಅದ್ಕೂರಕರ್ 24; ಸಾಗರ ಮುರಗೋಡ 40ಕ್ಕೆ4, ಡಿ. ಬಸವರಾಜ 15ಕ್ಕೆ2). ಎಸ್‌ಡಿಎಂ ಅಕಾಡೆಮಿ ‘ಎ’ 28 ಓವರ್‌ಗಳಲ್ಲಿ 3 ವಿಕೆಟ್‌ಗೆ 143 (ಪರೀಕ್ಷಿತ್‌ ಒಕ್ಕುಂದ 40, ಜಿ. ಅಜೀಮ್ 32; ಎಸ್‌. ಸದಾನಂದ 45ಕ್ಕೆ2, ರಿಷಿ ರಜಪೂತ್ 17ಕ್ಕೆ1). ಫಲಿತಾಂಶ: ಎಸ್‌ಡಿಎಂ ‘ಎ’ ತಂಡಕ್ಕೆ 7 ವಿಕೆಟ್‌ ಗೆಲುವು.

ಪ್ರತಿಕ್ರಿಯಿಸಿ (+)